ದೇಶ

ರೈಲ್ವೆ ಉದ್ಯೋಗಿಗಳಿಗೆ 78 ದಿನಗಳ ವೇತನ ಬೋನಸ್ ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ!

Srinivas Rao BV

ನವದೆಹಲಿ: ರೈಲ್ವೆ ನೌಕರರಿಗೆ ಕೇಂದ್ರ ಸರ್ಕಾರ ಬೋನಸ್ ನೀಡುವುದಕ್ಕೆ ಅನುಮೋದನೆ ನೀಡಿದೆ. 

ಇದು 78 ದಿನಗಳ ಪ್ರೊಡಕ್ಟಿವಿಟಿ ಲಿಂಕ್ಡ್ ಬೋನಸ್ ಗೆ(PLB) ಇದು ಸಮಾನವಾಗಿದ್ದು, 11.27 ಲಕ್ಷ ನಾನ್ ಗೆಜೆಟೆಡ್ ರೈಲ್ವೆ ನೌಕರರಿಗೆ ಪಿಎಲ್ ಬಿ ಬೋನಸ್ ದೊರೆಯಲಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. ಆರ್ಥಿಕತೆಗೆ ವೇಗವರ್ಧಕಗಳಂತೆ ಕೆಲಸ ಮಾಡಿದ್ದ, ಪ್ರಯಾಣಿಕ ಮತ್ತು ಸರಕು ಸೇವೆಗಳ ಕಾರ್ಯಕ್ಷಮತೆಯಲ್ಲಿ ರೈಲ್ವೆ ನೌಕರರು ಪ್ರಮುಖ ಪಾತ್ರ ವಹಿಸಿದ್ದರು. 

ಲಾಕ್ ಡೌನ್ ಅವಧಿಯಲ್ಲಿ ಆಹಾರ, ಗೊಬ್ಬರ, ಕಲ್ಲಿದ್ದಲು ಹಾಗೂ ಇನ್ನೂ ಅತ್ಯಗತ್ಯ ವಸ್ತುಗಳ ನಿರಂತರ ಸಾಗಣೆಯಲ್ಲಿ ರೈಲ್ವೆ ನೌಕರರು ಗಣನೀಯ ಕೆಲಸ ಮಾಡಿದ್ದರು ಎಂದು ಈ ಹಿಂದೆ ರೈಲ್ವೆ ಇಲಾಖೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಕಳೆದ ಮೂರು ವರ್ಷಗಳಲ್ಲಿ ರೈಲ್ವೆ ಸೂಕ್ತ ನೀತಿ ಉಪಕ್ರಮಗಳ ಮೂಲಕ ಸರಕು ಸಾಗಣೆಯಲ್ಲಿ ಮಾರುಕಟ್ಟೆ ಪಾಲನ್ನು ಮರಳಿ ಪಡೆಯಲು ಸಾಕಷ್ಟು ಕ್ರಮಗಳನ್ನು ಕೈಗೊಂಡಿತ್ತು. ಇದರ ಪರಿಣಾಮ 2022-23 ರಲ್ಲಿ ರೈಲ್ವೆ ಆದಾಯದಲ್ಲಿ ವೇಗವನ್ನು ಮರಳಿ ಪಡೆದಿದೆ. 

2021-22 ನೇ ಆರ್ಥಿಕ ಸಾಲಿನಲ್ಲಿ ರೈಲ್ವೆ 184 ಮಿಲಿಯನ್ ಟನ್‌ಗಳಷ್ಟು ಸರಕು ಸಾಗಣೆಯನ್ನು ಸಾಧಿಸಿತ್ತು. ಇದು ಈ ವರೆಗಿನ ಅತ್ಯಧಿಕ ಪ್ರಮಾಣದ ಸರಕು ಸಾಗಣೆಯಾಗಿದೆ. ಲಾಕ್ ಡೌನ್, ಕೋವಿಡ್ ಸಂದರ್ಭದಲ್ಲಿ ರೈಲ್ವೆ ನೌಕರರ ಶ್ರಮವನ್ನು ಗುರುತಿಸಿ, ಅವರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪಿಎಲ್ ಬಿಯನ್ನು ನೀಡಲಾಗುತ್ತಿದೆ. 

SCROLL FOR NEXT