ದೇಶ

ನಾಳೆ ಮನೀಶ್ ಸಿಸೋಡಿಯಾ ಬಂಧನ: ಸಿಬಿಐ ಸಮನ್ಸ್ ನಂತರ ಎಎಪಿ

Lingaraj Badiger

ನವದೆಹಲಿ: ವಿವಾದಿತ ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಸೋಮವಾರ ಬೆಳಗ್ಗೆ 11 ಗಂಟೆಗೆ ಕೇಂದ್ರ ತನಿಖಾ ಸಂಸ್ಥೆ ಮುಂದೆ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಸಮನ್ಸ್ ನೀಡಿದೆ.

ಸಮನ್ಸ್  ನಂತರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಆಮ್ ಆದ್ಮಿ ಪಕ್ಷದ ಹಿರಿಯ ನಾಯಕ ಸೌರಭ್ ಭಾರದ್ವಾಜ್ ಅವರು, ನಾಳೆ ಮನೀಶ್  ಸಿಸೋಡಿಯಾ ಅವರನ್ನು ಬಂಧಿಸಲಾಗುವುದು ಎಂದು ಹೇಳಿದ್ದಾರೆ. 

ಬಿಜೆಪಿ ಮತ್ತು ಎಎಪಿ ನಡುವೆ ನೇರ ಸ್ಪರ್ಧೆಯಲ್ಲಿರುವ ಮುಂಬರುವ ಗುಜರಾತ್ ಚುನಾವಣೆಗೂ ಸಮನ್ಸ್ ಗೂ ಸಂಬಂಧವಿದೆ. ಬಿಜೆಪಿಯವರಿಗೆ ಆಪ್ ಭಯ ಇದೆ ಎಂದಿದ್ದಾರೆ.

ಇತ್ತೀಚಿನ ಸಮನ್ಸ್ ಗೆ ಪ್ರತಿಕ್ರಿಯಿಸಿದ ಮನೀಶ್ ಸಿಸೋಡಿಯಾ, ಈ ಹಿಂದೆ ಸಿಬಿಐ ದಾಳಿಗಳಲ್ಲಿ ಏನೂ ಕಂಡುಬಂದಿಲ್ಲ. ಆದರೂ ತಾವು ತನಿಖಾ ಸಂಸ್ಥೆಗೆ ಸಂಪೂರ್ಣ ಸಹಕಾರವನ್ನು ನೀಡುವುದಾಗಿ ಹೇಳಿದ್ದಾರೆ.

“ಸಿಬಿಐ ನನ್ನ ಮನೆಯ ಮೇಲೆ 14 ಗಂಟೆಗಳ ಕಾಲ ದಾಳಿ ನಡೆಸಿತು. ಅದರಿಂದ ಏನೂ ಹೊರಬರಲಿಲ್ಲ. ಅವರು ನನ್ನ ಬ್ಯಾಂಕ್ ಲಾಕರ್ ಅನ್ನು ಹುಡುಕಿದರು, ಅಲ್ಲೂ ಏನೂ ಕಂಡುಬಂದಿಲ್ಲ. ಅವರಿಗೆ ನನ್ನ ಗ್ರಾಮದಲ್ಲಿ ಏನೂ ಕಂಡುಬಂದಿಲ್ಲ. ಈಗ ಅವರು ನಾಳೆ ಬೆಳಗ್ಗೆ 11 ಗಂಟೆಗೆ ಸಿಬಿಐ ಕೇಂದ್ರ ಕಚೇರಿಗೆ ನನ್ನನ್ನು ಕರೆದಿದ್ದಾರೆ. ನಾನು ಹೋಗಿ ನನ್ನ ಸಂಪೂರ್ಣ ಸಹಕಾರವನ್ನು ನೀಡುತ್ತೇನೆ, ”ಎಂದು ಸಿಸೋಡಿಯಾ ಅವರು ಟ್ವೀಟ್ ಮಾಡಿದ್ದಾರೆ.

SCROLL FOR NEXT