ದೇಶ

ಭಾರತದ ಆರ್ಥಿಕತೆಯ ಮೂಲಭೂತ ಅಂಶಗಳು ಉತ್ತಮ ಸ್ಥಿತಿಯಲ್ಲಿವೆ: ನಿರ್ಮಲಾ ಸೀತಾರಾಮನ್

Sumana Upadhyaya

ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆ ವ್ಯವಹಾರದಲ್ಲಿ ಡಾಲರ್ ಮೌಲ್ಯ ವರ್ಧನೆಯಾಗುತ್ತಿರುವಾಗ ಭಾರತೀಯ ರೂಪಾಯಿ ಮೌಲ್ಯ ಕೂಡ ವರ್ಧನೆಯಾಗುತ್ತಿದೆ. ಭಾರತದ ಆರ್ಥಿಕತೆಯ ಬುಡ ಗಟ್ಟಿಯಾಗಿದೆ, ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ಹಣದುಬ್ಬರ ಕಡಿಮೆಯಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಪಾದಿಸಿದ್ದಾರೆ.

ವಾಷಿಂಗ್ಟನ್ ನಲ್ಲಿ ವಿಶ್ವ ಬ್ಯಾಂಕ್ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ವಾರ್ಷಿಕ ಸಭೆಯಲ್ಲಿ ಭಾಗವಹಿಸಿ ಸ್ವದೇಶಕ್ಕೆ ಮರಳಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದ ಹಣದುಬ್ಬರ ನಿರ್ವಹಣೆ ಮಟ್ಟದಲ್ಲಿದೆ. ಭಾರತದ ಆರ್ಥಿಕತೆಯ ಮೂಲ ಉತ್ತಮವಾಗಿದೆ. ಸೂಕ್ಷ್ಮ ಆರ್ಥಿಕತೆ ಮೂಲಭೂತತೆ ಉತ್ತಮವಾಗಿದೆ. ವಿದೇಶಿ ವಿನಿಮಯ ಕೂಡ ಚೆನ್ನಾಗಿದೆ ಎಂದರು.

ಅಂತಾರಾಷ್ಟ್ರೀಯ ಸಭೆಯ ಹೊರಗೆ ಸಚಿವೆ ನಿರ್ಮಲಾ ಸೀತಾರಾಮನ್ 24 ದ್ವಿಪಕ್ಷೀಯ ಮತ್ತು 12ಕ್ಕೂ ಅಧಿಕ ಬಹುಹಂತೀಯ ಸಭೆಗಳನ್ನು ನಡೆಸಿದ್ದರು. ದೇಶದ ಹಣದುಬ್ಬರವನ್ನು ಶೇಕಡಾ 6ಕ್ಕಿಂತಲೂ ಕಡಿಮೆ ತರುವ ಉದ್ದೇಶವಿದ್ದು ಸರ್ಕಾರ ಈ ನಿಟ್ಟಿನಲ್ಲಿ ಪ್ರಯತ್ನಪಡುತ್ತಿದೆ ಎಂದರು.

ಟರ್ಕಿಯಂತಹ ದೇಶಗಳು ಎರಡಂಕಿಯ ಹಣದುಬ್ಬರದ ಸಮಸ್ಯೆಯನ್ನು ಹೊಂದಿದೆ ಎಂದ ಸಚಿವೆ ಬಾಹ್ಯ ಕಾರಣಗಳಿಂದ ಹಲವು ದೇಶಗಳು ತೀವ್ರ ಹೊಡೆತಕ್ಕೆ ಸಿಲುಕಿವೆ. ಆದ್ದರಿಂದ, ಪ್ರಪಂಚದ ಉಳಿದ ಭಾಗಗಳಿಗೆ ಹೋಲಿಸಿದರೆ ನಾವು ಇರುವ ಸ್ಥಾನದ ಬಗ್ಗೆ ನಾವು ಜಾಗೃತರಾಗಿರಬೇಕು. ವಿಶೇಷವಾಗಿ ವಿತ್ತೀಯ ಕೊರತೆಯ ಬಗ್ಗೆ ಬಹಳ ಜಾಗೃತವಾಗಿದ್ದೇವೆ ಎಂದರು. 

ಭಾರತೀಯ ರೂಪಾಯಿಗಳ ಕುಸಿತದ ಕುರಿತು ಮತ್ತೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಡಾಲರ್ ಬಲಗೊಳ್ಳುತ್ತಿರುವುದೇ ಇದಕ್ಕೆ ಕಾರಣ ಎಂದು ಹೇಳಿದರು. ಎಲ್ಲ ಇತರ ಕರೆನ್ಸಿಗಳು ಡಾಲರ್ ವಿರುದ್ಧ ಕಾರ್ಯನಿರ್ವಹಿಸುತ್ತಿವೆ. ನಾನು ತಾಂತ್ರಿಕತೆಗಳ ಬಗ್ಗೆ ಮಾತನಾಡುವುದಿಲ್ಲ, ಆದರೆ ಭಾರತದ ರೂಪಾಯಿ ಬಹುಶಃ ಈ ಡಾಲರ್ ದರವನ್ನು ತಡೆದುಕೊಂಡಿದೆ ಎಂಬುದು ಸತ್ಯ, ಡಾಲರ್ ಬಲವರ್ಧನೆಯ ಪರವಾಗಿ ವಿನಿಮಯ ದರವಿದೆ ಭಾರತೀಯ ರೂಪಾಯಿ ಇತರ ಅನೇಕ ಉದಯೋನ್ಮುಖ ಮಾರುಕಟ್ಟೆ ಕರೆನ್ಸಿಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು. 

SCROLL FOR NEXT