ಪ್ರಾತಿನಿಧಿಕ ಚಿತ್ರ 
ದೇಶ

10 ದಿನದೊಳಗೆ ಜಾಗ ಖಾಲಿ ಮಾಡುವಂತೆ ಲಾರ್ಡ್ ಹನುಮಂತನಿಗೆ ರೈಲ್ವೆ ಅಧಿಕಾರಿಗಳಿಂದ ನೋಟಿಸ್!

ಇತ್ತೀಚೆಗೆ ಧನ್‌ಬಾದ್ ರೈಲು ವಿಭಾಗದ ಸಹಾಯಕ ಇಂಜಿನಿಯರ್ ಆನಂದ್ ಕುಮಾರ್ ಪಾಂಡೆ ಅವರು ರೈಲ್ವೆಗೆ ಸೇರಿದ ಬೇಕರ್ ಬಂದ್ ಪ್ರದೇಶದಲ್ಲಿ ದೇವಸ್ಥಾನ ನಿರ್ಮಿಸಿರುವುದಕ್ಕಾಗಿ ತೆರವುಗೊಳಿಸಲು ದೇವರಿಗೆ ನೋಟಿಸ್ ನೀಡಿದ್ದಾರೆ.

ರಾಂಚಿ: 2012ರಲ್ಲಿ ತೆರೆಕಂಡ ಬಾಲಿವುಡ್ ಚಲನಚಿತ್ರ ಓಹ್ ಮೈ ಗಾಡ್ ಅನ್ನು ನೆನಪಿಸಿಕೊಳ್ಳಿ! ಆಸ್ಟ್ರೇಲಿಯನ್ ಚಿತ್ರ ದಿ ಮ್ಯಾನ್ ಹೂ ಸ್ಯೂಡ್ ಗಾಡ್? ಪ್ರೇರಿತ ಚಿತ್ರದಲ್ಲಿ ಪರೇಶ್ ರಾವಲ್ ಮತ್ತು ಅಕ್ಷಯ್ ಕುಮಾರ್ ನಟಿಸಿದ್ದರು. ಆದರೆ, ಇದೀಗ ಲಾರ್ಡ್ ಹನುಮಂತನ ಮೇಲೆ ಮೊಕದ್ದಮೆ ಹೂಡಿಲ್ಲ. ಬದಲಿಗೆ, ತೆರವು ನೋಟಿಸ್ ನೀಡಲಾಗಿದೆ.

ಇತ್ತೀಚೆಗೆ ಧನ್‌ಬಾದ್ ರೈಲು ವಿಭಾಗದ ಸಹಾಯಕ ಇಂಜಿನಿಯರ್ ಆನಂದ್ ಕುಮಾರ್ ಪಾಂಡೆ ಅವರು ರೈಲ್ವೆಗೆ ಸೇರಿದ ಬೇಕರ್ ಬಂದ್ ಪ್ರದೇಶದಲ್ಲಿ ದೇವಸ್ಥಾನ ನಿರ್ಮಿಸಿರುವುದಕ್ಕಾಗಿ ತೆರವುಗೊಳಿಸಲು ದೇವರಿಗೆ ನೋಟಿಸ್ ನೀಡಿದ್ದಾರೆ.

ಗೋಡೆಗೆ ಅಂಟಿಸಿರುವ ನೋಟಿಸ್‌ನಲ್ಲಿ, ನಿಮ್ಮ ದೇವಸ್ಥಾನ ರೈಲ್ವೆ ಇಲಾಖೆಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದೆ. ಹೀಗಾಗಿ 10 ದಿನದೊಳಗೆ ದೇವಸ್ಥಾನವನ್ನು ತೆರವುಗೊಳಿಸದಿದ್ದರೆ, ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದ್ದು, ನೋಟಿಸ್‌ನಲ್ಲಿ ಅತಿಕ್ರಮಣಕಾರ ಹನುಮಂತ ಎಂದು ಹೆಸರಿಸಲಾಗಿದೆ.

ಪಾಂಡೆ ಅವರು ದೇವಾಲಯದ ಸುತ್ತಲೂ ತಾತ್ಕಾಲಿಕವಾಗಿ ವಾಸಿಸುತ್ತಿರುವ ಇತರ 27 ಕುಟುಂಬಗಳಿಗೂ ನೋಟಿಸ್ ನೀಡಿದ್ದಾರೆ. ದೇವಸ್ಥಾನದ ಗೋಡೆಗೆ ಹನುಮಾನ್‌ ಜಿ ಅವರಿಗೆ ಎಂದಿರುವ ನೋಟೀಸ್ ಅಂಟಿಸಿರುವುದನ್ನು ಗಮನಿಸಿದ ಸ್ಥಳೀಯರು ಪ್ರತಿಭಟನೆ ಆರಂಭಿಸಿದಾಗ ವಿಷಯ ಬೆಳಕಿಗೆ ಬಂದಿದೆ. ರೈಲ್ವೆ ಅಧಿಕಾರಿಗಳು ತಕ್ಷಣ ತಮ್ಮ ತಪ್ಪನ್ನು ಅರಿತು ಅದನ್ನು ತೆಗೆದುಹಾಕಿದ್ದಾರೆ.

'ಇದು ಕಣ್ತಪ್ಪಿನಿಂದ ಆಗಿರುವ ದೋಷವಾಗಿದೆ. ಜನರ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ಇರಲಿಲ್ಲ. ಮುಂದೆ ಇಂತಹ ತಪ್ಪು ನಡೆಯದಂತೆ ಎಚ್ಚರಿಕೆ ವಹಿಸಲಾಗುವುದು. ಅತಿಕ್ರಮಣಕಾರರಿಂದ ಭೂಮಿಯನ್ನು ತೆರವುಗೊಳಿಸಲು ಮಾತ್ರ ನಾವು ಪ್ರಯತ್ನಿಸುತ್ತಿದ್ದೇವೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜೀನಾಮೆ ಬಗ್ಗೆ ಖುದ್ದು ಸುಳಿವು ನೀಡಿದ CM ಸಿದ್ದರಾಮಯ್ಯ; ಸಾಮಾಜಿಕ ಮಾಧ್ಯಮದಲ್ಲಿ ಮಹತ್ವದ ಪೋಸ್ಟ್​!

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

ಸಿಎಂ ಸಿದ್ದರಾಮಯ್ಯ ಪದತ್ಯಾಗ; ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಹತ್ವದ ಸಭೆ

Mysuru Rain: ಸಿಡಿಲು ಬಡಿದು ಬೆಂಗಳೂರಿನ ಟೆಕ್ಕಿ ಸಾವು

SCROLL FOR NEXT