ಪ್ರಧಾನಿ ಮೋದಿ 
ದೇಶ

ಗುಜರಾತ್‌ನಲ್ಲಿ ಭಾರತ-ಪಾಕ್ ಗಡಿ ಬಳಿ ಹೊಸ ವಾಯುನೆಲೆ, 411 ರಕ್ಷಣಾ ಸಂಬಂಧಿತ ಸರಕುಗಳ ಸ್ಥಳೀಯ ಉತ್ಪಾದನೆ: ಪ್ರಧಾನಿ ಮೋದಿ

ಭಾರತ ದೇಶ ಬದಲಾಗಿದ್ದು, ದೇಶವು ಬಹಳ ದೂರ ಸಾಗಿದೆ, ಮೊದಲು ನಾವು ಪಾರಿವಾಳಗಳನ್ನು ಬಿಡುತ್ತಿದ್ದೆವು, ಈಗ ನಾವು ಚೀತಾಗಳನ್ನು ಬಿಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾ ಹೇಳಿದ್ದಾರೆ.

ಗಾಂಧಿನಗರ: ಭಾರತ ದೇಶ ಬದಲಾಗಿದ್ದು, ದೇಶವು ಬಹಳ ದೂರ ಸಾಗಿದೆ, ಮೊದಲು ನಾವು ಪಾರಿವಾಳಗಳನ್ನು ಬಿಡುತ್ತಿದ್ದೆವು, ಈಗ ನಾವು ಚೀತಾಗಳನ್ನು ಬಿಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾ ಹೇಳಿದ್ದಾರೆ.

ಭಾರತ-ಪಾಕಿಸ್ತಾನ ಗಡಿಯ ಸಮೀಪ ಉತ್ತರ ಗುಜರಾತ್‌ನಲ್ಲಿ ಹೊಸ ವಾಯುನೆಲೆಗೆ ಬುಧವಾರ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ಮೋದಿ, ಈ ಕೇಂದ್ರ ದೇಶದ ಭದ್ರತೆಗೆ ಪರಿಣಾಮಕಾರಿ ಕೇಂದ್ರವಾಗಿ ಹೊರಹೊಮ್ಮಲಿದೆ ಎಂದು ಹೇಳಿದರು.

ಗುಜರಾತ್ ರಾಜಧಾನಿ ಗಾಂಧಿನಗರದಲ್ಲಿ ಡಿಫೆನ್ಸ್ ಎಕ್ಸ್‌ಪೋ 2022 ಅನ್ನು ಉದ್ಘಾಟಿಸಿದ ನಂತರ ಮಾತನಾಡಿದ ಪ್ರಧಾನಿ ಮೋದಿ, ರಕ್ಷಣಾ ಪಡೆಗಳು ಆಮದು ಮಾಡಿಕೊಳ್ಳಲಾಗದ ಇನ್ನೂ 101 ವಸ್ತುಗಳ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ಹೇಳಿದರು. ಇದರೊಂದಿಗೆ 411 ರಕ್ಷಣಾ ಸಂಬಂಧಿತ ಸರಕುಗಳನ್ನು ಸ್ಥಳೀಯವಾಗಿ ಮಾತ್ರ ಖರೀದಿಸಬಹುದಾಗಿದೆ ಎಂದರು.

 "ಇದು ಭಾರತೀಯ ರಕ್ಷಣಾ ಉದ್ಯಮಕ್ಕೆ ಪ್ರಮುಖ ಉತ್ತೇಜನವನ್ನು ನೀಡುತ್ತದೆ. ಇದು ಅಭೂತಪೂರ್ವ ಡಿಫೆಕ್ಸ್‌ಪೋ ಆಗಿದ್ದು, ಭಾರತೀಯ ಕಂಪನಿಗಳು ಮಾತ್ರ ಮೊದಲ ಬಾರಿಗೆ ಇದರಲ್ಲಿ ಭಾಗವಹಿಸುತ್ತಿವೆ. ಉತ್ತರದ ಬನಸ್ಕಾಂತದಲ್ಲಿರುವ ದೀಸಾದಲ್ಲಿ ಏರ್ ಬೇಸ್ ಬರಲಿದೆ. ಗುಜರಾತ್ ದೇಶದ ಭದ್ರತೆಗೆ ಪರಿಣಾಮಕಾರಿ ಕೇಂದ್ರವಾಗಿ ಹೊರಹೊಮ್ಮಲಿದೆ. ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ರಕ್ಷಣಾ ಉತ್ಪನ್ನಗಳ ರಫ್ತು 8 ಪಟ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು.

ಅಂತೆಯೇ  "ಮೊದಲು ನಾವು ಪಾರಿವಾಳಗಳನ್ನು ಬಿಡುತ್ತಿದ್ದೆವು ಮತ್ತು ಈಗ ನಾವು ಚೀತಾಗಳನ್ನು ಬಿಡುತ್ತೇವೆ" ಎಂದು ದೇಶವು ಬಹಳ ದೂರ ಸಾಗಿದೆ ಎಂದು ಅವರು ಹೇಳಿದರು.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಪರಸ್ತ್ರೀ ಮೋಹ, ನಂಬಿಕೆ ದ್ರೋಹ: ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಕೆಲಸದ ಹೊರೆ ಖಂಡಿಸಿ ಪಶ್ಚಿಮ ಬಂಗಾಳ CEO ಕಚೇರಿ ಮುಂದೆ BLOಗಳಿಂದ ಅಹೋರಾತ್ರಿ ಧರಣಿ!

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

SCROLL FOR NEXT