ದೇಶ

ಶಿವರಾಜ್ ಪಾಟೀಲ್ ಜಿಹಾದಿ ಹೇಳಿಕೆ: ಹಿಂದುತ್ವ ಅಪಮಾನಿಸುವ ಪ್ರಯತ್ನ- ಬಿಜೆಪಿ; ಸ್ವಿಕಾರ್ಹವಲ್ಲ ಎಂದ ಕಾಂಗ್ರೆಸ್!

Nagaraja AB

ನವದೆಹಲಿ: ಭಗವದ್ಗಿತೆಯಲ್ಲೂ ಜಿಹಾದಿ ಪರಿಕಲ್ಪನೆಯಿದೆ ಎಂಬ ಕಾಂಗ್ರೆಸ್ ಮುಖಂಡ ಶಿವರಾಜ್ ಪಾಟೀಲ್ ಹೇಳಿಕೆ ವಿರುದ್ಧ ಬಿಜೆಪಿ ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದೆ. ಇದು ಪ್ರತಿಪಕ್ಷದಿಂದ ಹಿಂದುತ್ವ ಅಪಮಾನಿಸುವ ಪ್ರಯತ್ನವಾಗಿದೆ ಎಂದು ಹೇಳಿದೆ.

ಶಿವರಾಜ್ ಪಾಟೀಲ್ ಹೇಳಿಕೆಯಿಂದ ಅಂತರ ಕಾಪಾಡಿಕೊಂಡಿರುವ ಕಾಂಗ್ರೆಸ್ ಇದು, ಸ್ವಿಕಾರ್ಹವಲ್ಲ ಎಂದಿದೆ. ಮಾಜಿ ರಾಜ್ಯಪಾಲರಾದ ಶಿವರಾಜ್ ಪಾಟೀಲ್ ತನ್ನ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದು, ಭಗವದ್ಗೀತೆ ಭಾರತೀಯ ನಾಗರಿಕತೆಯ ಪ್ರಮುಖ ಅಡಿಪಾಯ ಎಂದು ಹೇಳಿದೆ. 

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ವಕ್ತಾರ ಮತ್ತು ರಾಜ್ಯಸಭಾ ಸಂಸದ ಸುಧಾಂಶು ತ್ರಿವೇದಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಥವಾ ಅದರ ಮುಖಂಡರಾದ ಸೋನಿಯಾ ಗಾಂಧಿ ಪಾಟೀಲ್  ರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸುವಂತೆ ಒತ್ತಾಯಿಸಿದ್ದಾರೆ.

ಮಹಾತ್ಮ ಗಾಂಧಿ  ಭಗವದ್ಗಿತೆ ಕುರಿತ ವ್ಯಾಖ್ಯಾನದಲ್ಲಿ ಇದನ್ನು 'ಅನಾಸಕ್ತಿ ಯೋಗ' (ನಿಸ್ವಾರ್ಥ ಕ್ರಿಯೆ) ಮೂಲವೆಂದು ಬಣ್ಣಿಸಿದರೆ, ಬಾಲ ಗಂಗಾಧರ ತಿಲಕರು ತಮ್ಮ 'ಕರ್ಮ ಯೋಗ'ದ ತತ್ವವನ್ನು ಗೀತಾ ಅಧ್ಯಯನದ ಮೂಲಕ ವಿವರಿಸಿದ್ದಾರೆ.ಇದೀಗ ಈಗ ಕಾಂಗ್ರೆಸ್ ನಾಯಕರು ಅದರಲ್ಲಿ ಜಿಹಾದ್ ನೋಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. 

ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರೇಮ್ ಶುಕ್ಲಾ "ಹಿಂದೂ, ಹಿಂದುತ್ವ ಮತ್ತು ಹಿಂದೂಸ್ತಾನವನ್ನು ಅವಮಾನಿಸುವ ಪಿತೂರಿಯಲ್ಲಿ ಕಾಂಗ್ರೆಸ್ ದೀರ್ಘಕಾಲ ತೊಡಗಿಸಿಕೊಂಡಿದ್ದು, ಪಾಟೀಲ್ ಅವರ ಹೇಳಿಕೆಗಳು ಇದಕ್ಕೆ ಮತ್ತೊಂದು ಅಧ್ಯಾಯವಾಗಿದೆ ಎಂದು ಅವರು ಆರೋಪಿಸಿದ್ದಾರೆ. 
 

SCROLL FOR NEXT