ದೇಶ

ಇಸ್ರೋದ ಅತ್ಯಂತ ಭಾರದ ರಾಕೆಟ್ ಉಡಾವಣೆ ಯಶಸ್ವಿ; 36 ರಾಕೆಟ್ ಗಳೊಂದಿಗೆ ನಭಕ್ಕೆ ಚಿಮ್ಮಿದ GSLV MkIII

Srinivas Rao BV

ಶ್ರೀಹರಿಕೋಟಾ: ಇಸ್ರೋ ಸಂಸ್ಥೆಯ ಅತ್ಯಂತ ಭಾರವಾದ ರಾಕೆಟ್ (GSLV MkIII) ಉಡಾವಣೆ ಅ.22 ರಂದು ಉಡಾವಣೆಯಾಗಿದ್ದು, ಉಡಾವಣೆ ಯಶಸ್ವಿಯಾಗಿದೆ. 

LVM3-M2 ನಲ್ಲಿ 36 ಬ್ರಾಡ್‌ಬ್ಯಾಂಡ್ ಸಂವಹನ ಉಪಗ್ರಹಗಳ ಮೊದಲ ವಾಣಿಜ್ಯ ಉಡಾವಣೆ ಇದಾಗಿದ್ದು, ಭಾರತೀಯ ಬಾಹ್ಯಾಕಾಶ ಸಂಸ್ಥೆ ಇತಿಹಾಸ ನಿರ್ಮಿಸಿದೆ.

ಕಡಿಮೆ ಭೂಮಿಯ ಕಕ್ಷೆಗೆ ಈ ಉಪಗ್ರಹಗಳನ್ನು ಸೇರಿಸಲಾಗಿದ್ದು, ಬ್ರಿಟನ್ ಮೂಲದ ಗ್ರಾಹಕರಿಗೆ ಈ ಸೇವೆಯನ್ನು ಒದಗಿಸಲಾಗಿದೆ.

ಇಸ್ರೋದ ಎಲ್ ವಿಎಂ3 ನಲ್ಲಿ ಒನ್ ವೆಬ್ ಲಿಯೋ ಉಪಗ್ರಹಗಳ ಉಡಾವಣೆಗೆ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್ಎಸ್ಐಎಲ್) ಲಂಡನ್ ಕೇಂದ್ರಿತ ನೆಟ್ವರ್ಕ್ ಆಕ್ಸಿಸ್ ಅಸೋಸಿಯೇಟೆಡ್ ಲಿಮಿಟೆಡ್ (ಒನ್ ವೆಬ್)  ನೊಂದಿಗೆ ಉಪಗ್ರಹ ಉಡಾವಣೆ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಿತ್ತು.

ಒನ್ ವೆಬ್ ಖಾಸಗಿ ಸ್ಯಾಟಲೈಟ್ ಸಂವಹನ ಸಂಸ್ಥೆಯಾಗಿದ್ದು, ಭಾರತದ ಭಾರ್ತಿ ಎಂಟರ್ ಪ್ರೈಸಸ್ ಈ ಸಂಸ್ಥೆಯಲ್ಲಿ ಪ್ರಮುಖ ಹೂಡಿಕೆದಾರ ಹಾಗೂ ಷೇರು ಹೊಂದಿರುವ ಸಂಸ್ಥೆಯಾಗಿದೆ. 5,796 ಕೆಜಿಯಷ್ಟು ಭಾರವಾದ ಪೇಲೋಡ್‌ನೊಂದಿಗೆ ಈ ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ.

SCROLL FOR NEXT