ದೇಶ

ವರದಿಗಳನ್ನು ಅಲ್ಲಗಳೆಯುವುದನ್ನು ಬಿಟ್ಟು ಸರ್ಕಾರ ಹಸಿವಿನ ಸಮಸ್ಯೆಯನ್ನು ಬಗೆಹರಿಸಬೇಕು: ಮಲ್ಲಿಕಾರ್ಜುನ ಖರ್ಗೆ

Ramyashree GN

ನವದೆಹಲಿ: ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತವು ಕುಸಿಯುತ್ತಿರುವ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಸೋಮವಾರ ನೂತನ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದು, ಸರ್ಕಾರವು ತನಿಖಾ ಸಂಸ್ಥೆಗಳನ್ನು ಅಪಖ್ಯಾತಿ ಮಾಡುವ ಬದಲು ಈ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಹೇಳಿದರು.

ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತವು ಕುಸಿಯುತ್ತಿರುವ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಸೋಮವಾರ ನೂತನ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದು, ಸರ್ಕಾರವು ಸಂಸ್ಥೆಗಳು ನೀಡುವ ವರದಿಯನ್ನು ತಿರಸ್ಕರಿಸುವ ಬದಲು ದೇಶದಲ್ಲಿನ ಹಸಿವಿನ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಹೇಳಿದರು.

ದೀಪಾವಳಿಯು ಸೋಲಿನ ಮೇಲಿನ ವಿಜಯವನ್ನು ಮತ್ತು ಅಜ್ಞಾನದ ಮೇಲಿನ ಜಾಗೃತಿಯನ್ನು ಸೂಚಿಸುತ್ತದೆ. ಹೊಸ ಭರವಸೆಗಳು ಮತ್ತು ಹೊಸ ಕನಸುಗಳೊಂದಿಗೆ ಜೀವನವನ್ನು ಆಚರಿಸುವ ಸಂದರ್ಭ ಇದಾಗಿದೆ. ಈ ಮಂಗಳಕರ ಸಂದರ್ಭವು ನಿಮ್ಮ ಜೀವನವನ್ನು ಆರೋಗ್ಯ, ಸಂತೋಷ ಮತ್ತು ಶಾಂತಿಯಿಂದ ಬೆಳಗಿಸಲಿ. ದೀಪಾವಳಿಯ ಶುಭಾಶಯಗಳು!' ಎಂದು ಖರ್ಗೆ ಹೇಳಿದರು.

ಕೆಲವು ದಿನಗಳ ಹಿಂದೆ, 'ವಾರ್ಷಿಕವಾಗಿ ಬಿಡುಗಡೆಯಾಗುವ ಜಾಗತಿಕ ಹಸಿವು ಸೂಚ್ಯಂಕದ ಪಟ್ಟಿಯು ಪಕ್ಷಪಾತ ಮತ್ತು ತಪ್ಪು ಮಾಹಿತಿಯಾಗಿದೆ' ಎಂದು ಕೇಂದ್ರವು ಹೇಳಿತ್ತು.

ಸೂಚ್ಯಂಕವು ಹಸಿವಿನ ತಪ್ಪಾದ ಅಳತೆಯಾಗಿದೆ ಮತ್ತು ಭಾರತ ಸರ್ಕಾರಕ್ಕೆ ಅಂತರಾಷ್ಟೀಯ ಮಟ್ಟದಲ್ಲಿ ಕಳಂಕ ತರುವ ಪ್ರಯತ್ನವಾಗಿದೆ. ಸೂಚ್ಯಂಕದ ಲೆಕ್ಕಾಚಾರಕ್ಕಾಗಿ ಬಳಸಲಾಗುವ ನಾಲ್ಕು ಸೂಚಕಗಳಲ್ಲಿ ಮೂರು ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿವೆ ಮತ್ತು ಇವು ಇಡೀ ಜನಸಂಖ್ಯೆಯ ಪ್ರತಿನಿಧಿಯಾಗಿರಲು ಸಾಧ್ಯವಿಲ್ಲ. ನಾಲ್ಕನೆಯದು ಮತ್ತು ಪ್ರಮುಖ ಸೂಚಕವಾಗಿರುವ ಅಪೌಷ್ಟಿಕತೆಯ ಪ್ರಮಾಣ (ಪಿಒಯು) ಜನಸಂಖ್ಯೆಯ ಅಂದಾಜು 3,000 ರ ಅತ್ಯಂತ ಸಣ್ಣ ಗಾತ್ರದಲ್ಲಿ ನಡೆಸಿದ ಅಭಿಪ್ರಾಯ ಸಂಗ್ರಹವನ್ನು ಆಧರಿಸಿದೆ' ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಹೇಳಿಕೆ ತಿಳಿಸಿದೆ.

ಐರಿಶ್ ಸಂಸ್ಥೆ ಕನ್ಸರ್ನ್ ವರ್ಲ್ಡ್‌ವೈಡ್ ಮತ್ತು ಜರ್ಮನ್ ಸಂಸ್ಥೆ ವೆಲ್ಟ್ ಹಂಗರ್ ಹಿಲ್ಫ್  ಬಿಡುಗಡೆ ಮಾಡಿದ ಜಾಗತಿಕ ಹಸಿವಿನ ಸೂಚ್ಯಂಕ 2022 ರ ಪ್ರಕಾರ 121 ರಾಷ್ಟ್ರಗಳ ಪೈಕಿ ಭಾರತ 107ನೇ ಸ್ಥಾನದಲ್ಲಿದೆ.

SCROLL FOR NEXT