ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ (ಸಂಗ್ರಹ ಚಿತ್ರ) 
ದೇಶ

ವಿರಾಟ್ ಕೊಹ್ಲಿ ಅದ್ಭುತ ಆಟಕ್ಕೆ ಪತ್ನಿ ಅನುಷ್ಕಾ ಶರ್ಮಾ ಫಿದಾ; ಭಾವನಾತ್ಮಕ ಸಿಹಿ ಸಂದೇಶ!

ಭಾನುವಾರ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತ ರೋಚಕ ಜಯ ಸಾಧಿಸಿದೆ. ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಡಿದ ಅದ್ಭುತ ಆಟಕ್ಕೆ ಪತ್ನಿ ಅನುಷ್ಕಾ ಶರ್ಮಾ ಫಿದಾ ಆಗಿದ್ದು, ಪತಿಗೆ ಸಿಹಿ ಸಂದೇಶವೊಂದನ್ನು ನೀಡಿದ್ದಾರೆ.

ನವದೆಹಲಿ: ಭಾನುವಾರ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತ ರೋಚಕ ಜಯ ಸಾಧಿಸಿದೆ. ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಡಿದ ಅದ್ಭುತ ಆಟಕ್ಕೆ ಪತ್ನಿ ಅನುಷ್ಕಾ ಶರ್ಮಾ ಫಿದಾ ಆಗಿದ್ದು, ಪತಿಗೆ ಸಿಹಿ ಸಂದೇಶವೊಂದನ್ನು ನೀಡಿದ್ದಾರೆ. 

ಪಂದ್ಯ ಮುಗಿದ ನಂತರ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪತಿಯ ಬ್ಯಾಟಿಂಗ್ ಕುರಿತಂತೆ ಅನುಷ್ಕಾ ಶರ್ಮಾ ಭಾವನಾತ್ಮಕ ಸಂದೇಶವೊಂದನ್ನು ಬರೆದಿದ್ದಾರೆ. ಸಂದೇಶದಲ್ಲಿ ವಿರಾಟ್‌ ಕೊಹ್ಲಿಯನ್ನು 'ಫ್ರೀಕಿಂಗ್ ಬ್ಯೂಟಿ' ಎಂದು ಕರೆದಿದ್ದಾರೆ.

"ನೀನು ಸುಂದರ! ಇದು ಅತ್ಯದ್ಭುತ, ನೀವು ಇಂದು ರಾತ್ರಿ ಜನರ ಜೀವನದಲ್ಲಿ ತುಂಬಾ ಸಂತೋಷವನ್ನು ತಂದಿದ್ದೀರಿ ಮತ್ತು ಅದು ಕೂಡ ದೀಪಾವಳಿಯ ಮುನ್ನಾದಿನದಂದು! ನೀವು ನನ್ನ ಪ್ರೀತಿಯ ಅದ್ಭುತ ವ್ಯಕ್ತಿ. ನಿಮ್ಮ ಶ್ರದ್ಧೆ, ದೃಢತೆ ಮತ್ತು ನಂಬಿಕೆ ಮನಸ್ಸಿಗೆ ಮುದನೀಡುತ್ತದೆ".

ಇಂದು ನಾನು ನನ್ನ ಜೀವನದ ಅತ್ಯತ್ತಮ ಪಂದ್ಯವನ್ನು ಈಗಷ್ಟೇ ನೋಡಿದೆ. ಮನೆಯಲ್ಲಿ ಹುಚ್ಚೆದು ಕುಣಿದ ನನ್ನನ್ನು ನೋಡಿದ ನಮ್ಮ ಮಗಳಿಗೆ ಅದರ ಅರ್ಥ ಈಗ ಅರ್ಥವಾಗದಿದ್ದರೂ ಮುಂದೊಂದು ದಿನ ಅವಳಿಗೆ ಈ ಮ್ಯಾಚ್‌ ನೋಡಿದ ಬಳಿಕ ಅರ್ಥವಾಗುತ್ತದೆ. ತನ್ನ ತಂದೆ ಅದ್ಭುತ ಇನ್ನಿಂಗ್ಸ್‌ ಎದುರಿಸಿ ಗೆಲುವಿಗೆ ಕಾರಣರಾಗಿದ್ದಾರೆ ಎಂದು ಅವಳಿಗೆ ತಿಳಿಯುತ್ತದೆ. ನಿನ್ನ ಬಗ್ಗೆ ನನಗೆ ಹೆಮ್ಮೆಯಾಗುತ್ತಿದೆ. ಐ ಲವ್‌ ಯೂ .... ಎಂದು ಹೇಳಿದ್ದಾರೆ. 

ಮೇಲ್ಬೋರ್ನ್ ಕ್ರಿಕೆಟ್ ಅಂಗಳದಲ್ಲಿ ಅಬ್ಬರಿಸಿ ಬೊಬ್ಬಿರಿದ ವಿರಾಟ್ ಕೊಹ್ಲಿ, ಬಹುದಿನಗಳ ನಂತರ ತಮ್ಮ ಹಳೆಯ ಶೈಲಿಯಲ್ಲಿ ಬ್ಯಾಟ್ ಬೀಸಿದರು. ಆ ಮೂಲಕ ಟೀಕಾಕಾರರಿಗೆ ಉತ್ತರ ನೀಡಿರುವ ಕಿಂಗ್ ಕೊಹ್ಲಿ, ತಮ್ಮ ಫಾರ್ಮ್ ಮೊದಲಿಗಿಂತಲೂ ಸ್ಟ್ರಾಂಗ್ ಆಗಿದೆ ಎಂಬುದನ್ನು ತೋರಿಸಿ ಕೊಟ್ಟರು. 

ಸಾಂಪ್ರದಾಯಿಕ ವಿರೋಧಿ ಎನಿಸಿರುವ ಪಾಕಿಸ್ತಾನದ ವಿರುದ್ಧ ವೀರೋಚಿತ ಶೈಲಿಯಲ್ಲಿ ಬ್ಯಾಟ್ ಬೀಸಿರುವ ವಿರಾಟ್ ಕೊಹ್ಲಿ ಮತ್ತೊಮ್ಮೆ ಭಾರತೀಯರ ಹೃದಯ ಗೆದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!