ಕೇದಾರನಾಥ್ ದೇವಾಲಯ 
ದೇಶ

230 ಕೆಜಿ ಚಿನ್ನದ ಪದರದಿಂದ ಕಂಗೊಳಿಸಲಿದೆ ಕೇದಾರನಾಥ ದೇವಾಲಯದ ಗರ್ಭಗುಡಿ!

ಉತ್ತರಾಖಂಡ ರಾಜ್ಯದ ವಿಶ್ವವಿಖ್ಯಾತ ಕೇದಾರನಾಥ ದೇವಸ್ಥಾನದ ಗರ್ಭಗುಡಿಯ ಒಳಗಿನ ಗೋಡೆಗಳು ಚಿನ್ನದ ಪದರಗಳಿಂದ ಕಂಗೊಳಿಸಲಿವೆ.

ಕೇದಾರನಾಥ್ : ಉತ್ತರಾಖಂಡ ರಾಜ್ಯದ ವಿಶ್ವವಿಖ್ಯಾತ ಕೇದಾರನಾಥ ದೇವಸ್ಥಾನದ ಗರ್ಭಗುಡಿಯ ಒಳಗಿನ ಗೋಡೆಗಳು ಚಿನ್ನದ ಪದರಗಳಿಂದ ಕಂಗೊಳಿಸಲಿವೆ.

ಐಐಟಿ ರೂರ್ಕಿಯ ಇಂಜಿನಿಯರ್‌ಗಳ ಜೊತೆಗೆ ಭಾರತೀಯ ಪುರಾತತ್ವ ಸರ್ವೇಕ್ಷಣೆಯ ಇಬ್ಬರು ಅಧಿಕಾರಿಗಳು ಗರ್ಭಗುಡಿಯನ್ನು ಅಲಂಕರಿಸಲು ಚಿನ್ನದ ಪದರ ಹೊದಿಕೆ  ಮೇಲ್ವಿಚಾರಣೆ ಮಾಡುತ್ತಿದ್ದಾರೆ.

ಗೋಡೆಗಳ ಹೊರತಾಗಿ, ಜಲೇರಿ (ಶಿವಲಿಂಗಕ್ಕೆ ಹೋಗುವ ಸಣ್ಣ ಕಾರಿಡಾರ್) ಮತ್ತು ಸೀಲಿಂಗ್ ಸೇರಿದಂತೆ ಗರ್ಭಗುಡಿಯು 230 ಕೆಜಿ ತೂಕದ 550 ಪದರಗಳ ಚಿನ್ನದ ಹಾಳೆಯಿಂದ ಅಲಂಕೃತಗೊಳ್ಳಲಿದೆ. ಕಾಮಗಾರಿಯ ಒಂದು ಭಾಗವು ಬುಧವಾರ ಪೂರ್ಣಗೊಂಡಿದೆ ಎಂದು ಬದರಿ ಕೇದಾರ ದೇವಾಲಯ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.

"ಭಾರತ ಸರ್ಕಾರದ ಪರವಾಗಿ, ASI ಹೆಚ್ಚುವರಿ ಮಹಾನಿರ್ದೇಶಕ ಜಾನ್ವಿಜ್ ಶರ್ಮಾ ನೇತೃತ್ವದ ಆರು ಸದಸ್ಯರ ತಂಡವು ಕಳೆದ ವಾರ ದೇವಸ್ಥಾನದ ಆವರಣದಲ್ಲಿ ವಿವರವಾದ ಪರಿಶೀಲನೆ ನಡೆಸಿತು" ಎಂದು ಸಮಿತಿಯ ಅಧ್ಯಕ್ಷ ಅಜಯೇಂದ್ರ ಅಜಯ್ ಹೇಳಿದರು. ತಜ್ಞರ ವರದಿಯ ನಂತರ ದೇವಾಲಯದ ಗರ್ಭಗುಡಿಯಲ್ಲಿ ಚಿನ್ನದ ಪದರವನ್ನು ಹಾಕುವ ಕೆಲಸವನ್ನು ಪ್ರಾರಂಭಿಸಲಾಯಿತು, ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆ ರೂರ್ಕಿ ಮತ್ತು ASI ತಂಡವು ಈಗಾಗಲೇ ಗರ್ಭಗುಡಿಯನ್ನು ಪರಿಶೀಲಿಸಿದೆ.

ತಜ್ಞರ ಸಮ್ಮುಖದಲ್ಲಿ ಕಳೆದ ಮೂರು ದಿನಗಳಿಂದ 19 ಕಾರ್ಮಿಕರು ಕೆಲಸ ಮಾಡುವುದರೊಂದಿಗೆ ಗರ್ಭಗುಡಿಯ ಅಲಂಕಾರ ಬಹುತೇಕ ಪೂರ್ಣಗೊಂಡಿದೆ. ಭಾಯಿ ದೂಜ್ (ಅಕ್ಟೋಬರ್ 26) ನಂತರ, ಕೇಕೇದಾರನಾಥ ಧಾಮವನ್ನು ಚಳಿಗಾಲಕ್ಕಾಗಿ ಮುಚ್ಚಲಾಗುವುದು ಎಂದು ಅಜಯ್ ಹೇಳಿದರು.

ಉತ್ತರಾಖಂಡ ರಾಜ್ಯದ ವಿಶ್ವವಿಖ್ಯಾತ ಕೇದಾರನಾಥ ದೇವಸ್ಥಾನದ ಗರ್ಭಗುಡಿಯ ಒಳಗಿನ ಗೋಡೆಗೆ ಚಿನ್ನದ ಹಾಳೆಗಳನ್ನು ಲೇಪಿಸಲು ಮುಂಬೈ ಉದ್ಯಮಿಯೊಬ್ಬರು 230 ಕೆಜಿ ಚಿನ್ನ ಅರ್ಪಿಸಿದ್ದಾರೆ.

ಮುಂಬೈನ ವಜ್ರ ವ್ಯಾಪಾರಿಯೊಬ್ಬರು ಕೇದಾರನಾಥ ದೇವಸ್ಥಾನಕ್ಕೆ 230 ಕೆಜಿ ಚಿನ್ನ ಅರ್ಪಿಸಿದ್ದಾರೆ. ಇದರಿಂದ ಗೋಡೆಗಳಿಗೆ ಚಿನ್ನದ ಹಾಳೆಗಳನ್ನು ಅಳವಡಿಸಲಾಗಿದೆ. ಈ ಹಾಳೆಗಳಲ್ಲಿ ಶಿವ, ಹಾವು, ನಂದಿ, ಡಮರುಗ, ತ್ರಿಶೂಲದ ಚಿತ್ರಗಳನ್ನು ಕೆತ್ತನೆ ಮಾಡಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ಹೇಳಿದೆ.

ಈ ಹಿಂದೆ ದೇವಾಲಯದ ಗರ್ಭ ಗುಡಿಯ ಗೋಡೆಗಳಿಗೆ ಬೆಳ್ಳಿಯ ಹಾಳೆಗಳನ್ನು ಅಳವಡಿಸಲಾಗಿತ್ತು. ಈ ಹಾಳೆಗಳನ್ನು ತೆಗೆದು ಬಂಗಾರದ ಹಾಳೆಗನ್ನು ಜೋಡಿಸಲಾಗಿದೆ. ಈ ಕೆಲಸಕ್ಕೆ ಉತ್ತರಾಖಂಡ ಸರ್ಕಾರ ಕೂಡ ಅನುಮತಿ ನೀಡಿದೆ ಎಂದು ದೇವಾಲಯದ ಆಡಳಿತ ಮಂಡಳಿ ಹೇಳಿದೆ.  

ಈ ಹಾಳೆಗಳನ್ನು ಅಳವಡಿಸಲು 230 ಕೆ.ಜಿ ಚಿನ್ನವನ್ನು ಬಳಕೆ ಮಾಡಲಾಗಿದೆ. ಇದನ್ನು ಮುಂಬೈ ವಜ್ರದ ವ್ಯಾಪಾರಿ ನೀಡಿದ್ದಾರೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಹೇಳಿದೆ. ಈ ನಡುವೆ ಗೋಡೆಗೆ ಚಿನ್ನದ ಹಾಳೆಗಳನ್ನು ಲೇಪನ ಮಾಡಬಾರದು ಎಂದು ಸ್ಥಳೀಯ ಅರ್ಚಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಬದರಿನಾಥ-ಕೇದಾರನಾಥ ದೇವಾಲಯ ಸಮಿತಿಯು ಮಹಾರಾಷ್ಟ್ರದ ದಾನಿ (ಹೆಸರು ಬಹಿರಂಗಪಡಿಸಲಾಗಿಲ್ಲ) ಸಹಯೋಗದೊಂದಿಗೆ ಕೆಲಸ ಮಾಡಿದೆ. ಚಿನ್ನದ ಲೇಪನಕ್ಕೂ ಮುನ್ನ ದೇವಸ್ಥಾನ ಸಮಿತಿ ಪದಾಧಿಕಾರಿಗಳ ಸಮ್ಮುಖದಲ್ಲಿ ಬೆಳ್ಳಿಯ ಪದರಗಳನ್ನು ತೆಗೆಯಲಾಯಿತು. ಈ ಬೆಳ್ಳಿಯ ಒಡವೆಗಳನ್ನು ದೇವಸ್ಥಾನದ ಅಂಗಡಿಯಲ್ಲಿ ಸಂರಕ್ಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಚಿನ್ನದ ಹಾಳೆಗಳನ್ನು ಒಂದು ವಾರದ ಹಿಂದೆ ದೆಹಲಿಯಿಂದ ವಿಶೇಷ ವಾಹನದಲ್ಲಿ ತರಲಾಗಿತ್ತು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ಗರ್ಭಗುಡಿಯನ್ನು ಚಿನ್ನದ ಲೇಪಿತ ಹಾಳೆಗಳಿಂದ ಮುಚ್ಚಲು ಬೆಳ್ಳಿಯ ಪದರಗಳನ್ನು ತೆಗೆದುಹಾಕಲಾಯಿತು. ಗುರುವಾರ ಬೆಳಗ್ಗೆ 8.30ಕ್ಕೆ ಶ್ರೀ ಕೇದಾರನಾಥ ಧಾಮದ ಪೋರ್ಟಲ್‌ಗಳನ್ನು ಚಳಿಗಾಲಕ್ಕಾಗಿ ಮುಚ್ಚಲಾಗುತ್ತದೆ.

ದೇವಾಲಯ ಸಮಿತಿಗೆ ಸಂಬಂಧಿಸಿದ ತಜ್ಞರ ಪ್ರಕಾರ, ಪವಿತ್ರ ಕೇದಾರನಾಥ ದೇವಾಲಯವನ್ನು 8 ನೇ ಶತಮಾನದಲ್ಲಿ ಆದಿ ಶಂಕರಾಚಾರ್ಯರು ನಿರ್ಮಿಸಿದರು. ಮಹಾಭಾರತ ಖ್ಯಾತಿಯ ಪಾಂಡವರು ಶಿವಾಲಯವನ್ನು ನಿರ್ಮಿಸಿದ ಸ್ಥಳವನ್ನು ಶಂಕರಾಚಾರ್ಯರು ಪುನರ್ನಿರ್ಮಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT