ದೇಶ

ಕೊಯಂಬತ್ತೂರು ಕಾರ್ ಸ್ಫೋಟ ದೀಪಾವಳಿ ಮುನ್ನ ಭಯೋತ್ಪಾದಕ ಕೃತ್ಯ ಮೆರೆಯುವ ಯತ್ನ: ರಾಜ್ಯಪಾಲ

Srinivas Rao BV

ಕೊಯಂಬತ್ತೂರು: ಕೊಯಂಬತ್ತೂರು ಕಾರು ಸ್ಫೋಟ ಪ್ರಕರಣ ದೀಪಾವಳಿಗೂ ಮುನ್ನ ಭಯೋತ್ಪಾದಕ ಕೃತ್ಯ ಮೆರೆಯುವ ಯತ್ನವಾಗಿತ್ತು ಎಂದು ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ಹೇಳಿದ್ದಾರೆ. 

ಪ್ರಕರಣದ ತನಿಖೆ ವೇಳೆ ದೊರೆತ ಸ್ಫೋಟಕಗಳು ಹಾಗೂ ಐಇಡಿ ತಯಾರಿಸುವ ರಾಸಾಯನಿಕಗಳು  ಸರಣಿ ದಾಳಿಗಳಿಗೆ ಎಲ್ಲವೂ ಸಿದ್ಧವಾಗಿತ್ತು ಎಂಬುದನ್ನು ತೋರಿಸುತ್ತದೆ ಎಂದು ರಾಜ್ಯಪಾಲ ರವಿ ಹೇಳಿದ್ದಾರೆ. 

"ಕೊಯಂಬತ್ತೂರಿನ ಜೆಎಸ್ಎಸ್ ಇನ್ಸ್ಟಿಟ್ಯೂಟ್ ಅಫ್ ನ್ಯಾಚುರೋಪತಿ ಮತ್ತು ಯೋಗಿ ಸೈನ್ಸ್-ಆಸ್ಪತ್ರೆಯ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯಪಾಲರು ಈ ಹೇಳಿಕೆ ನೀಡಿದ್ದು,  ಸ್ಫೋಟಕ್ಕೆ ಸಂಬಂಧಿಸಿದ ಶಂಕಿತರನ್ನು ತಮಿಳುನಾಡು ಪೊಲೀಸರು ನಾಲ್ಕು ಗಂಟೆಗಳಲ್ಲಿ ವಶಕ್ಕೆ ಪಡೆದರು ಆದರೆ ಎನ್ಐಎಯನ್ನು ಕರೆತರಲು ನಾಲ್ಕು ದಿನಗಳೇಕೆ ಬೇಕಾಯಿತು?" ಎಂದು ಪ್ರಶ್ನಿಸಿದ್ದಾರೆ. 

ಪೊಲೀಸರು ಶಂಕಿತರನ್ನು ಬಂಧಿಸಿದ ಬಳಿಕವೂ ನಿರ್ಧಾರ ಕೈಗೊಳ್ಳಬೇಕಿರುವವರು ಎನ್ಐಎ ಕರೆತರಲು ನಾಲ್ಕು ದಿನಗಳ ಕಾಲಾವಕಾಶ ತೆಗೆದುಕೊಂಡಿದ್ದು ಏಕೆ? ಎಂದು ರವಿ ಪ್ರಶ್ನಿಸಿದ್ದಾರೆ. 

ಭಯೋತ್ಪಾದಕರು ಎಲ್ಲರಿಗೂ ಶತ್ರುಗಳೇ ಯಾರಿಗೂ ಮಿತ್ರರಲ್ಲ. ಉಗ್ರರು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುವುದಿಲ್ಲ.  ಅವರು ಬೃಹತ್ ಜಾಲದ ಭಾಗವಾಗಿರುತ್ತಾರೆ. ಅವರೇನು ಮಾಡುತ್ತಿದ್ದರೋ ಅದು ದೊಡ್ಡ ಪಿತೂರಿಯ ಭಾಗವಾಗಿತ್ತು, ಕೊಯಂಬತ್ತೂರು ದೀರ್ಘ ಕಾಲದಿಂದಲೂ ಭಯೋತ್ಪಾದನೆ ಕೃತ್ಯಗಳ ಯೋಜನೆ ರೂಪಿಸಲು ಉಗ್ರರು ಆಯ್ಕೆ ಮಾಡಿಕೊಳ್ಳುವ ಪ್ರದೇಶ ಎಂಬುದಕ್ಕೆ ಹೆಸರಾಗಿದೆ. ಅವರಿಗೆ ತರಬೇತಿ ನೀಡಿ, ಇರಾಕ್, ಸಿರಿಯಾ ಹಾಗೂ ಅಫ್ಘಾನಿಸ್ತಾನಕ್ಕೆ ಕರೆದೊಯ್ಯಲಾಗುತ್ತದೆ ಎಂದು ರಾಜ್ಯಪಾಲ ರವಿ ಹೇಳಿದ್ದಾರೆ. 

SCROLL FOR NEXT