ದೇಶ

ಸಣ್ಣದೊಂದು ಸುಳ್ಳು ಸುದ್ದಿ ದೇಶದಲ್ಲಿ ಅವ್ಯವಸ್ಥೆಯನ್ನೇ ಸೃಷ್ಟಿಸಬಹುದು: ಚಿಂತನ್ ಶಿಬಿರದಲ್ಲಿ ಪ್ರಧಾನಿ ಮೋದಿ

Manjula VN

ಸೂರಜ್‌ಕುಂಡ್: ಒಂದೇ ಒಂದು ಸುಳ್ಳು ಸುದ್ದಿಯು ದೇಶದಲ್ಲಿ ಅವ್ಯವಸ್ಥೆಯನ್ನು ಸೃಷ್ಟಿ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಹೀಗಾಗಿ ಅವುಗಳ ಪರಿಶೀಲಿಸಲು ತಾಂತ್ರಿಕ ಪ್ರಗತಿ ಅತ್ಯಗತ್ಯ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ಹೇಳಿದ್ದಾರೆ.

ಹರಿಯಾಣದಲ್ಲಿ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ರಾಜ್ಯಗಳ ಗೃಹ ಮಂತ್ರಿಗಳ ಚಿಂತನ್ ಶಿಬಿರ ಉದ್ದೇಶಿಸಿ ಮಾತನಾಡಿದ ಅವರು, ಯಾವುದೇ ಮಾಹಿತಿಯನ್ನು ಇತರರಿಗೆ ರವಾನಿಸುವ ಮೊದಲು ಅದನ್ನು ವಿಶ್ಲೇಷಿಸುವ ಮತ್ತು ಪರಿಶೀಲಿಸುವ ಬಗ್ಗೆ ಜನರಿಗೆ ತಿಳಿಸುವ ಅಗತ್ಯವನ್ನು ಒತ್ತಿ ಹೇಳಿದರು.

"ಯಾವುದೇ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಳ್ಳುವ ಮೊದಲು 10 ಬಾರಿ ಯೋಜನೆ ಮಾಡಬೇಕು. ಆ ಮಾಹಿತಿ ಸರಿಯಿದೆಯೇ ಎಂದು ಪರಿಶೀಲಿಸಬೇಕು. ಸುಳ್ಳು ಸುದ್ದಿಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಅತ್ಯಗತ್ಯವಾಗಿದ್ದು, ತಂತ್ರಜ್ಞಾನವು ಇದರಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ಸಂದೇಶಗಳನ್ನು ಫಾರ್ವರ್ಡ್ ಮಾಡುವ ಮೊದಲು ಅವುಗಳನ್ನು ಪರಿಶೀಲಿಸುವ ಕಾರ್ಯವಿಧಾನಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಕಳೆದ ಕೆಲವು ವರ್ಷಗಳಲ್ಲಿ ಎಲ್ಲ ಸರ್ಕಾರಗಳು ಭಯೋತ್ಪಾದನೆಯ ಮೂಲವನ್ನು ನಾಶಮಾಡಲು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿವೆ. ನಾವು ನಮ್ಮ ಪಡೆಗಳನ್ನು ಒಗ್ಗೂಡಿಸುವುದರ ಮೂಲಕ ಅದನ್ನು ನಿಭಾಯಿಸಬೇಕಾಗಿದೆ. ನಕ್ಸಲಿಸಂನ ಎಲ್ಲ ರೂಪಗಳನ್ನು ಸೋಲಿಸಬೇಕಾಗಿದೆ - ಅದು ಬಂದೂಕು ಹಿಡಿದಿರಲಿ ಅಥವಾ ಪೆನ್ನು ಹಿಡಿದಿರಲಿ, ನಾವು ಅವೆಲ್ಲದಕ್ಕೂ ಪರಿಹಾರ ಕಂಡುಕೊಳ್ಳಬೇಕಾಗಿದೆ. ಇಂದು ಅಪರಾಧಗಳ ಸ್ವರೂಪ ಬದಲಾಗುತ್ತಿದೆ. ನಾವು ಹೊಸ ಯುಗದ ತಂತ್ರಜ್ಞಾನಗಳನ್ನು ಅರ್ಥಮಾಡಿಕೊಳ್ಳಬೇಕಾಗಿದೆ. 5ಜಿ ಯುಗ ಪ್ರವೇಶಿಸಿದ್ದೇವೆ. ಆದ್ದರಿಂದ ನಾವು ಹೆಚ್ಚು ಜಾಗರೂಕರಾಗಿರಬೇಕಿದೆ.

SCROLL FOR NEXT