ದೇಶ

ಸಿಸೋಡಿಯಾ ಮೇಲೆ ಸಿಬಿಐ ದಾಳಿ ನಂತರ ಗುಜರಾತ್‌ನಲ್ಲಿ ಎಎಪಿ ಮತಗಳು ಶೇ. 4 ರಷ್ಟು ಹೆಚ್ಚಾಗಿದೆ: ಕೇಜ್ರಿವಾಲ್

Lingaraj Badiger

ನವದೆಹಲಿ: ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿದ ನಂತರ ಗುಜರಾತ್ ನಲ್ಲಿ ಆಮ್ ಆದ್ಮಿ ಪಕ್ಷದ ಮತ ಗಳಿಕೆಯ ಪ್ರಮಾಣ ಶೇ. 4 ರಷ್ಟು ಹೆಚ್ಚಳವಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಗುರುವಾರ ಹೇಳಿದ್ದಾರೆ.

ಇಂದು ದೆಹಲಿ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಎಎಪಿ ರಾಷ್ಟ್ರೀಯ ಸಂಚಾಲಕರು ಆಗಿರುವ ಕೇಜ್ರಿವಾಲ್ ಅವರು, ಸಿಸೋಡಿಯಾ ಅವರನ್ನು ಬಂಧಿಸಿದರೆ ಗುಜರಾತ್ ನಲ್ಲಿ ಪಕ್ಷದ ಮತಗಳ ಪ್ರಮಾಣ ಶೇ.6ರಷ್ಟು ಹೆಚ್ಚಾಗಲಿದೆ ಎಂದಿದ್ದಾರೆ.

"ಸಿಬಿಐ ಸಿಸೋಡಿಯಾ ಮೇಲೆ ದಾಳಿ ನಡೆಸಿತು, ಅವರ ಗ್ರಾಮಕ್ಕೆ ಹೋಗಿ ಅವರ ಬ್ಯಾಂಕ್ ಲಾಕರ್ ಅನ್ನು ಪರಿಶೀಲಿಸಿತು. ಆದರೆ ಸಿಸೋಡಿಯಾ ಅವರ ವಿರುದ್ಧ ಯಾವುದೇ ಅಕ್ರಮ ಕಂಡುಬಂದಿಲ್ಲ ಎಂದು ಸಿಬಿಐನವರು ಹೇಳಿದ್ದಾರೆ. ಆದರೂ ಸಿಸೋಡಿಯಾ ಅವರನ್ನು ಬಂಧಿಸಲು ಅವರಿಗೆ ಒತ್ತಡವಿದೆ" ಎಂದು ಕೇಜ್ರಿವಾಲ್ ಹೇಳಿದ್ದಾರೆ. 

"ಸಿಸೋಡಿಯಾ ವಿರುದ್ಧ ಸಿಬಿಐ ದಾಳಿ ನಡೆಸಿದ ನಂತರ ಗುಜರಾತ್‌ನಲ್ಲಿ ಎಎಪಿಯ ಮತಗಳ ಪ್ರಮಾಣವು ಶೇಕಡಾ 4 ರಷ್ಟು ಹೆಚ್ಚಾಗಿದೆ. ಅವರನ್ನು ಬಂಧಿಸಿದರೆ ಅದು ಶೇಕಡಾ 6 ರಷ್ಟು ಹೆಚ್ಚಾಗುತ್ತದೆ" ಎಂದು ದೆಹಲಿ ಮುಖ್ಯಮಂತ್ರಿ ತಿಳಿಸಿದ್ದಾರೆ.

ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಆಪ್ ನಾಯಕ, ಕೇಸರಿ ಪಕ್ಷದ ನಾಯಕರು ಎಎಪಿ ಶಾಸಕರನ್ನು ಖರೀದಿಸಲು ಪ್ರಯತ್ನಿಸಿದರು. ಆದರೆ ನಮ್ಮ ಪಕ್ಷದ ಯಾವುದೇ ಶಾಸಕರು ಅವರ ಪ್ರಸ್ತಾಪವನ್ನು ಸ್ವೀಕರಿಸಲಿಲ್ಲ ಎಂದಿದ್ದಾರೆ.

SCROLL FOR NEXT