ಸಚಿನ್ ತೆಂಡೂಲ್ಕರ್ 
ದೇಶ

ಟ್ವಿಟರ್‌ನ ಒನ್ ವರ್ಡ್ ಟ್ರೆಂಡ್‌ಗೆ ಸೇರ್ಪಡೆಗೊಂಡ ಕ್ರಿಕೆಟ್ ಜಗತ್ತಿನ ಸಚಿನ್ ತೆಂಡೂಲ್ಕರ್, ಪೋಸ್ಟ್ ಇಲ್ಲಿದೆ

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಟ್ವಿಟ್ಟರ್‌ನ ಏಕ ಪದದ ಟ್ರೆಂಡ್‌ಗೆ ಸೇರಿದ್ದು, ಒಂದು ಪದವನ್ನು ಮಾತ್ರ ಟ್ವೀಟ್ ಮಾಡಿದ್ದಾರೆ.

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಟ್ವಿಟ್ಟರ್‌ನ ಏಕ ಪದದ ಟ್ರೆಂಡ್‌ಗೆ ಸೇರಿದ್ದು, ಒಂದು ಪದವನ್ನು ಮಾತ್ರ ಟ್ವೀಟ್ ಮಾಡಿದ್ದಾರೆ.

ನೀವು ಇತ್ತೀಚೆಗೆ ಟ್ವಿಟರ್ ಅನ್ನು ಪರಿಶೀಲಿಸಿದ್ದರೆ, ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಹೊಸ ಟ್ರೆಂಡ್ ಯಾವುದು ಎಂಬುದು ನಿಮಗೆ ತಿಳಿದೇ ಇರುತ್ತದೆ. ಇದೇ ರೀತಿ ಸಚಿನ್ ಕೂಡ 'ಕ್ರಿಕೆಟ್' ಎಂಬ ಒಂದೇ ಪದವನ್ನು ಪೋಸ್ಟ್ ಮಾಡಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರ ಕಚೇರಿ ಕೂಡ ಒಂದು ಪದದ ಟ್ವೀಟ್ ಮಾಡಿ ಗಮನ ಸೆಳೆದಿತ್ತು.

ಅಮೇರಿಕನ್ ರೈಲು ಸೇವಾ ಪೂರೈಕೆದಾರ ಆಮ್ಟ್ರಾಕ್‌ನ ಸಾಮಾಜಿಕ ಮಾಧ್ಯಮ ತಂಡದಿಂದ ಈ ಪ್ರವೃತ್ತಿ ಪ್ರಾರಂಭವಾಯಿತು ಎನ್ನಲಾಗಿದೆ. ಆಮ್ಟ್ರಾಕ್‌ನ ಟ್ವಿಟರ್ ಹ್ಯಾಂಡಲ್ ಇಂದು (ಗುರುವಾರ) ಕೂಡ ಟ್ವೀಟ್ ಅನ್ನು ಪೋಸ್ಟ್ ಮಾಡಿದ್ದು, ಅದು 'ರೈಲುಗಳು' ಎಂದಷ್ಟೇ ಇದೆ.

ಆಮ್ಟ್ರಾಕ್ ಒಂದು ಪದದ ಟ್ವೀಟ್ ಅನ್ನು ಪೋಸ್ಟ್ ಮಾಡಿದ ಕೆಲವು ಗಂಟೆಗಳ ನಂತರ, ಅದು 20,000 ಕ್ಕೂ ಹೆಚ್ಚು ರಿಟ್ವೀಟ್‌ಗಳನ್ನು ಮತ್ತು ಸುಮಾರು 1.50 ಲಕ್ಷಕ್ಕೂ ಅಧಿಕ ಲೈಕ್‌ಗಳನ್ನು ಪಡೆದುಕೊಂಡಿದೆ.

ರೈಲು ಕಂಪನಿಯು ಒಂದು ಪದವನ್ನು ಟ್ವೀಟ್ ಮಾಡಿದ ಕೂಡಲೇ, ಈ ಟ್ರೆಂಡ್ ಬುಲೆಟ್ ರೈಲಿಗಿಂತ ವೇಗವಾಗಿ ಹೊರಹೊಮ್ಮಿದೆ. ಅನೇಕ ಮಾಧ್ಯಮ ಸಂಸ್ಥೆಗಳು, ಬಹುರಾಷ್ಟ್ರೀಯ ಸಂಸ್ಥೆಗಳು, ಫಾಸ್ಟ್ ಫುಡ್ ಕಂಪನಿಗಳು ಮತ್ತು ನಾಸಾ ಕೂಡ ಇದರಲ್ಲಿ ಭಾಗವಹಿಸಿವೆ.

'ಪ್ರಜಾಪ್ರಭುತ್ವ' ಎಂದು ಅಮೆರಿಕದ ಅಧ್ಯಕ್ಷರ ಅಧಿಕೃತ ಟ್ವಿಟರ್‌ ಹ್ಯಾಂಡಲ್‌ನಿಂದ ಅಧ್ಯಕ್ಷ ಜೋ ಬೈಡೆನ್ ಟ್ವೀಟ್ ಮಾಡಿದ್ದಾರೆ.

ನಾಸಾ 'ಬ್ರಹ್ಮಾಂಡ' ಎಂದು ಟ್ವೀಟ್ ಮಾಡಿದ್ದರೆ, ಅಮೆರಿಕದ ರೇಡಿಯೋ ಸಂಘಟನೆಯಾದ ಎನ್‌ಪಿಆರ್ 'ರೇಡಿಯೊ' ಎಂದು ಟ್ವೀಟ್ ಮಾಡಿದೆ. ವಾಷಿಂಗ್ಟನ್‌ ಪೋಸ್ಟ್ ಮಾಧ್ಯಮವು 'ನ್ಯೂಸ್' ಎಂದೂ ಒಂದು ಪದದ ಟ್ವೀಟ್ ಟ್ರೆಂಡ್‌ಗೆ ಸೇರ್ಪಡೆಗೊಂಡಿದೆ.

ಮೊದಲಿಗೆ ಆಮ್ಟ್ರಾಕ್‌ನ ಸಾಮಾಜಿಕ ಮಾಧ್ಯಮ ತಂಡದಲ್ಲಿನ 'ಇಂಟರ್ನ್'ನಿಂದ ಟ್ವೀಟ್ ತಪ್ಪಾಗಿದೆ ಎಂದು ಹಲವರು ನಂಬಿದ್ದರು ಮತ್ತು ಇನ್ನೂ ಕೆಲವರು ಗಮನವನ್ನು ಸೆಳೆಯುವ ಉದ್ದೇಶಪೂರ್ವಕ ಸಾಮಾಜಿಕ ಮಾಧ್ಯಮ ತಂತ್ರವಾಗಿದೆ ಎಂದು ಹೇಳಿದ್ದರು.

ಈಮಧ್ಯೆ, ಟ್ವಿಟರ್, ಗುರುವಾರ, ಬಳಕೆದಾರರು ಈಗಾಗಲೇ ಪೋಸ್ಟ್ ಮಾಡಿದ ಟ್ವೀಟ್‌ಗಳನ್ನು ಶೀಘ್ರದಲ್ಲೇ ಎಡಿಟ್ ಮಾಡಲು ಸಾಧ್ಯವಾಗುತ್ತದೆ ಎಂದು ಘೋಷಿಸಿದೆ.

ಟ್ವಿಟರ್‌ನಿಂದ ಪಾವತಿಸಿದ ಚಂದಾದಾರಿಕೆ ಸೇವೆಯಾದ ಟ್ವಿಟರ್ ಬ್ಲೂ, ತಮ್ಮ ಅಧಿಕೃತ ಖಾತೆಯಲ್ಲಿ ಎಡಿಟ್ ಮಾಡುವ ಆಯ್ಕೆ ಕಾಣುವ ಮತ್ತು ಎಡಿಟ್ ಮಾಡಲಾಗಿರುವ ಟ್ವೀಟ್‌ನ ಚಿತ್ರವನ್ನು ಹಂಚಿಕೊಂಡಿದ್ದಾರೆ ಮತ್ತು ಹೀಗೆ ಬರೆದಿದ್ದಾರೆ: 'ಒಳ್ಳೆಯದು, ನಾವು ಏನನ್ನು ಪರೀಕ್ಷಿಸುತ್ತಿದ್ದೇವೆ ಎಂಬುದನ್ನು ನೋಡಿ....' ಎಂದಿದೆ.

ಟ್ವೀಟ್ ಅನ್ನು ಎಡಿಟ್ ಮಾಡಲಾಗಿದೆ ಎಂಬುದನ್ನು ನೀವು ನೋಡಿದರೆ, ನಾವು ಎಡಿಟ್ ಬಟನ್ ಅನ್ನು ಪರೀಕ್ಷಿಸುತ್ತಿರುವ ಕಾರಣ, ಇದು ನಡೆಯುತ್ತಿದೆ ಮತ್ತು ನೀವು ಶೀಘ್ರವೇ ಸರಿಯಾಗುವಿರಿ' ಎಂದು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹೇಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!

ಉಪಚುನಾವಣೆಯಲ್ಲಿ ಗೆಲುವು, ಜನರೊಂದಿಗೆ NDA ಆಳವಾದ ನಂಟಿನ ಪ್ರತೀಕ: ಪ್ರಧಾನಿ ಮೋದಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

'ಅಸಹ್ಯ, ಅತಿರೇಕ.. ನಿಮ್ಮನ್ನು ಈ ರೀತಿ ನೋಡಲು ಇಚ್ಛಿಸುವುದಿಲ್ಲ, BiggBoss ಶೋ ಬಿಟ್ಟು ಹೊರಬನ್ನಿ': Kichcha Sudeepಗೆ ಪತ್ರ