ದೇಶ

ವಾಯುಮಾಲಿನ್ಯ: ದೀಪಾವಳಿ ಹಿನ್ನಲೆಯಲ್ಲಿ ಪಟಾಕಿ ಮಾರಾಟಕ್ಕೆ ನಿಷೇಧ ಹೇರಿದ ದೆಹಲಿ ಸರ್ಕಾರ

Srinivasamurthy VN

ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಮುಂದುವರೆದಿರುವ ಹಿನ್ನಲೆಯಲ್ಲಿ ಮತ್ತು ದೀಪಾವಳಿ ಹಬ್ಬ ಸನಿಹಿತವಾಗುತ್ತಿರುವ ಹಿನ್ನಲೆಯಲ್ಲಿ  ಪಟಾಕಿ ಮಾರಾಟಕ್ಕೆ ದೆಹಲಿ ಸರ್ಕಾರ ನಿಷೇಧ ಹೇರಿದೆ.

ಜನವರಿ 1ರವರೆಗೆ ಆನ್‌ಲೈನ್ ಪಟಾಕಿ ಮಾರಾಟ, ವಿತರಣೆ ಮೇಲೆ ನಿಷೇಧ ಹೇರಲಾಗಿದ್ದು, ಎಲ್ಲಾ ರೀತಿಯ ಪಟಾಕಿಗಳ (Firecrackers) ಉತ್ಪಾದನೆ, ಸಂಗ್ರಹಣೆ, ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣ ನಿಷೇಧಿಸುವುದರ ಹೊರತಾಗಿ ಮುಂದಿನ ವರ್ಷ ಜನವರಿ 1 ರವರೆಗೆ ಆನ್‌ಲೈನ್ (Online) ಪಟಾಕಿ ಮಾರಾಟ ಮತ್ತು ವಿತರಣೆಯನ್ನು ದೆಹಲಿಯಲ್ಲಿ ನಿಷೇಧಿಸಲಾಗಿದೆ.

ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕ್ರಿಯಾ ಯೋಜನೆ ರೂಪಿಸಲಾಗುವುದು ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರೈ (Gopal Rai) ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದೆಹಲಿಯ (Delhi) ಜನರನ್ನು ಮಾಲಿನ್ಯದ (Pollution) ಅಪಾಯದಿಂದ ರಕ್ಷಿಸಲು, ಕಳೆದ ವರ್ಷದಂತೆ, ಈ ಬಾರಿಯೂ ಎಲ್ಲಾ ರೀತಿಯ ಪಟಾಕಿಗಳ ಉತ್ಪಾದನೆ, ಸಂಗ್ರಹಣೆ, ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ, ಇದರಿಂದಾಗಿ ಜನರ ಜೀವಗಳನ್ನು ಉಳಿಸಬಹುದು. ಈ ಬಾರಿ ದೆಹಲಿಯಲ್ಲಿ ಆನ್‌ಲೈನ್‌ನಲ್ಲಿ ಪಟಾಕಿ ಮಾರಾಟ ಮತ್ತು ವಿತರಣೆಯ ಮೇಲೂ ನಿಷೇಧ ಹೇರಲಾಗಿದೆ ಎಂದು ಹೇಳಿದರು.

ಈ ನಿಷೇಧವು ಜನವರಿ 1, 2023 ರವರೆಗೆ ಜಾರಿಯಲ್ಲಿರುತ್ತದೆ. ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ದೆಹಲಿ ಪೊಲೀಸ್,ಡಿಪಿಸಿಸಿ ಮತ್ತು ಕಂದಾಯ ಇಲಾಖೆಯೊಂದಿಗೆ ಕ್ರಿಯಾ ಯೋಜನೆಯನ್ನು ರೂಪಿಸಲಾಗುವುದು ಎಂದು ಕೂಡ ತಿಳಿಸಿದರು.
 

SCROLL FOR NEXT