ದೇಶ

ದೇಶ ವಿಭಜಿಸುತ್ತಿರುವ ಬಿಜೆಪಿ, ಆರೆಸ್ಸೆಸ್ ನಿಂದ ನಮ್ಮ ತ್ರಿವರ್ಣ ಧ್ವಜದ ಮೇಲೆ ದಾಳಿ: ರಾಹುಲ್ ಗಾಂಧಿ

Lingaraj Badiger

ಕನ್ಯಾಕುಮಾರಿ: ನಮ್ಮ ತ್ರಿವರ್ಣ ಧ್ವಜವು ಪ್ರತಿಯೊಂದು ಧರ್ಮ, ರಾಜ್ಯ ಮತ್ತು ಭಾಷೆಗೆ ಸೇರಿದ್ದು, ಆದರೆ ಇಂದು ಭಾರತವನ್ನು ಧರ್ಮ ಮತ್ತು ಭಾಷೆಯ ಆಧಾರದ ಮೇಲೆ ವಿಭಜಿಸುತ್ತಿರುವ ಬಿಜೆಪಿ ಮತ್ತು ಆರ್‌ಎಸ್‌ಎಸ್ ತ್ರಿವರ್ಣ ಧ್ವಜದ ಮೇಲೆ ದಾಳಿ ನಡೆಸುತ್ತಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬುಧವಾರ ಹೇಳಿದ್ದಾರೆ.

ಇಂದು 'ಭಾರತ್ ಜೋಡೋ ಯಾತ್ರೆ'ಗೆ ಚಾಲನೆ ನೀಡಿ ಮಾತನಾಡಿದ ರಾಹುಲ್ ಗಾಂಧಿ, ದೇಶದಲ್ಲಿ ಇಂದು ಪ್ರತಿಯೊಂದು ಸಾಂವಿಧಾನಿಕ ಸಂಸ್ಥೆಗಳು ದಾಳಿಗೆ ಒಳಗಾಗುತ್ತಿವೆ. ಹೀಗಾಗಿ ದೇಶವನ್ನು ಒಗ್ಗೂಡಿಸಲು ಜನರು ಜನರ ಬೆಂಬಲ ನೀಡಬೇಕು ಎಂದು ಕೋರಿದರು.

"ನಮ್ಮ ತ್ರಿವರ್ಣ ಧ್ವಜವು ಯಾವುದೇ ಧರ್ಮವನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ಖಾತರಿಪಡಿಸುತ್ತದೆ. ಆದರೆ ಇಂದು ಈ ಧ್ವಜವು ದಾಳಿಗೆ ಒಳಗಾಗಿದೆ" ಎಂದು ರಾಹುಲ್ ಗಾಂಧಿ ಹೇಳಿದರು.

ಭಾರತ ಈಗ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ ಮತ್ತು ಇದುವರೆಗೆ ಅತ್ಯಧಿಕ ನಿರುದ್ಯೋಗ ದರವನ್ನು ಎದುರಿಸುತ್ತಿದೆ. ದೇಶವು ದುರಂತದತ್ತ ಸಾಗುತ್ತಿದೆ ಎಂದು ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

2024ರ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಹುಲ್ ಗಾಂಧಿ ಅವರು ಪಕ್ಷದ ಬೃಹತ್ ಜನಸಂಪರ್ಕ ಕಾರ್ಯಕ್ರಮ ‘ಭಾರತ್ ಜೋಡೋ ಯಾತ್ರೆ’ಗೆ ಇಂದು ಕನ್ಯಾಕುಮಾರಿಯಿಂದ ಚಾಲನೆ ನೀಡಿದರು. 150 ದಿನಗಳಲ್ಲಿ 3,500 ಕಿ.ಮೀ ದೂರ ಈ ಯಾತ್ರೆ ಸಾಗಲಿದೆ.

SCROLL FOR NEXT