ಸಾಂದರ್ಭಿಕ ಚಿತ್ರ 
ದೇಶ

ಕೋವಿಡ್-19: ದೇಶದಲ್ಲಿ 5,554 ಹೊಸ ಸೋಂಕು ಪ್ರಕರಣ, 18 ಸಾವು ವರದಿ

ದೇಶದಲ್ಲಿ ಕೋವಿಡ್ ಸಾಂಕ್ರಾಮಿಕದ ಏರಿಳಿತ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 5,554 ಹೊಸ ಸೋಂಕು ಪ್ರಕರಣ ಮತ್ತು 16 ಸಾವು ವರದಿಯಾಗಿದೆ.

ನವದೆಹಲಿ: ದೇಶದಲ್ಲಿ ಕೋವಿಡ್ ಸಾಂಕ್ರಾಮಿಕದ ಏರಿಳಿತ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 5,554 ಹೊಸ ಸೋಂಕು ಪ್ರಕರಣ ಮತ್ತು 16 ಸಾವು ವರದಿಯಾಗಿದೆ.

ಈ ಕುರಿತು ಕೇಂದ್ರ ಆರೋಗ್ಯ ಇಲಾಖೆ ದೈನಿಕ ವರದಿ ಬಿಡುಗಡೆ ಮಾಡಿದ್ದು. ಇಂದು ಬೆಳಗ್ಗೆ 8 ಗಂಟೆಗೆ ಬಿಡುಗಡೆಯಾದ ವರದಿಯನ್ವಯ ದೇಶಾದ್ಯಂತ ಕಳೆದ 24 ಗಂಟೆಗಳ ಅವಧಿಯಲ್ಲಿ 5,554 ಹೊಸ ಕೊರೋನವೈರಸ್ ಸೋಂಕು ಪ್ರಕರಣಗಳು ವರದಿಯಾಗಿದ್ದು, ಆ ಮೂಲಕ ದೇಶದಲ್ಲಿನ ಒಟ್ಟಾರೆ ಸೋಂಕಿತರ ಸಂಖ್ಯೆ 4,44,90,283ಕ್ಕೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ದೇಶಾದ್ಯಂತ 18 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಆ ಮೂಲಕ ದೇಶದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 5,28,139 ಕ್ಕೆ ಏರಿದೆ.

ಈ ಪೈಕಿ ಕೇರಳದಲ್ಲಿ 2, ದೆಹಲಿ ಮತ್ತು ಮಹಾರಾಷ್ಟ್ರದಿಂದ ತಲಾ ನಾಲ್ಕು ಮತ್ತು ಹರಿಯಾಣದಲ್ಲಿ ಇಬ್ಬರು ಸೋಂಕಿತರು ಸಾವನ್ನಪ್ಪಿದ್ದಾರೆ. 24 ಗಂಟೆಗಳ ಅವಧಿಯಲ್ಲಿ ಸಕ್ರಿಯ COVID-19 ಪ್ರಕರಣಗಳ ಸಂಖ್ಯೆಯಲ್ಲಿ 786 ಪ್ರಕರಣಗಳ ಇಳಿಕೆಯಾಗಿದ್ದು, ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 48,850ರಷ್ಟು ಅಂದರೆ ಒಟ್ಟು ಸೋಂಕು ಪ್ರಕರಣಗಳ ಶೇ.0.11 ಪ್ರತಿಶತವನ್ನು ಒಳಗೊಂಡಿವೆ.

ರಾಷ್ಟ್ರೀಯ COVID-19 ಚೇತರಿಕೆಯ ಪ್ರಮಾಣವು 98.70 ಪ್ರತಿಶತಕ್ಕೆ ಹೆಚ್ಚಾಗಿದ್ದು, ದೈನಂದಿನ ಧನಾತ್ಮಕತೆಯ ದರವು 1.47 ಶೇಕಡಾ ಮತ್ತು ಸಾಪ್ತಾಹಿಕ ಸಕಾರಾತ್ಮಕತೆಯ ದರವು 1.80 ಶೇಕಡಾದಲ್ಲಿ ದಾಖಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 4,39,13,294 ಕ್ಕೆ ಏರಿದ್ದು, ಆದರೆ ಪ್ರಕರಣದ ಸಾವಿನ ಪ್ರಮಾಣವು ಶೇಕಡಾ 1.19 ರಷ್ಟಿದೆ. ರಾಷ್ಟ್ರವ್ಯಾಪಿ ಕೋವಿಡ್-19 ಇನಾಕ್ಯುಲೇಷನ್ ಡ್ರೈವ್ ಅಡಿಯಲ್ಲಿ ಇದುವರೆಗೆ ದೇಶದಲ್ಲಿ 214.77 ಕೋಟಿ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

'ಭಾರತೀಯನ ಮದುವೆಯಾದಾಕ್ಷಣ Indian ಆಗಲ್ಲ, ಬಾಂಗ್ಲಾದೇಶಿ ಪತ್ನಿಗೆ ಭಾರತ ಪ್ರವೇಶ ನಿರಾಕರಣೆ ಸರಿ ಇದೆ': ಹೈಕೋರ್ಟ್

CM ಡಿ.ಕೆ. ಶಿವಕುಮಾರ್‌ಗಾಗಿ IndiGo flight ಲೇಟ್? VVIP ಸಂಸ್ಕೃತಿ ವಿರುದ್ಧ ಪ್ರಯಾಣಿಕರ ಆಕ್ರೋಶ..!

ಬರಗಾಲದ ಬೆನ್ನಲ್ಲೇ ಬೆಲೆ ಏರಿಕೆ ಬರೆ: ಮಧ್ಯಮ ವರ್ಗದವರಿಗೆ ಆರ್ಥಿಕ ಹೊಡೆತ, ಅಕ್ಕಿ ದರ ಗಗನಕ್ಕೆ..!