ಅಸಾದುದ್ದೀನ್ ಓವೈಸಿ 
ದೇಶ

ದೇಶಕ್ಕೆ ದುರ್ಬಲ ಪ್ರಧಾನಿ, ಕಿಚಡಿ ಸರ್ಕಾರದ ಅಗತ್ಯವಿದೆ- ಅಸಾದುದ್ದೀನ್ ಓವೈಸಿ

ಮುಂದಿನ ಲೋಕಸಭಾ ಚುನಾವಣೆ ನಂತರ ದೇಶಕ್ಕೆ ದುರ್ಬಲ ಪ್ರಧಾನಿ ಮತ್ತು ಕಿಚಡಿ ಅಥವಾ ಬಹು ಪಕ್ಷ ಸರ್ಕಾರದ ಅಗತ್ಯವಿದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಶನಿವಾರ ಹೇಳಿದ್ದಾರೆ.

ಅಹಮದಾಬಾದ್: ಮುಂದಿನ ಲೋಕಸಭಾ ಚುನಾವಣೆ ನಂತರ ದೇಶಕ್ಕೆ ದುರ್ಬಲ ಪ್ರಧಾನಿ ಮತ್ತು ಕಿಚಡಿ ಅಥವಾ ಬಹು ಪಕ್ಷ ಸರ್ಕಾರದ ಅಗತ್ಯವಿದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಶನಿವಾರ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಓವೈಸಿ, ಪ್ರಬಲ ಪ್ರಧಾನ ಮಂತ್ರಿ ಕೇವಲ ಪ್ರಬಲ ಜನರಿಗೆ ಮಾತ್ರ ಸಹಾಯ ಮಾಡುತ್ತಾರೆ, ದುರ್ಬಲ ವರ್ಗದವರು ಪ್ರಧಾನಿಯಾದರೆ, ಆ ವರ್ಗದವರಿಗೆ ಅನುಕೂಲವಾಗಲಿದೆ ಎಂದರು.

ಬಿಲ್ಕಿಸ್ ಬಾನೊ ಪ್ರಕರಣದ ಆರೋಪಿಗಳ ಬಿಡುಗಡೆ ವಿಚಾರದಲ್ಲಿ ಮೌನವಾಗಿದ್ದ ಆಮ್ ಆದ್ಮಿ ಪಕ್ಷ ಗುಜರಾತ್ ನಲ್ಲಿನ ಆಡಳಿತಾರೂಢ ಬಿಜೆಪಿ ಪಕ್ಷಕ್ಕಿಂತ ಭಿನ್ನವಾಗಿಲ್ಲ ಎಂದು ವಾಗ್ದಾಳಿ ನಡೆಸಿದರು. ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಎಐಎಂಐಎಂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆಎಂದು ಅವರು ಮಾಹಿತಿ ನೀಡಿದರು.

ಜವಹರ್ ಲಾಲ್ ನೆಹರು ನಂತರ ಹೆಚ್ಚಿನ ಪ್ರಬಲರಾದ ಪ್ರಧಾನಿ, ನಿರುದ್ಯೋಗ, ಹಣದುಬ್ಬರ, ಚೀನಾದ ಆಕ್ರಮಣ, ಉದ್ಯಮಿಗಳಿಗೆ ಬ್ಯಾಂಕ್ ಸಾಲ ಮನ್ನಾ ಬಗ್ಗೆ ಪ್ರಶ್ನಿಸಿದಾಗ ವ್ಯವಸ್ಥೆಯನ್ನು ದೂರುತ್ತಾರೆ. ಪ್ರಬಲ ಪ್ರಧಾನಿ ಏನು ಅಂತಾ ನೋಡಿದ್ದೇವೆ. ಈಗ ದೇಶಕ್ಕೆ ದುರ್ಬಲ ಪ್ರಧಾನಿ ಅಗತ್ಯವಿದೆ. ಇದರಿಂದ ದುರ್ಬಲ ಜನರಿಗೆ ಅನುಕೂಲವಾಗಲಿದೆ. ಅಂತೆಯೇ ದೇಶಕ್ಕೆ ಬಹು ಪಕ್ಷಗಳ ಕಿಚಡಿ ಸರ್ಕಾರದ ಅಗತ್ಯವಿದೆ. ಇದಕ್ಕಾಗಿ ಮುಂಬರುವ ಚುನಾವಣೆಯಲ್ಲಿ ಪ್ರಯತ್ನಿಸಬೇಕಾಗಿದೆ ಎಂದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್