ದೇಶ

 ಬಿಜೆಪಿ ಆಡಳಿತದಲ್ಲಿ ದೇಶದಲ್ಲಿ ತೀವ್ರ ಸಂಕಷ್ಟ- ಪವಾರ್: ವಿಪಕ್ಷಗಳ ಒಗ್ಗಟ್ಟಿಗೆ ಎನ್‌ಸಿಪಿ ಕರೆ 

Nagaraja AB

ನವದೆಹಲಿ: ಮುಂದಿನ ಸುತ್ತಿನ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ವಿರೋಧಿ ಶಕ್ತಿಗಳ ಒಗ್ಗಟ್ಟಿಗೆ ಎನ್‌ಸಿಪಿ ಶನಿವಾರ ಸ್ಪಷ್ಟ ಕರೆ ನೀಡಿದ್ದು, ಈ ನಿಟ್ಟಿನಲ್ಲಿ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಹೇಳಿದೆ. ಎನ್‌ಸಿಪಿಯ ವಿಸ್ತೃತ ಕಾರ್ಯಕಾರಿ ಸಮಿತಿಯನ್ನು ಉದ್ದೇಶಿಸಿ ಮಾತನಾಡಿದ ಪವಾರ್, ಮೋದಿ ಸರ್ಕಾರ  ರೈತ ವಿರೋಧಿಯಾಗಿದ್ದು,  ನಿರುದ್ಯೋಗ ಸಮಸ್ಯೆಯನ್ನು ನಿಭಾಯಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು. 

ಪ್ರಧಾನಿ ತವರು ಜಿಲ್ಲೆಯಲ್ಲಿ ಬಿಜೆಪಿ ಸರ್ಕಾರ ಬಿಲ್ಕಿಸ್ ಬಾನೋ ಮತ್ತು ಅವರ ಕುಟುಂಬದ ವಿರುದ್ಧ ದೌರ್ಜನ್ಯ ಎಸಗಿದ ಆರೋಪಿಗಳ ಶಿಕ್ಷೆಯನ್ನು ಕಡಿತಗೊಳಿಸಿದ ಎರಡು ದಿನಗಳ ನಂತರ ಮಹಿಳೆಯರ ಘನತೆಯನ್ನು ಎತ್ತಿಹಿಡಿಯುವ ಬಗ್ಗೆ ಪ್ರಧಾನಿ ಮಾತನಾಡಿರುವುದು ನನಗೆ ಆಶ್ಚರ್ಯ ತಂದಿದೆ  ಎಂದು ಪವಾರ್ ಹೇಳಿದರು.

ಎನ್‌ಸಿಪಿ ವಿಸ್ತೃತ ಕಾರ್ಯಕಾರಿ ಸಮಿತಿಯು ಪವಾರ್ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮರು ಆಯ್ಕೆ ಮಾಡಿದೆ. ರೈತರು ತಮ್ಮ ಭತ್ತದ ಬೆಳೆಗೆ ಉತ್ತಮ ಬೆಲೆ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ ಸರಕಾರ ಅಕ್ಕಿ ಮೇಲೆ ಶೇ.20 ರಫ್ತು ಸುಂಕ ವಿಧಿಸಿ ಒಡೆದ ಅಕ್ಕಿ ರಫ್ತು ನಿಷೇಧಿಸಿದೆ. ರಾಷ್ಟ್ರವು ತೀವ್ರ ಸಂಕಷ್ಟದಲ್ಲಿದೆ. ಪ್ರತಿ ವೇದಿಕೆಯಲ್ಲಿ ನಾವು ಈ ಸಮಸ್ಯೆಗಳನ್ನು ತೀವ್ರವಾಗಿ ತೆಗೆದುಕೊಳ್ಳಬೇಕಾಗುತ್ತದೆ  ಎಂದು ಪವಾರ್ ಹೇಳಿದರು.

ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ವಿರುದ್ಧ ಹೋರಾಡಲು ಸಮಾನ ಮನಸ್ಕ ಪಕ್ಷಗಳ ಒಗ್ಗಟ್ಟಿಗೆ ಕರೆ ನೀಡಲಾದ ಕರಡು ರಾಜಕೀಯ ನಿರ್ಣಯವನ್ನು ಸಭೆಯಲ್ಲಿ ಮಂಡಿಸಲಾಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಎನ್‌ಸಿಪಿಯ ಹಿರಿಯ ನಾಯಕ ಪಿ ಸಿ ಚಾಕೊ, ಕಾಂಗ್ರೆಸ್ ಹಳೆಯ ಮನಸ್ಥಿತಿಯಲ್ಲಿಯೇ ಉಳಿದಿದೆ ಮತ್ತು ಬದಲಾದ ರಾಜಕೀಯ ಸನ್ನಿವೇಶವನ್ನು ಗುರುತಿಸಲು ವಿಫಲವಾಗಿದೆ ಎಂದು ಟೀಕಿಸಿದರು.
 

SCROLL FOR NEXT