ದೇಶ

ಚೀನಾ ನಂಟಿದ್ದ ಶೆಲ್ ಕಂಪನಿಗಳ ಮಾಸ್ಟರ್‌ಮೈಂಡ್ ಬಂಧನ!

Vishwanath S

ನವದೆಹಲಿ: ಭಾರತದಲ್ಲಿ ಚೀನಾದ ಶೆಲ್ ಕಂಪನಿಗಳ ವಿರುದ್ಧದ ಪ್ರಮುಖ ಕಾರ್ಯಾಚರಣೆಯಲ್ಲಿ, ಗಂಭೀರ ವಂಚನೆ ತನಿಖಾ ಕಚೇರಿ ತಂಡದವರು (ಎಸ್‌ಎಫ್‌ಐಒ) ಮುಖ್ಯ ಸಂಚುಕೋರ ಮತ್ತು ದಂಧೆ ಮಾಸ್ಟರ್‌ಮೈಂಡ್ ಡಾರ್ಟ್ಸೆಯನ್ನು ಬಂಧಿಸಿದೆ.

ಬಂಧನದಿಂದ ತಪ್ಪಿಸಿಕೊಳ್ಳಲು ಡಾರ್ಟ್ಸೆ ದೆಹಲಿ ಎನ್‌ಸಿಆರ್‌ನಿಂದ ಬಿಹಾರದ ದೂರದ ಸ್ಥಳಕ್ಕೆ ಪರಾರಿಯಾಗಿದ್ದರು. ಅಲ್ಲದೆ ರಸ್ತೆ ಮಾರ್ಗದ ಮೂಲಕ ಭಾರತದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು.

ತಕ್ಷಣವೇ, SFIO ನಲ್ಲಿ ವಿಶೇಷ ತಂಡವನ್ನು ರಚಿಸಲಾಯಿತು. ತಂಡದ ಸದಸ್ಯರನ್ನು ದೂರದ ಸ್ಥಳಗಳಿಗೆ ನಿಯೋಜಿಸಲಾಯಿತು. 2022ರ ಸೆಪ್ಟೆಂಬರ್ 10ರ ಸಂಜೆ SFIO ತಂಡದವರು ಡಾರ್ಟ್ಸೆಯನ್ನು ಬಂಧಿಸಿದರು. ನಂತರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅಲ್ಲಿ ನ್ಯಾಯಾಧೀಶರು ಟ್ರಾನ್ಸಿಟ್ ರಿಮಾಂಡ್ಗೆ ಆದೇಶಿಸಿದರು ಎಂದು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ (ಎಂಸಿಎ) ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಡಾರ್ಟ್ಸೆ ಜಿಲಿಯನ್ ಇಂಡಿಯಾ ಲಿಮಿಟೆಡ್‌ನ ಮಂಡಳಿಯಲ್ಲಿದ್ದಾರೆ. ಭಾರತದಲ್ಲಿ ಚೀನಾದ ಲಿಂಕ್‌ಗಳೊಂದಿಗೆ ಹೆಚ್ಚಿನ ಸಂಖ್ಯೆಯ ಶೆಲ್ ಕಂಪನಿಗಳನ್ನು ಸಂಯೋಜಿಸುವ ಮತ್ತು ಅವರ ಮಂಡಳಿಗಳಲ್ಲಿ ಡಮ್ಮಿ ನಿರ್ದೇಶಕರನ್ನು ಒದಗಿಸುವ ಸಂಪೂರ್ಣ ದಂಧೆಯ ಮಾಸ್ಟರ್‌ಮೈಂಡ್ ಆಗಿದ್ದರು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

'ಆರ್‌ಒಸಿ (ಕಂಪನೀಸ್ ರಿಜಿಸ್ಟ್ರಾರ್) ದೆಹಲಿಯ ವಿಚಾರಣೆಯ ಸಮಯದಲ್ಲಿ ಪಡೆದ ಪುರಾವೆಗಳು ಮತ್ತು ಏಕಕಾಲಿಕ ಶೋಧ ಕಾರ್ಯಾಚರಣೆಗಳು ಹಲವಾರು ಶೆಲ್ ಕಂಪನಿಗಳಲ್ಲಿ ಡಮ್ಮಿಗಳಾಗಿ ಕಾರ್ಯನಿರ್ವಹಿಸಲು ಜಿಲಿಯನ್ ಇಂಡಿಯಾ ಲಿಮಿಟೆಡ್‌ನಿಂದ ಡಮ್ಮಿ ಡೈರೆಕ್ಟರ್‌ಗಳಿಗೆ ಹಣ ಪಾವತಿಸುತ್ತಿರುವುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ ಎಂದು ಎಂಸಿಎ ಹೇಳಿದೆ.

ಕಂಪನಿಯ ಮುದ್ರೆಗಳು ಮತ್ತು ಡಮ್ಮಿ ನಿರ್ದೇಶಕರ ಡಿಜಿಟಲ್ ಸಹಿ ತುಂಬಿದ ಬಾಕ್ಸ್‌ಗಳನ್ನು ಸೈಟ್‌ನಿಂದ ವಶಪಡಿಸಿಕೊಳ್ಳಲಾಗಿದೆ ಎಂದು MCA ತಿಳಿಸಿದೆ.

ಭಾರತೀಯ ಉದ್ಯೋಗಿಗಳು ಚೀನೀ ಇನ್‌ಸ್ಟಂಟ್ ಮೆಸೇಜಿಂಗ್ ಅಪ್ಲಿಕೇಶನ್ ಮೂಲಕ ಚೀನಾದ ಕೌಂಟರ್‌ಪಾರ್ಟ್ಸ್‌ಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಜಿಲಿಯನ್ ಇಂಡಿಯಾ ಲಿಮಿಟೆಡ್ ಪರವಾಗಿ ಹುಸಿಸ್ ಲಿಮಿಟೆಡ್ ಕೂಡ ಕಾರ್ಯನಿರ್ವಹಿಸುತ್ತಿದೆ ಎಂದು ಕಂಡುಬಂದಿದೆ. ಆರಂಭಿಕ ಅವಲೋಕನಗಳು ಜಿಲಿಯನ್ ಹಾಂಗ್ ಕಾಂಗ್ ಲಿಮಿಟೆಡ್‌ನೊಂದಿಗೆ ಹ್ಯೂಸಿಸ್ ಲಿಮಿಟೆಡ್ ಒಪ್ಪಂದ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ. ತನಿಖೆಗಳು ದೇಶದ ಆರ್ಥಿಕ ಭದ್ರತೆಗೆ ಹಾನಿಕರವಾದ ಗಂಭೀರ ಆರ್ಥಿಕ ಅಪರಾಧಗಳಲ್ಲಿ ಈ ಶೆಲ್ ಕಂಪನಿಗಳ ಒಳಗೊಳ್ಳುವಿಕೆಯನ್ನು ಬಹಿರಂಗಪಡಿಸಿದೆ, ಎಂದು ಹೇಳಲಾಗಿದೆ.

ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು 8ನೇ ಸೆಪ್ಟೆಂಬರ್ 2022 ರಂದು ಗುರ್ಗಾಂವ್‌ನಲ್ಲಿರುವ ಜಿಲಿಯನ್ ಕನ್ಸಲ್ಟೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಬೆಂಗಳೂರಿನ ಫಿನಿಂಟಿ ಪ್ರೈವೇಟ್ ಲಿಮಿಟೆಡ್ ಮತ್ತು ಹ್ಯೂಸಿಸ್ ಕನ್ಸಲ್ಟಿಂಗ್ ಲಿಮಿಟೆಡ್ (ಹಿಂದಿನ ಹೈದರಾಬಾದ್‌ನಲ್ಲಿ ಪಟ್ಟಿಮಾಡಲಾದ ಕಂಪನಿ) ಕಚೇರಿಗಳಲ್ಲಿ ಏಕಕಾಲದಲ್ಲಿ ನಡೆಸಿದ ಶೋಧ ಮತ್ತು ವಶಪಡಿಸಿಕೊಳ್ಳುವ ಕಾರ್ಯಾಚರಣೆಗಳ ನಂತರ. SFIO ತಂಡ ಡಾರ್ಟ್ಸೆಯನ್ನು ಬಂಧಿಸಿದೆ.

ಕಂಪನಿಗಳ ರಿಜಿಸ್ಟ್ರಾರ್‌ಗೆ ಸಲ್ಲಿಸಿದ ದಾಖಲೆಗಳ ಪ್ರಕಾರ ಡಾರ್ಟ್ಸೆ ಅವರು ಹಿಮಾಚಲ ಪ್ರದೇಶದ ಮಂಡಿ ನಿವಾಸಿ ಎಂದು ತೋರಿಸಿದ್ದರು.

SCROLL FOR NEXT