ದೇಶ

ಭಾರತ್ ಜೋಡೋ ಯಾತ್ರೆಗೆ ಆಹ್ವಾನ: ಉಮಾ ಭಾರತಿ ಪ್ರತಿಕ್ರಿಯಿಸಿದ್ದು ಹೀಗೆ...

Nagaraja AB

ನವದೆಹಲಿ: ರಾಹುಲ್ ಗಾಂಧಿಯವರ 'ಭಾರತ್ ಜೋಡೋ ಯಾತ್ರೆ'ಯಲ್ಲಿ ಭಾಗವಹಿಸಲು ಮಧ್ಯಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್ ಅವರ ಆಹ್ವಾನಕ್ಕೆ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕಿ ಉಮಾಭಾರತಿ ಭಾನುವಾರ ಪ್ರತಿಕ್ರಿಯಿಸಿದ್ದು,  ಅಂತಹ 'ಜೋಕ್'ಗಳು ನನಗೆ ಒಗ್ಗಲ್ಲ ಎಂದಿದ್ದಾರೆ.

ರಾಷ್ಟ್ರವ್ಯಾಪಿ ಭಾರತ್ ಜೋಡೋ ಯಾತ್ರೆ ಕೈಗೊಳ್ಳುವ ರಾಹುಲ್ ಗಾಂಧಿ ಅವರ ನಿರ್ಧಾರ ವಿಳಂಬವಾಗಿತ್ತು ಮತ್ತು ಅದರಿಂದ ಪಕ್ಷ ಹಾಗೂ ಅವರಿಗೆ ನೆರವಾಗುವುದಿಲ್ಲ ಎಂದು ಉಮಾ ಭಾರತಿ ಹೇಳಿದ ನಂತರ ಶನಿವಾರ ಕಮಲ್ ನಾಥ್ ಈ ಹೇಳಿಕೆ ನೀಡಿದ್ದರು. 

'ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಕಮಲ್ ನಾಥ್  ನನ್ನನ್ನು ಆಹ್ವಾನಿಸಿದ್ದಾರೆ ಎಂಬುದನ್ನು  ಪತ್ರಿಕೆಯಲ್ಲಿ ಓದಿದೆ. ಅದು ನನಗೆ ತಮಾಷೆಯಾಗಿ ಕಾಣುತ್ತದೆ. ಅಂತಹ ಜೋಕ್‌ಗಳು ನನಗೆ ಒಗ್ಗಲ್ಲ ಎಂದು ಅವರು ಕಮಲ್ ನಾಥ್ ಅವರನ್ನು ಉಲ್ಲೇಖಿಸಿ ಸರಣಿ ಟ್ವೀಟ್‌ ಮಾಡಿದ್ದಾರೆ.

ದೇಶ ವಿಭಜನೆಗೆ ಕಾರಣವಾದ ಮತ್ತು 1984 ರ ಸಿಖ್ ವಿರೋಧಿ ಗಲಭೆಯಲ್ಲಿ ಭಾಗಿಯಾಗಿದ್ದರಿಂದ ಭಾರತ ಜೋಡೋ ಯಾತ್ರೆ ನಡೆಸಲು ಕಾಂಗ್ರೆಸ್ ಗೆ ಯಾವುದೇ ಹಕ್ಕಿಲ್ಲ ಎಂದು ಅವರು ಹೇಳಿದ್ದಾರೆ.  ಆಗಿನ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯ ನಂತರ ನಡೆದ  ಸಿಖ್ ವಿರೋಧಿ ದಂಗೆ  ಭಾರತದ ಇತಿಹಾಸದಲ್ಲಿ ಅತಿದೊಡ್ಡ ಗುಂಪು ಹತ್ಯೆ ಎಂದು ಅವರು ಟ್ವೀಟ್ ವೊಂದರಲ್ಲಿ ತಿಳಿಸಿದ್ದಾರೆ. 

SCROLL FOR NEXT