ಆಟೋ ಡ್ರೈವರ್ 
ದೇಶ

ವಿಡಿಯೋ: ಕೇಜ್ರಿವಾಲ್ ರನ್ನು ರಾತ್ರಿ ಊಟಕ್ಕೆ ಆಹ್ವಾನಿಸಿದ ಆಟೋ ಡ್ರೈವರ್; ಮುಂದೇನಾಯ್ತು?

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪಂಜಾಬ್ ಬಳಿಕ ಮೋದಿ ತವರೂರು ಗುಜರಾತ್ ಗೆಲ್ಲುವ ಉತ್ಸುಕದಲ್ಲಿದ್ದಾರೆ. ಈ ವರ್ಷದ ಕೊನೆಯಲ್ಲಿ ಚುನಾವಣೆ ನಡೆಯಲಿರುವ ಗುಜರಾತ್ ನಲ್ಲಿ ಸರಣಿ ಸಭೆ, ಪ್ರಚಾರ ನಡೆಸುತ್ತಿರುವ...

ಅಹಮದಾಬಾದ್: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪಂಜಾಬ್ ಬಳಿಕ ಮೋದಿ ತವರೂರು ಗುಜರಾತ್ ಗೆಲ್ಲುವ ಉತ್ಸುಕದಲ್ಲಿದ್ದಾರೆ. ಈ ವರ್ಷದ ಕೊನೆಯಲ್ಲಿ ಚುನಾವಣೆ ನಡೆಯಲಿರುವ ಗುಜರಾತ್ ನಲ್ಲಿ ಸರಣಿ ಸಭೆ, ಪ್ರಚಾರ ನಡೆಸುತ್ತಿರುವ ಕೇಜ್ರಿವಾಲ್ ಸೋಮವಾರ ಆಟೋರಿಕ್ಷಾ ಚಾಲಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ದೆಹಲಿಯಲ್ಲಿ ತಮ್ಮ ಪಕ್ಷಕ್ಕೆ ಆಟೋ ಚಾಲಕರು ಸಹಾಯ ಮಾಡಿದ ರೀತಿಯಲ್ಲಿ ತಮ್ಮ ಪ್ರಯಾಣಿಕರಲ್ಲಿ ಪಕ್ಷದ ಬಗ್ಗೆ ಪ್ರಚಾರ ಮಾಡುವ ಮೂಲಕ ಗುಜರಾತ್‌ನಲ್ಲಿ ಎಎಪಿ ಗೆಲ್ಲಲು ಸಹಾಯ ಮಾಡುವಂತೆ ಅರವಿಂದ್ ಕೇಜ್ರಿವಾಲ್ ಅವರು ಮನವಿ ಮಾಡಿದರು. ಕೇಜ್ರಿವಾಲ್ ಜೊತೆ ಸಂವಾದದ ವೇಳೆ ಸಭಿಕರಲ್ಲಿ ಓರ್ವ ಆಟೋ ಡ್ರೈವರ್ ಸಿಎಂ ಕೇಜ್ರಿವಾಲ್  ಅವರಿಗೆ ತಮ್ಮ ಮನೆಗೆ ಬಂದು ಊಟ ಮಾಡುವಂತೆ ವಿನಂತಿಸಿದರು. ಕೇಜ್ರಿವಾಲ್ ಅವರು ತಕ್ಷಣವೇ ಆಹ್ವಾನವನ್ನು ಸ್ವೀಕರಿಸಿದರು.

ಪಕ್ಷದ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಹಂಚಿಕೊಂಡ ವೀಡಿಯೊದಲ್ಲಿ, ಆಟೋ ಚಾಲಕ ಕೇಜ್ರಿವಾಲ್ ಅವರನ್ನು ಊಟಕ್ಕೆ ಆಹ್ವಾನಿಸುತ್ತಿರುವುದನ್ನು ಕಾಣಬಹುದು. ”ನಾನು ನಿಮ್ಮ ದೊಡ್ಡ ಅಭಿಮಾನಿ. ಪಂಜಾಬ್‌ನ ಆಟೋ ಡ್ರೈವರ್‌ನ ಮನೆಯಲ್ಲಿ ನೀವು ರಾತ್ರಿ ಊಟ ಮಾಡುತ್ತಿರುವ ವೀಡಿಯೊವನ್ನು ನಾನು ಸಾಮಾಜಿಕ ಮಾಧ್ಯಮದಲ್ಲಿ ನೋಡಿದ್ದೇನೆ. ನೀವು ನಮ್ಮ ಮನೆಗೆ ಊಟಕ್ಕೆ ಬರುತ್ತೀರಾ?” ಎಂದು ಕೇಳುತ್ತಾರೆ. ಕೇಜ್ರಿವಾಲ್ ಅವರ ಕೋರಿಕೆಯನ್ನು ಸ್ವೀಕರಿಸಿ, ಪಕ್ಷದ ಇಬ್ಬರು ಸಹೋದ್ಯೋಗಿಗಳೊಂದಿಗೆ ಭೋಜನಕ್ಕೆ ಬರುವುದಾಗಿ ಹೇಳಿದರು.

“ನಾವು ಎಷ್ಟು ಗಂಟೆಗೆ ಬರಬೇಕು? ನಿಮ್ಮ ಆಟೋದಲ್ಲಿ ನನ್ನನ್ನು ಕರೆದುಕೊಂಡು ಹೋಗಲು ನೀವು ಇಂದು ರಾತ್ರಿ ನನ್ನ ಹೋಟೆಲ್‌ಗೆ ಬರುತ್ತೀರಾ?” ಎಂದು ಕೇಜ್ರಿವಾಲ್ ಅವರನ್ನು ನಗುತ್ತಾ ಕೇಳುತ್ತಾರೆ. ನಂತರ ರಾತ್ರಿ 8 ಗಂಟೆಗೆ ಭೋಜನವನ್ನು ನಿಗದಿಪಡಿಸಲಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವೇನ್ ಮುಚ್ಚೋದು ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ- ಇರಾನ್ ಗೆ ಟ್ರಂಪ್ ಶಾಕ್!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ: Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ; Turkey ಬೇಸ್ತು!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್; KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

ಮಿಸ್ಟರ್ 'ನಂಗ್ ಗೊತ್ತಿಲ್ಲಾ' ಗೃಹ ಸಚಿವರೇ.. ಇಲ್ನೋಡಿ, ಪುಡಿ ರೌಡಿಗಳ ಹಾವಳಿ: ಪರಮೇಶ್ವರ್ ವಿರುದ್ಧ ಜೆಡಿಎಸ್ ಕಿಡಿ

IPL 2026: ಬಟ್ಲರ್ 14,000 ರನ್ ದಾಖಲೆ; ಮಿಂಚಿದ ಶುಭ್ಮನ್ ಗಿಲ್, ಪ್ರಸಿದ್ಧ್ ಕೃಷ್ಣ; LSG ವಿರುದ್ಧ GT ಗೆಲುವು!

SCROLL FOR NEXT