ಪ್ರಭಾಸ್ 
ದೇಶ

ನವದೆಹಲಿ: ಈ ಬಾರಿ ಸೂಪರ್ ಸ್ಟಾರ್ ಪ್ರಭಾಸ್ ರಿಂದ ರಾವಣ ಪ್ರತಿಕೃತಿ ದಹನ

ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ಈ ಬಾರಿಯ ಪ್ರಸಿದ್ಧ ಲವ ಕುಶ ರಾಮಲೀಲಾದಲ್ಲಿ ರಾವಣನ ಪ್ರತಿಕೃತಿಯನ್ನು ದಕ್ಷಿಣದ ಸೂಪರ್ ಸ್ಟಾರ್ ಪ್ರಭಾಸ್ ದಹಿಸಲಿದ್ದಾರೆ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ಈ ಬಾರಿಯ ಪ್ರಸಿದ್ಧ ಲವ ಕುಶ ರಾಮಲೀಲಾದಲ್ಲಿ ರಾವಣನ ಪ್ರತಿಕೃತಿಯನ್ನು ದಕ್ಷಿಣದ ಸೂಪರ್ ಸ್ಟಾರ್ ಪ್ರಭಾಸ್ ದಹಿಸಲಿದ್ದಾರೆ. ಪ್ರತಿ ವರ್ಷದಂತೆ  ಲವ ಕುಶ ರಾಮಲೀಲಾ ಸಮಿತಿಯು ಸೆಪ್ಟೆಂಬರ್ 26 ರಿಂದ ದೆಹಲಿಯಲ್ಲಿ ದಸರಾ ಹಬ್ಬದ ಸಂಭ್ರಮದಲ್ಲಿ ರಾವಣ ಪ್ರತಿಕೃತಿ ದಹನವನ್ನು ಆಯೋಜಿಸಲಿದೆ.  

ಈ ವರ್ಷ ಕೆಂಪು ಕೋಟೆಯ ಹುಲ್ಲುಹಾಸುಗಳಲ್ಲಿ  ಅಯೋಧ್ಯೆಯ ರಾಮಮಂದಿರ-ವಿಷಯದ ಮೇಲೆ ವೇದಿಕೆ ಮಾಡಲು ಸಮಿತಿ ಹೊರಟಿದೆ. ಅಕ್ಟೋಬರ್ 5 ರಂದು ಬರುವ ವಿಜಯದಶಮಿಯಂದು ಪ್ರಭಾಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. 

ಈ ಕುರಿತು ಎಎನ್ ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಲವ ಕುಶ ರಾಮಲೀಲಾ ಸಮಿತಿಯ ಮುಖ್ಯಸ್ಥ ಅರ್ಜುನ್ ಕುಮಾರ್, ಈ ವರ್ಷದ ಯೋಜನೆಗಳ ಬಗ್ಗೆ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ. ಪ್ರಭಾಸ್ ಈಗಾಗಲೇ ಮುಂಬರುವ ಆದಿಪುರುಷ ಚಿತ್ರದಲ್ಲಿ ಭಗವಾನ್ ರಾಮನ ಪಾತ್ರವನ್ನು ನಿರ್ವಹಿಸುತ್ತಿರುವುದರಿಂದ ಈ ಬಾರಿಯ ದಸರಾದಲ್ಲಿ ರಾವಣನ ಪ್ರತಿಕೃತಿ ದಹಿಸಲು ಅವರೇ ಉತ್ತಮರು ಎಂದರು. 

ಯಾವಾಗಲೂ ರಾವಣ, ಕುಂಭಕರ್ಣ ಮತ್ತು ಮೇಘನಾದ್ ಅವರ ಮೂರು ಪ್ರತಿಕೃತಿಗಳನ್ನು ಇಡಲಾಗುತ್ತದೆ.  ಪ್ರಭಾಸ್ ಪ್ರತಿಯೊಂದಕ್ಕೂ ತನ್ನ ಬಾಣದಿಂದ ಸುಡಲಿದ್ದಾರೆ. ಈ ವರ್ಷ ಪ್ರತಿಕೃತಿಗಳು 100 ಅಡಿ ಎತ್ತರದಲ್ಲಿರುತ್ತವೆ ಎಂದು ಅವರು ತಿಳಿಸಿದರು. 
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT