ಯೋಗಿ ಆದಿತ್ಯನಾಥ್ ಮೂರ್ತಿ 
ದೇಶ

ಈ ಊರಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥರಿಗೆ ದೇವಾಲಯ, ದಿನವೂ ನಡೆಯಲಿದೆ ಪೂಜೆ, ಮಂಗಳಾರತಿ!

ಉತ್ತರ ಪ್ರದೇಶದ ಅಯೋಧ್ಯ ಸಮೀಪವಿರುವ ಸ್ಥಳವೊಂದರಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ದೇವರಂತೆ ಪೂಜಿಸುತ್ತಾರೆ. ಅವರ ರೂಪದ ಮೂರ್ತಿ ನಿರ್ಮಾಣ ಮಾಡಿ ಪ್ರತಿದಿನ ಪೂಜೆ, ಮಂಗಳಾರತಿ ಸೇರಿದಂತೆ ದೇವರಿಗೆ ಕೈಗೊಳ್ಳುವಂತೆ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಹೌದು ಆ ಊರೇ ಭರತಕುಂಡ್.

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯ ಸಮೀಪವಿರುವ ಸ್ಥಳವೊಂದರಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ದೇವರಂತೆ ಪೂಜಿಸುತ್ತಾರೆ. ಅವರ ರೂಪದ ಮೂರ್ತಿ ನಿರ್ಮಾಣ ಮಾಡಿ ಪ್ರತಿದಿನ ಪೂಜೆ, ಮಂಗಳಾರತಿ ಸೇರಿದಂತೆ ಸ್ವತಃ ದೇವರಿಗೆ ಕೈಗೊಳ್ಳುವ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಹೌದು ಆ ಊರೇ ಭರತಕುಂಡ್.

ಆರತಿ ಸಮಯದಲ್ಲಿ ಮುಖ್ಯಮಂತ್ರಿಯನ್ನು ಹೊಗಳುವ ಭಜನೆಗಳನ್ನು ಹಾಡಲಾಗುತ್ತದೆ. ಈ ಭಜನೆಗಳನ್ನು ದೇವಾಲಯವನ್ನು ನಿರ್ಮಿಸಿದ ವ್ಯಕ್ತಿ ಪ್ರಭಾಕರ ಮೌರ್ಯ ಅವರೇ ಬರೆದಿದ್ದಾರೆ. ಇವರು 2014ರಿಂದಲೂ ಯೋಗಿ ಪ್ರಚಾರಕರಾಗಿದ್ದಾರೆ.

ಸ್ಥಳ ಪ್ರಚಾರ ಮಾಡಲು ಭಜನೆಗಳ ಆಡಿಯೋ ಮತ್ತು ವಿಡಿಯೋ ಕ್ಯಾಸೆಟ್‌ಗಳನ್ನು ಸಿದ್ಧಪಡಿಸಲಾಗುತ್ತಿದೆ.

ಯುಪಿ ನಗರದಲ್ಲಿ ಬಹುಕಾಲದ ಭರವಸೆಯ ರಾಮಮಂದಿರ ನಿರ್ಮಾಣದ ಹಂತದಲ್ಲಿರುವುದರಿಂದ ಈ ದೇವಾಲಯವನ್ನು ನಿರ್ಮಿಸಲಾಗಿದೆ.  ಪ್ರಭಾಕರ ಮೌರ್ಯ ಅಯೋಧ್ಯೆಯಿಂದ ಕೇವಲ 15 ಕಿಮೀ ದೂರದಲ್ಲಿ ಈ ದೇವಾಲಯವನ್ನು ನಿರ್ಮಿಸಿದ್ದಾರೆ. ಅಯೋಧ್ಯೆ-ಗೋರಖ್‌ಪುರ ಹೆದ್ದಾರಿಯಲ್ಲಿರುವ ಭರತ್‌ಕುಂಡ್ ಬಳಿ ಇರುವ ಈ ದೇವಾಲಯದ ಜಾಗದಲ್ಲಿ ರಾಮನ ಸಹೋದರ ಭರತನು ತನ್ನ ಮರದ ಚಪ್ಪಲಿಯನ್ನು ಸಿಂಹಾಸನದ ಮೇಲೆ ಇರಿಸುವ ಮೂಲಕ 14 ವರ್ಷಗಳ ಕಾಲ ಅಯೋಧ್ಯೆಯ ಆಳ್ವಿಕೆಯನ್ನು ವಹಿಸಿಕೊಂಡನೆಂದು ನಂಬಲಾಗಿದೆ. 

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದರೆ ಯೋಗಿ ಆದಿತ್ಯನಾಥರ ದೇವಾಲಯ ನಿರ್ಮಿಸುವುದಾಗಿ ಮೌರ್ಯ ಸಂಕಲ್ಪ ಮಾಡಿದ್ದ. ಅದೇ ರೀತಿಯಲ್ಲಿ ಈಗ ಭವ್ಯವಾದ ರಾಮ ಮಂದಿರನ್ನು ನಿರ್ಮಿಸಲಾಗುತ್ತಿದೆ. ಅದರಲ್ಲಿ ಯೋಗಿ ಆದಿತ್ಯನಾಥ್ ದೊಡ್ಡ ಪಾತ್ರವನ್ನು ವಹಿಸಿದ್ದಾರೆ. ತಮ್ಮ ಸಂಕಲ್ಪ ಈಡೇರಿದ ಹಿನ್ನೆಲೆಯಲ್ಲಿ ಯೋಗಿ ದೇವಾಲಯ ನಿರ್ಮಿಸಿರುವುದಾಗಿ ಮೌರ್ಯ ಹೇಳಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT