ಪ್ರಾತಿನಿಧಿಕ ಚಿತ್ರ 
ದೇಶ

ವಿಡಿಯೋ ಕಾಲ್ ಮೂಲಕ ಹೆರಿಗೆ ಮಾಡಿಸಿದ ವೈದ್ಯ, ಮೃತ ಮಗುವಿಗೆ ಜನ್ಮ ನೀಡಿದ ಮಹಿಳೆ

ಚೆಂಗಲಪಟ್ಟುವಿನ ಚುನಂಬೆಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ (ಪಿಎಚ್‌ಸಿ) ನರ್ಸ್‌ಗಳು ಸೋಮವಾರ ವಿಡಿಯೋ ಕಾಲ್ ಮೂಲಕ ವೈದ್ಯರು ನೀಡಿದ ಸೂಚನೆಯಂತೆ ಹೆರಿಗೆ ಪ್ರಕ್ರಿಯೆ ನಡೆಸಿದ ನಂತರ 32 ವರ್ಷದ ಮಹಿಳೆಯೊಬ್ಬರು ಮೃತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಚೆನ್ನೈ: ಚೆಂಗಲಪಟ್ಟುವಿನ ಚುನಂಬೆಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ (ಪಿಎಚ್‌ಸಿ) ನರ್ಸ್‌ಗಳು ಸೋಮವಾರ ವಿಡಿಯೋ ಕಾಲ್ ಮೂಲಕ ವೈದ್ಯರು ನೀಡಿದ ಸೂಚನೆಯಂತೆ ಹೆರಿಗೆ ಪ್ರಕ್ರಿಯೆ ನಡೆಸಿದ ನಂತರ 32 ವರ್ಷದ ಮಹಿಳೆಯೊಬ್ಬರು ಮೃತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

'ಮದುರಾಂತಕಂ ಬಳಿಯ ಚುನಂಬೆಡುವಿನ ನಿವಾಸಿಯಾದ ಪುಷ್ಪಾ (32) ಅವರಿಗೆ ಸೋಮವಾರ ಹೆರಿಗೆ ದಿನಾಂಕವನ್ನು ನೀಡಲಾಗಿತ್ತು. ಅವರು ಮತ್ತು ಅವರ ಪತಿ ಅಂದು ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಪಿಎಚ್‌ಸಿಗೆ ಬಂದರು. ಆದರೆ, ಮಹಿಳೆಗೆ ನೋವು ಇಲ್ಲದ ಕಾರಣ, ಸ್ವಲ್ಪ ಸಮಯದ ನಂತರ ಹಿಂತಿರುಗಲು ದಾದಿಯರು ಸೂಚಿಸಿದ್ದರು' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪುನಃ ಸಂಜೆ 6 ಗಂಟೆಗೆ ದಂಪತಿ ಪಿಎಚ್‌ಸಿಗೆ ಹಿಂತಿರುಗಿದಾಗ ವೈದ್ಯರು ಇರಲಿಲ್ಲ. ಇದೇ ವೇಳೆ ಸ್ಕ್ಯಾನಿಂಗ್ ರಿಪೋರ್ಟ್‌ನಲ್ಲಿ ತೊಡಕುಗಳಿರುವುದನ್ನು ನರ್ಸ್ ಕಂಡುಕೊಂಡಿದ್ದಾರೆ. 'ಈ ವಿಚಾರವನ್ನು ದಾದಿಯರು ವೈದ್ಯರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅವರು ವಿಡಿಯೋ ಕರೆ ಮೂಲಕ ಕಾರ್ಯವಿಧಾನವನ್ನು ವಿವರಿಸಿದ್ದಾರೆ' ಎಂದು ಅಧಿಕಾರಿ ಹೇಳಿದರು.

ಇದು ಬ್ರೀಚ್ ಪ್ರೆಸೆಂಟೇಶನ್ (ತಲೆಯ ಬದಲಿಗೆ ಪಾದಗಳು ಹೊರಗೆ ಬರುವ ಹೆರಿಗೆ ಪ್ರಕ್ರಿಯೆ) ಆಗಿರುವುದರಿಂದ, ಮಹಿಳೆಯನ್ನು ಮಧುರಾಂತಕಂ ಸರ್ಕಾರಿ ಆಸ್ಪತ್ರೆಗೆ ಸಾಗಿಸಲು ವೈದ್ಯರು ದಾದಿಯರಿಗೆ ಸಲಹೆ ನೀಡಿದ್ದಾರೆ.

ಆಸ್ಪತ್ರೆಗೆ ತೆರಳುವ ಮಾರ್ಗಮಧ್ಯೆಯೇ ಪುಷ್ಪಾ ಅವರಿಗೆ ಹೆರಿಗೆಯಾಗಿದ್ದು, ಮೃತ ಮಗುವಿಗೆ ಜನ್ಮ ನೀಡಿದ್ದರು ಮತ್ತು ರಕ್ತ ಸ್ರಾವದಿಂದಾಗಿ ಅಸ್ವಸ್ಥರಾಗಿದ್ದರು. ಸೋಮವಾರ ರಾತ್ರಿಯ ಹೊತ್ತಿಗೆ ಅವರ ಆರೋಗ್ಯ ಸ್ಥಿರವಾಗಿತ್ತು.

ಈ ಮಧ್ಯೆ, ಪಿಎಚ್‌ಸಿಯ ವೈದ್ಯಾಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ ಎಂದು ಸಾರ್ವಜನಿಕ ಆರೋಗ್ಯ ನಿರ್ದೇಶಕ ಡಾ. ಟಿ.ಎಸ್. ಸೆಲ್ವವಿನಾಯಗಂ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜ್ಞಾನೇಶ್ ಕುಮಾರ್ ವಿರುದ್ಧ ದೆಹಲಿ, ಮುಂಬೈನಲ್ಲಿ ಬೃಹತ್ ಪ್ರತಿಭಟನೆ; 700 ಮಂದಿ ವಶಕ್ಕೆ

FlyDubai ಘಟನೆ ಹಿಂದೆ ಯಾವುದೇ ಶಕ್ತಿಯ ಕೈವಾಡವಿದ್ದರೂ ಡೋಂಟ್ ಕೇರ್; 'ಭಾರಿ ಬೆಲೆ' ತೆರಬೇಕಾಗುತ್ತೆ- ಇಸ್ರೇಲ್ ಪ್ರಧಾನಿ ನೆತನ್ಯಾಹು ಎಚ್ಚರಿಕೆ

ಬಿಹಾರ ಪ್ರವಾಹ: ವಾಯುಪಡೆಯ ಹೆಲಿಕಾಪ್ಟರ್‌ನಿಂದ ಪರಿಹಾರ ಸಾಮಗ್ರಿಯ ಪ್ಯಾಕೆಟ್ ಬಿದ್ದು ವೃದ್ಧ ಸಾವು!

Asian Games 2026: 44 ವರ್ಷಗಳ ಬರ ನೀಗಿಸಿದ ಮಹಿಳಾ ಪಡೆ; ಚೀನಾ ಮಣಿಸಿ ಚಿನ್ನ ಗೆದ್ದ ಭಾರತ!

CJP ಪ್ರತಿಭಟನೆಗೆ ಕೈಜೋಡಿಸಿದ ನಸೀರುದ್ದೀನ್ ಶಾ; ನಟನನ್ನು ಅಪ್ಪಿಕೊಂಡು ಕಣ್ಣೀರಿಟ್ಟ ಅಭಿಜೀತ್ ದೀಪ್ಕೆ; Video!