ದೇಶ

ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ: ಗೆಹ್ಲೋಟ್, ಪೈಲಟ್ ಗೆ ರಾಹುಲ್ ಗಾಂಧಿಯ 'ಹೌದು ಅಥವಾ ಇಲ್ಲ' ಅಭಿಪ್ರಾಯವೇ ನಿರ್ಣಾಯಕ!

Srinivas Rao BV

ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯ ನೇರ ಪರಿಣಾಮ ರಾಜಸ್ಥಾನದ ರಾಜಕಾರಣದ ಮೇಲೆ ಆಗುತ್ತಿರುವುದು ಸ್ಪಷ್ಟವಾಗುತ್ತಿದೆ. 

ಸಿಎಂ ಅಶೋಕ್ ಗೆಹ್ಲೋಟ್ ರಾಷ್ಟ್ರಾಧ್ಯಕ್ಷರ ಹುದ್ದೆಯ ರೇಸ್ ನಲ್ಲಿ ಮುಂಚೂಣಿಯಲ್ಲಿರುವುದು ಸಿಎಂ ಗೆಹ್ಲೋಟ್ ಮಾತ್ರವಷ್ಟೇ ಅಲ್ಲದೇ, ಅವರ ಮುಖ್ಯ ಎದುರಾಳಿ ಸಚಿನ್ ಪೈಲಟ್ ಅವರ ರಾಜಕೀಯ ಭವಿಷ್ಯದ ಮೇಲೆಯೂ ಪರಿಣಾಮ ಹೊಂದಿರಲಿದೆ. ಉಭಯ ನಾಯಕರಿಗೂ ತಮ್ಮೆಡೆಗೆ ರಾಹುಲ್ ಗಾಂಧಿ ಅವರ ಅಭಿಪ್ರಾಯ ಅಥವಾ ಯೆಸ್ ಅಥವಾ ನೋ ಬಹಳ ನಿರ್ಣಾಯಕವಾಗಿರಲಿದೆ.

ಇದನ್ನೂ ಓದಿ: ಪಕ್ಷದ ಕಾರ್ಯಕರ್ತರ ಇಚ್ಛೆಗೆ ಬದ್ಧ; ಕೊನೆಯ ಬಾರಿಗೆ ರಾಹುಲ್ ಮನವೊಲಿಸಲು ಪ್ರಯತ್ನಿಸುವೆ: ಅಶೋಕ್ ಗೆಹ್ಲೋಟ್
 
ಹಲವು ಸಾರ್ವಜನಿಕ ವೇದಿಕೆಗಳಲ್ಲಿ ಗೆಹ್ಲೋಟ್ ತಾವು ಕಾಂಗ್ರೆಸ್ ರಾಷ್ಟ್ರಾಧ್ಯಕ್ಷರಾಗಲು ಆಸಕ್ತಿ ಹೊಂದಿಲ್ಲ, ರಾಜಸ್ಥಾನದಲ್ಲೇ ಉಳಿಯಬೇಕೆಂಬ ಮನಸ್ಸಿದೆ ಎಂದೇನೋ ಹೇಳಿದ್ದಾರೆ. ಅವರಿಗೆ ರಾಹುಲ್ ಗಾಂಧಿ ಅವರೇ ರಾಷ್ಟ್ರಾಧ್ಯಕ್ಷರಾಗಬೇಕೆಂಬ ಆಶಯವಿದೆ. ಗೆಹ್ಲೋಟ್ ಇದಕ್ಕಾಗಿಯೇ ಗುರುವಾರದಂದು ಕೊಚಿಗೆ ಭೇಟಿ ನೀಡಿ, ರಾಹುಲ್ ಗಾಂಧಿ ಅವರನ್ನು ಈ ನಿಟ್ಟಿನಲ್ಲಿ ಮನವೊಲಿಕೆ ಮಾಡಲು ಗೆಹ್ಲೋಟ್ ಯತ್ನಿಸಿದ್ದರು. ಗೆಹ್ಲೋಟ್ ಗೆ ತಾವು ಹೇಳುವುದಕ್ಕೆ ರಾಹುಲ್ ಗಾಂಧಿ ಯೆಸ್ ಎನ್ನುವುದು ಬಹಳ ಮುಖ್ಯವಾಗಿದೆ.

ಪಕ್ಷದ ಒಬ್ಬ ವ್ಯಕ್ತಿಗೆ ಒಂದು ಹುದ್ದೆ ನಿಯಮದ ಪ್ರಕಾರ ರಾಜಸ್ಥಾನ ಸಿಎಂ ಗೆಹ್ಲೋಟ್ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷರಾದರೆ, ಅವರು ಮುಖ್ಯಮಂತ್ರಿ ಹುದ್ದೆ ತೊರೆಯಬೇಕಾಗುತ್ತದೆ!

ಇತ್ತ ಸಚಿನ್ ಪೈಲಟ್ ಗೆಹ್ಲೋಟ್ ಹೇಳುವುದಕ್ಕೆ ರಾಹುಲ್ ಗಾಂಧಿ ನೋ ಎಂದು ಹೇಳಲಿ ಎಂದು ಕಾಯುತ್ತಿದ್ದಾರೆ. ಏಕೆಂದರೆ ಗೆಹ್ಲೋಟ್ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷರಾದರೆ ರಾಜಸ್ಥಾನದ ಸಿಎಂ ಹುದ್ದೆ ಖಾಲಿಯಾಗುತ್ತದೆ. ಇದನ್ನೇ ಸಚಿನ್ ಪೈಲಟ್ ಹಲವು ವರ್ಷಗಳಿಂದ ಕಾಯುತ್ತಿದ್ದಾರೆ. 2 ವರ್ಷಗಳ ಹಿಂದೆ ಗೆಹ್ಲೋಟ್ ಸರ್ಕಾರದ ವಿರುದ್ಧ ಬಂಡಾಯವೆದ್ದಿದ್ದ ಪೈಲಟ್ ಸರ್ಕಾರ ಪತನಕ್ಕೂ ಯತ್ನಿಸಿದ್ದರು.

SCROLL FOR NEXT