ಜ್ಞಾನವಾಪಿ ಮಸೀದಿ 
ದೇಶ

ಗ್ಯಾನ್ ವಾಪಿ ವಿವಾದ: ಶಿವಲಿಂಗದ ಕಾರ್ಬನ್ ಡೇಟಿಂಗ್ ಗೆ ಮನವಿ ಮಾಡಿದ್ದ ಅರ್ಜಿ ಮಾನ್ಯ; ಸೆ.29 ಕ್ಕೆ ಮುಂದಿನ ವಿಚಾರಣೆ

ಗ್ಯಾನ್ ವಾಪಿ ಮಸೀದಿ ಸಂಕೀರ್ಣದಲ್ಲಿ ಪತ್ತೆಯಾಗಿದೆ ಎಂದು ಹೇಳಲಾಗುತ್ತಿರುವ ಶಿವಲಿಂಗದ ಕಾರ್ಬನ್ ಡೇಟಿಂಗ್ ನಡೆಸಲು ಮನವಿ ಮಾಡಿದ್ದ ಅರ್ಜಿಯನ್ನು ವಾರಣಾಸಿ ಜಿಲ್ಲಾ ನ್ಯಾಯಾಲಯ ಗುರುವಾರ ಅಂಗೀಕರಿಸಿದೆ.

ವಾರಣಾಸಿ: ಗ್ಯಾನ್ ವಾಪಿ ಮಸೀದಿ ಸಂಕೀರ್ಣದಲ್ಲಿ ಪತ್ತೆಯಾಗಿದೆ ಎಂದು ಹೇಳಲಾಗುತ್ತಿರುವ ಶಿವಲಿಂಗದ ಕಾರ್ಬನ್ ಡೇಟಿಂಗ್ ನಡೆಸಲು ಮನವಿ ಮಾಡಿದ್ದ ಅರ್ಜಿಯನ್ನು ವಾರಣಾಸಿ ಜಿಲ್ಲಾ ನ್ಯಾಯಾಲಯ ಗುರುವಾರ ಅಂಗೀಕರಿಸಿದ್ದು ಆಕ್ಷೇಪಣೆಗಳಿದ್ದರೆ ಸಲ್ಲಿಸುವಂತೆ ಮಸೀದಿಯ ಆಡಳಿತಕ್ಕೆ ಹೇಳಿ, ಮುಂದಿನ ವಿಚಾರಣೆಯನ್ನು ಸೆ.29 ಕ್ಕೆ ನಿಗದಿಪಡಿಸಿದೆ.

ಗ್ಯಾನ್ ವಾಪಿ ಮಸೀದಿ- ಶೃಂಗಾರ್ ಗೌರಿ ವಿವಾದಕ್ಕೆ ಸಂಬಂಧಿಸಿದಂತೆ ಹಿಂದೂಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಯೋಗ್ಯವೆಂದು ಸೆ.12 ರಂದು ಆದೇಶ ನೀಡಿದ್ದ ಕೋರ್ಟ್ ನ ನ್ಯಾ. ಎ.ಕೆ ವಿಶೇಷ್ ಗುರುವಾರ ವಿಚಾರಣೆ ಆರಂಭಿಸಿದರು. 

ಮಸೀದಿಯ ಆವರಣದಲ್ಲಿ ಇರುವ ಹಿಂದೂ ದೇವತೆಗಳ ವಿಗ್ರಹ ಅಥವಾ ಕೆತ್ತನೆಗಳಿಗೆ ಪ್ರತಿ ದಿನ ಪೂಜೆ ಸಲ್ಲಿಸಲು ಅನುಮತಿ ನೀಡಬೇಕೆಂದು ಅರ್ಜಿದಾರರು ಮನವಿ ಮಾಡಿದ್ದರು. 

ಅರ್ಜಿದಾರ ಮಹಿಳೆಯ ಪರವಾಗಿ ವಾದ ಮಂಡಿಸಿರುವ ವಿಷ್ಣು ಶಂಕರ್ ಜೈನ್, ಇಂದಿನ ವಿಚಾರಣೆಯಲ್ಲಿ ಕೋರ್ಟ್ ಎದುರು ಶಿವಲಿಂಗದ ಕಾರ್ಬನ್ ಡೇಟಿಂಗ್ ಮಾಡುವ ಮನವಿಯನ್ನಿಟ್ಟರು. ಅರ್ಜಿ ಅಂಗೀಕರಿಸಿದ ನ್ಯಾಯಾಧೀಶರು, ಸೆ.29 ಎಂದು ಮುಂದಿನ ವಿಚಾರಣೆಯನ್ನು ನಿಗದಿಪಡಿಸಿದೆ. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಚುನಾವಣೆಯಲ್ಲಿ ಅಕ್ರಮ ನಡೆದರೆ ಸ್ಪರ್ಧಿಸಬೇಡಿ, ಚುನಾವಣೆಯನ್ನೇ ಬಹಿಷ್ಕರಿಸಿ:': ಪ್ರತಿಪಕ್ಷಗಳಿಗೆ CJPಯ ಅಭಿಜೀತ್ ದೀಪ್ಕೆ ಆಗ್ರಹ

SIR ಕುರಿತು ಚುನಾವಣಾ ಆಯೋಗ ಏಕಪಕ್ಷೀಯ ನಿರ್ಧಾರ ಆರೋಪ: CEC ಜ್ಞಾನೇಶ್ ಕುಮಾರ್ ವಿರುದ್ಧ ಕ್ರಮಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ PIL

'ರಾಸಲೀಲೆ ದೃಶ್ಯ' ಲೀಕ್ ಆದಾಗ ನಾಲ್ಕು ದಿನ ಮನೆಯಿಂದ ಹೊರ ಬಂದಿರಲಿಲ್ಲ; ಕಾರು ಚಾಲಕ, ವಾಚ್'ಮನ್ ಸಹ ಆ ವಿಡಿಯೋ ನೋಡಿದ್ದ: ನಟಿ ರಾಧಿಕಾ

ಮಹಿಳೆ ಫೋಟೋ ಮಾರ್ಫ್ ಮಾಡಿ ಪ್ರಧಾನಿ ಮೋದಿ ಫೋಟೋದೊಂದಿಗೆ ಪ್ರದರ್ಶನ: CJP ವಿರುದ್ಧ FIR ದಾಖಲು

ಆಯೋಗದ ವಿವಾದ: CEC Gyanesh Kumar ಭಾಗಿಯಾಗಬೇಕಿದ್ದ ಯುವಕರೊಂದಿಗಿನ ಕಾರ್ಯಕ್ರಮ ದಿಢೀರ್ ರದ್ದು!