ಎನ್ಐಎ ದಾಳಿ ಖಂಡಿಸಿ ಗೋ ಬ್ಯಾಕ್ ಎನ್ಐಎ ಎಂದು ಘೋಷಣೆ ಕೂಗುತ್ತಿರುವ ಪಿಎಫ್ಐ ಕಾರ್ಯಕರ್ತರು 
ದೇಶ

ಇದು ಎನ್ಐಎ ಅತಿ ದೊಡ್ಡ ಕಾರ್ಯಾಚರಣೆ; 15 ರಾಜ್ಯಗಳಿಂದ 106 ಮಂದಿ ಬಂಧನ!

ಪಿಎಫ್ಐ ಕೃತ್ಯಗಳು ಜನರ ಮನಸ್ಸಿನಲ್ಲಿ ಭೀತಿ ಉಂಟುಮಾಡುವ ಪರಿಣಾಮಗಳನ್ನು ಹೊಂದಿರುತ್ತಿದ್ದವು ಎಂದು ರಾಷ್ಟ್ರೀಯ ತನಿಖಾ ಏಜೆನ್ಸಿ ಹೇಳಿದೆ.

ನವದೆಹಲಿ: ಸಹೋದ್ಯೋಗಿ ಪ್ರಾಧ್ಯಾಪಕರ ಕೈ ಕತ್ತರಿಸುವುದು, ಅನ್ಯ ಸಿದ್ಧಾಂತದ ಸಂಘಟನೆಗಳೊಂದಿಗೆ ಗುರುತಿಸಿಕೊಳ್ಳುವವರ ಭೀಕರ ಹತ್ಯೆ ಈ ರೀತಿಯಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕೃತ್ಯಗಳು ಜನರ ಮನಸ್ಸಿನಲ್ಲಿ ಭೀತಿ ಉಂಟುಮಾಡುವ ಪರಿಣಾಮಗಳನ್ನು ಹೊಂದಿರುತ್ತಿದ್ದವು ಎಂದು ರಾಷ್ಟ್ರೀಯ ತನಿಖಾ ಏಜೆನ್ಸಿ ಹೇಳಿದೆ.
 
ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸುತ್ತಿದ್ದದ್ದಕ್ಕೆ 15 ರಾಜ್ಯಗಳಲ್ಲಿ ದಾಳಿ ನಡೆಸಿ, ಪಿಎಫ್ಐ ನ 106 ಕಾರ್ಯಕರ್ತರನ್ನು ಬಂಧಿಸಿದ ಬಳಿಕ ಎನ್ಐಎ ಈ ಹೇಳಿಕೆ ನೀಡಿದೆ.

ದಾಳಿ ನಡೆದ ವೇಳೆ ಹೆಚ್ಚಿನ ಸಂಖ್ಯೆಯ ಡಿಜಿಟಲ್ ಸಾಧನಗಳ ಜೊತೆಗೆ ದೋಷಾರೋಪಣೆಯ ದಾಖಲೆಗಳು, ನಗದು, ಹರಿತವಾದ ಅಂಚಿರುವ ಆಯುಧಗಳನ್ನು ವಶಕ್ಕೆ ಪಡೆಯಲಾಗಿದ್ದು, ಶೋಧಕಾರ್ಯಾಚರಣೆಯಲ್ಲಿ ನಡೆದಿರುವ ಬಂಧನಗಳ ಸಂಖ್ಯೆ ಇದುವರೆಗಿನ ತನಿಖೆಯ ಪ್ರಕ್ರಿಯೆಯಲ್ಲಿಯೇ ದೊಡ್ಡದಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಪಿಎಫ್​ಐ, ಎಸ್​ಡಿಪಿಐ ಮೇಲೆ ಎನ್​ಐಎ ದಾಳಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಮಹತ್ವದ ಸಭೆ
ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಉತ್ತರ ಪ್ರದೇಶ, ರಾಜಸ್ಥಾನ, ದೆಹಲಿ, ಅಸ್ಸಾಂ, ಮಧ್ಯಪ್ರದೇಶ, ಮಹಾರಾಷ್ಟ್ರ, ಗೋವಾ, ಪಶ್ಚಿಮ ಬಂಗಾಳ, ಬಿಹಾರ, ಮಣಿಪುರ ಸೇರಿ 15 ರಾಜ್ಯಳ 93 ಪ್ರದೇಶಗಳಲ್ಲಿ ಎನ್ಐಎ ದಾಳಿ ನಡೆದಿದೆ.      

ಎನ್ ಐಎ ದಾಖಲಿಸಿದ್ದ 5 ಪ್ರಕರಣಗಳ ಆಧಾರದಲ್ಲಿ ಜಾರಿ ನಿರ್ದೇಶನಾಲಯ, ರಾಜ್ಯ ಪೊಲೀಸ್ ತಂಡಗಳನ್ನೊಳಗೊಂಡ ಜಂಟಿ ಕಾರ್ಯಾಚರಣೆ ಇದಾಗಿದ್ದು, ಭಯೋತ್ಪಾದನಾ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡುವುದು, ತರಬೇತಿ ಕ್ಯಾಂಪ್ ಗಳನ್ನು ಆಯೋಜಿಸುವುದು, ಶಸ್ತ್ರಸಜ್ಜಿತ ತರಬೇತಿಗಳನ್ನು ನೀಡುವುದು ಜನರನ್ನು ತೀವ್ರಗಾಮಿಗಳನ್ನಾಗಿಸಿ ನಿಷೇಧಿತ ಸಂಘಟನೆಗಳಿಗೆ ಸೇರಿಸುತ್ತಿದ್ದ ಕೃತ್ಯಗಳಲ್ಲಿ ತೊಡಗಿದ್ದ ನಾಯಕರ ವಿರುದ್ಧ ಮಾಹಿತಿ ಕಲೆಹಾಕಿ ಈ ದಾಳಿ ನಡೆದಿದೆ. 

ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ವಿವಿಧ ಸಂಸ್ಥೆಗಳು ಪ್ರತ್ಯೇಕವಾಗಿ ಶಂಕಿತರನ್ನು ಬಂಧಿಸಿವೆ. ಈ ಪೈಕಿ ಎನ್ಐಎ ಒಂದೇ ಸಂಸ್ಥೆ 5 ರಾಜ್ಯಗಳಿಂದ 45 ಮಂದಿಯನ್ನು ಬಂಧನಕ್ಕೆ ಒಳಪಡಿಸಿದೆ.

ಕೇರಳದಲ್ಲಿ ಅತಿ ಹೆಚ್ಚು ಮಂದಿ (22) ಬಂಧನಕ್ಕೆ ಒಳಗಾಗಿದ್ದರೆ, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ 20 ಮಂದಿ, ಆಂಧ್ರಪ್ರದೇಶದಲ್ಲಿ 5 ಶಂಕಿತರು, ಪಾಂಡಿಚೆರಿಯಲ್ಲಿ 3, ತಮಿಳುನಾಡಿನಲ್ಲಿ 10 ಮಂದಿ, ಉತ್ತರ ಪ್ರದೇಶದಲ್ಲಿ 8 ಶಂಕಿತರು, ರಾಜಸ್ಥಾನದಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

SCROLL FOR NEXT