ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ರಾಹುಲ್ ಗಾಂಧಿ ನೇತೃತ್ವದ 'ಭಾರತ್ ಜೋಡೋ ಯಾತ್ರೆ'ಗೆ ಹಾಲಿವುಡ್ ಸ್ಟಾರ್ ಬೆಂಬಲ!

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಗೆ ಹಾಲಿವುಡ್ ಸ್ಟಾರ್ ಜಾನ್ ಕ್ಯುಸಾಕ್ ಶನಿವಾರ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ರಾಹುಲ್ ಗಾಂಧಿ ಯಾತ್ರೆ, ಹಾಲಿವುಡ್ ಸ್ಟಾರ್ ಜಾನ್ ಕ್ಯುಸಾಕ್
Nagaraja AB
Updated On : 5 Nov 2022, 3:34 pm

ನವದೆಹಲಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಗೆ ಹಾಲಿವುಡ್ ಸ್ಟಾರ್ ಜಾನ್ ಕ್ಯುಸಾಕ್ ಶನಿವಾರ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ಎಲ್ಲೆಡೆ ಫ್ಯಾಸಿಸ್ಟ್ ವಿರೋಧಿ ಜೊತೆ ಒಗ್ಗಟ್ಟಾಗಿ ನಿಲ್ಲುವುದಾಗಿ ಹೇಳಿದ್ದಾರೆ. ಸೆರೆಂಡಿಪಿಟಿ, ಹೈ ಫಿಡೆಲಿಟಿ, ಕಾನ್ ಏರ್ ಮತ್ತು 2012 ರಂತಹ ಬ್ಲಾಕ್‌ಬಸ್ಟರ್‌ಗಳ ಸ್ಟಾರ್ ಕುಸಾಕ್, ಸಾಮಾಜಿಕ ಮಾಧ್ಯಮದಲ್ಲಿ ವಿವಿಧ ಜಾಗತಿಕ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದಾರೆ.

56 ವರ್ಷದ  ನಟ ತಮ್ಮ ಟ್ವೀಟರ್ ಖಾತೆಯಲ್ಲಿ, ಭಾರತೀಯ ಸಂಸತ್ ಸದಸ್ಯ ರಾಹುಲ್ ಗಾಂಧಿ ಕೇರಳದಿಂದ ಕಾಶ್ಮೀರಕ್ಕೆ ನಡೆದುಕೊಂಡು ಹೋಗುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ. ರಾಹುಲ್ ಗಾಂಧಿಯವರ ಅಭಿಯಾನವನ್ನು ಬೆಂಬಲಿಸಿದ್ದಕ್ಕಾಗಿ ಟ್ವಿಟಿಗರು ಕುಸಾಕ್‌ಗೆ ಧನ್ಯವಾದ ಸಲ್ಲಿಸಿದ ನಂತರ, "ಹೌದು - ಎಲ್ಲೆಡೆ ಫ್ಯಾಸಿಸ್ಟ್ ವಿರೋಧಿಗಳ ವಿರುದ್ಧ ಒಗ್ಗಟ್ಟಾಗಬೇಕಾಗಿದೆ ಎಂದು ಹೇಳಿದ್ದಾರೆ. 

Advertisement

Advertisement

ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ' ಕಾಂಗ್ರೆಸ್ ಗೆ ಐತಿಹಾಸಿಕ ತಿರುವು ನೀಡಲಿದೆ: ಕೆ.ಸಿ.ವೇಣುಗೋಪಾಲ್

ಈ ನಟ ಹಿಂದೆ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಗಳಿಗೆ ಮತ್ತು ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಬೆಂಬಲವನ್ನು ನೀಡಿದ್ದರು.

ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆ 150 ದಿನಗಳಲ್ಲಿ 3,570 ಕಿ.ಮೀ ಕ್ರಮಿಸಲಿದೆ. ಇದು ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾಯಿತು ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಮುಕ್ತಾಯಗೊಳ್ಳಲಿದೆ.

ಸೆ.10ರಂದು ಸಂಜೆ ಕೇರಳ ಪ್ರವೇಶಿಸಿದ ಯಾತ್ರೆಯು 450 ಕಿ.ಮೀ ರಾಜ್ಯದ ಮೂಲಕ ಸಾಗಲಿದ್ದು, 19 ದಿನಗಳಲ್ಲಿ ಏಳು ಜಿಲ್ಲೆಗಳನ್ನು ಪ್ರವೇಶಿಸಲಿದ್ದು, ಅಕ್ಟೋಬರ್ 1ರಂದು ಕರ್ನಾಟಕ ಪ್ರವೇಶಿಸಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments