ಪ್ರಾತಿನಿಧಿಕ ಚಿತ್ರ 
ದೇಶ

ಅಂಬಾಲಾ ಸೆಂಟ್ರಲ್ ಜೈಲಿನಲ್ಲಿ ನೇಣು ಬಿಗಿದುಕೊಂಡು ಕೊಲೆ ಆರೋಪಿ ಆತ್ಮಹತ್ಯೆ

2019ರ ಕೊಲೆ ಪ್ರಕರಣದ ಆರೋಪಿಯಾಗಿದ್ದ 40 ವರ್ಷದ ವ್ಯಕ್ತಿಯೊಬ್ಬ ಇಲ್ಲಿನ ಕೇಂದ್ರ ಕಾರಾಗೃಹದ ತನ್ನ ಬ್ಯಾರಕ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಅಂಬಾಲಾ: 2019ರ ಕೊಲೆ ಪ್ರಕರಣದ ಆರೋಪಿಯಾಗಿದ್ದ 40 ವರ್ಷದ ವ್ಯಕ್ತಿಯೊಬ್ಬ ಇಲ್ಲಿನ ಕೇಂದ್ರ ಕಾರಾಗೃಹದ ತನ್ನ ಬ್ಯಾರಕ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಉತ್ತರ ಪ್ರದೇಶದ ಗೊಂಡಾ ಗ್ರಾಮದ ನಿವಾಸಿಯಾದ ಸರ್ವೇಶ್ ಸೇವಕ್ ಭಾನುವಾರ ಜೈಲಿನ ಬ್ಯಾರಕ್‌ನಲ್ಲಿ ಹಗ್ಗದಿಂದ ನೇಣು ಬಿಗಿದುಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, 2019ರಲ್ಲಿ ಸೇವಕ್ ಕೆಲಸ ಹುಡುಕಿಕೊಂಡು ಅಂಬಾಲಾ ನಗರಕ್ಕೆ ಬಂದಿದ್ದ. ಈ ವೇಳೆ ಈಗಾಗಲೇ ವಲಸೆ ಕಾರ್ಮಿಕನಾಗಿದ್ದ ನಿಕ್ಕು ಎಂಬಾತ ವಾಸಿಸುತ್ತಿದ್ದ ಮೋಟಾರ್ ಮಾರ್ಕೆಟ್ ಪ್ರದೇಶದಲ್ಲಿ ಬಾಡಿಗೆಗೆ ಮನೆಯನ್ನು ತೆಗೆದುಕೊಂಡಿದ್ದ. ಅದೇ ವರ್ಷ ಏಪ್ರಿಲ್‌ನಲ್ಲಿ ಸೇವಕ್ ಮತ್ತು ನಿಕ್ಕು ನಡುವೆ ಕೆಲವು ವಿಚಾರಗಳಿಗೆ ಅಸಮಾಧಾನ ಉಂಟಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ, 2019ರ ಏಪ್ರಿಲ್ 6 ರಂದು ಟೆರೇಸ್ ಮೇಲೆ ಮಲಗಿದ್ದಾಗ ನಿಕ್ಕುನನ್ನು ಸೇವಕ್ ಹಗ್ಗದಿಂದ ಕತ್ತು ಹಿಸುಕಿ ಕೊಂದಿದ್ದಾನೆ. ನಿಕ್ಕು ಅವರ ದೇಹವು ಹಾಸಿಗೆಯ ಕೆಳಗೆ ಬಿದ್ದಿರುವುದು ಕಂಡುಬಂದಿದೆ ಮತ್ತು ಘಟನೆಯ ನಂತರ ಸೇವಕ್ ಪರಾರಿಯಾಗಿದ್ದನು ಎಂದು ಅವರು ತಿಳಿಸಿದ್ದಾರೆ.

ಬಲಿಕ ಸೇವಕ್‌ನನ್ನು ಬಂಧಿಸಲಾಯಿತು ಮತ್ತು ಪೊಲೀಸರು ಆತನ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: 1 ನಿಮಿಷದಲ್ಲಿ 2 ಚಿನ್ನದ ಪದಕ ಗೆದ್ದ ಭಾರತ, 75 ಪದಕಗಳೊಂದಿಗೆ 5ನೇ ಸ್ಥಾನಕ್ಕೆ ಲಗ್ಗೆ!

‘CEC ಜ್ಞಾನೇಶ್ ಕುಮಾರ್ ದೇಶದ್ರೋಹಿ’: ಮುಂಬೈನಲ್ಲಿ ಭುಗಿಲೆದ್ದ Cockroach Janata Party ಪ್ರತಿಭಟನೆ, ರಾಜೀನಾಮೆಗೆ ಬಿಗಿಪಟ್ಟು..!

ಜೆಡಿಎಸ್ ಪ್ರಧಾನ ಕಾರ್ಯದರ್ಶಿಯಾಗಿ Biggboss ಮಾಜಿ ಸ್ಪರ್ಧಿ ಜಾಹ್ನವಿ ನೇಮಕ!

Pakನ ಹೊಸ ನಾಟಕ: ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಹತ್ಯೆಗೀಡಾದ SSG ಉಗ್ರ ಜೀವಂತವಾಗಿದ್ದಾನೆ ಎಂದ ಪಾಕ್ ಸೇನೆ

ಬೆಳಗಾವಿಯಲ್ಲಿ 100 ಕೋಟಿ ರೂ ವೆಚ್ಚದಲ್ಲಿ ಗಾಂಧೀಜಿ ಸ್ಮಾರಕ ನಿರ್ಮಾಣ- ಸಿಎಂ ಡಿಕೆ ಶಿವಕುಮಾರ್ ಘೋಷಣೆ!