ದೇಶ

ಕೇರಳ: 13 ಲಂಕಾ ನಿರಾಶ್ರಿತರ ಬಂಧನ, ಅಪ್ರಾಪ್ತರ ವಿರುದ್ಧ ಅಕ್ರಮ ವಲಸೆ ಆರೋಪ ಕೈ ಬಿಟ್ಟ ಪೊಲೀಸರು

Nagaraja AB

ಕೊಲ್ಲಂ: ಅಕ್ರಮವಾಗಿ ಆಸ್ಟ್ರೇಲಿಯಾಕ್ಕೆ ವಲಸೆ ಹೋಗಲು ಯತ್ನಿಸಿದ ಶ್ರೀಲಂಕಾದ  13 ನಿರಾಶ್ರಿತರನ್ನು ಕೊಲ್ಲಂ ಪೊಲೀಸರು ಬಂಧಿಸಿದ ಎರಡು ವಾರಗಳ ನಂತರ, ಬಂಧಿತರಾಗಿದ್ದ ಮೂವರು ಅಪ್ರಾಪ್ತರ ವಿರುದ್ಧದ ಆರೋಪವನ್ನು ಪೊಲೀಸರು ಕೈಬಿಟ್ಟಿದ್ದಾರೆ. 14 ಮತ್ತು 17 ವರ್ಷ ವಯಸ್ಸಿನ ಇಬ್ಬರು ಬಾಲಕಿಯರು ಮತ್ತು 5 ವರ್ಷದ ಬಾಲಕನ  ವಿರುದ್ಧದ ಆರೋಪವನ್ನು ಕೈ ಬಿಡಲಾಗಿದೆ.

ಪ್ರಸ್ತುತ ಇಬ್ಬರು ಬಾಲಕಿಯರು ಕೊಝಿಕೋಡುವಿನ ಸರ್ಕಾರಿ ಬಾಲಕಿಯರ ರಕ್ಷಣಾ ಗೃಹದಲ್ಲಿ ಉಳಿದುಕೊಂಡಿದ್ದು, ಬಾಲಕ ತಿರುವನಂತಪುರಂನಲ್ಲಿರುವ ರಕ್ಷಣಾ ಕೇಂದ್ರದಲ್ಲಿರುವ ತನ್ನ ತಾಯಿ ಜೊತೆಯಲ್ಲಿದ್ದಾನೆ. ಭಾರತೀಯ ವಿದೇಶಿಗರ ಕಾಯ್ದೆ 1946 ರ ಅಡಿಯ ಅವರ ವಿರುದ್ಧದ ಆರೋಪವನ್ನು ರದ್ದು ಪಡಿಸಲಾಗಿದೆ.

ಈ ನಿರ್ಧಾರಕ್ಕೆ ನಿರಾಶ್ರಿತರ ಪರ ವಕೀಲರು ಸಂತೋಷ ವ್ಯಕ್ತಪಡಿಸಿದ್ದಾರೆ. ಇಬ್ಬರೂ ಬಾಲಕಿಯರನ್ನು ಬುಧವಾರ ಕೊಲ್ಲಂನ ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಹಾಜರುಪಡಿಸಲಾಗುತ್ತದೆ. ವಿಚಾರಣೆ ನಂತರ ಬಾಲಕಿಯರನ್ನು ಮಕ್ಕಳ ಕಲ್ಯಾಣ ಸಮಿತಿ ವಶಕ್ಕೆ ನೀಡಲಾಗುತ್ತದೆ. ಬಾಲಕ ತನ್ನ ಪೋಷಕರೊಂದಿಗೆ ಇರಲಿದ್ದಾನೆ ಎಂದು ಡಿಪೆನ್ಸ್ ಕೌನ್ಸೆಲ್ ರಘು ಹೇಳಿದ್ದಾರೆ.

SCROLL FOR NEXT