ಸುಪ್ರೀಂಕೋರ್ಟ್ 
ದೇಶ

ಎಲ್ಲಾ ಮಹಿಳೆಯರು ಸುರಕ್ಷಿತ, ಕಾನೂನು ಪ್ರಕಾರ ಗರ್ಭಪಾತಕ್ಕೆ ಅರ್ಹರು: ಸುಪ್ರೀಂ ಕೋರ್ಟ್ ಮಹತ್ವದ ಆದೇಶ

ಸುರಕ್ಷಿತ ಮತ್ತು ಕಾನೂನು ಪ್ರಕಾರ ಗರ್ಭಪಾತಕ್ಕೆ ಎಲ್ಲಾ ಮಹಿಳೆಯರು ಅರ್ಹರು ಎಂಬುದನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದ್ದು, ಗರ್ಭಿಣಿಯಾಗಲು ಇಷ್ಟವಿಲ್ಲದ ಮಹಿಳೆಯರ ಗರ್ಭಪಾತದ ಹಕ್ಕನ್ನು ವಿವಾಹದ ಹಿನ್ನೆಲೆಯಲ್ಲಿ ಕಸಿದುಕೊಳ್ಳುವ ಹಕ್ಕಿಲ್ಲ ಎಂದು ಹೇಳಿದೆ.

ನವದೆಹಲಿ: ಸುರಕ್ಷಿತ ಮತ್ತು ಕಾನೂನು ಪ್ರಕಾರ ಗರ್ಭಪಾತಕ್ಕೆ ಎಲ್ಲಾ ಮಹಿಳೆಯರು ಅರ್ಹರು ಎಂಬುದನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದ್ದು, ಗರ್ಭಿಣಿಯಾಗಲು ಇಷ್ಟವಿಲ್ಲದ ಮಹಿಳೆಯರು ಗರ್ಭಪಾತ ಮಾಡಿಸಿಕೊಳ್ಳುವ ಹಕ್ಕನ್ನು ವಿವಾಹದ ಹಿನ್ನೆಲೆಯಲ್ಲಿ ಕಸಿದುಕೊಳ್ಳುವ ಹಕ್ಕಿಲ್ಲ ಎಂದು ಹೇಳಿದೆ.

ಮದುವೆಯಾಗದೆ ಒಂಟಿಯಾಗಿರುವ ಮಹಿಳೆಯರು ವೈದ್ಯಕೀಯ ಗರ್ಭಪಾತ ಕಾಯ್ದೆಗಳು ಮತ್ತು ನಿಯಮಗಳಡಿ ಗರ್ಭಿಣಿಯಾದ 24 ವಾರಗಳ ವರೆಗೂ ಗರ್ಭಪಾತದ ಹಕ್ಕನ್ನು ಹೊಂದಿರುತ್ತಾರೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ವೈವಾಹಿಕ ಅತ್ಯಾಚಾರ ಒಳಗೊಂಡಂತೆ ಅತ್ಯಾಚಾರ ತಡೆಯುವುದು  ವೈದ್ಯಕೀಯ ಗರ್ಭಪಾತ ಕಾಯ್ದೆ ಉದ್ದೇಶವಾಗಿದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.

ವಿವಾಹಿತ ಮತ್ತು ಅವಿವಾಹಿತ ಮಹಿಳೆಯರ ನಡುವಿನ ವ್ಯತ್ಯಾಸವು  ಕೃತಕ ಮತ್ತು ಸಾಂವಿಧಾನಿಕವಾಗಿ ಸಮರ್ಥನೀಯವಲ್ಲ ಎಂದು ನ್ಯಾಯಾಲಯ ಹೇಳುತ್ತದೆ. ವಿವಾಹಿತ ಮಹಿಳೆಯರು ಮಾತ್ರ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗುತ್ತಾರೆ ಎಂಬ ವರ್ಗೀಕರಣವನ್ನು ಇದು ಶಾಶ್ವತಗೊಳಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.

ವೈದ್ಯಕೀಯ ಗರ್ಭಪಾತ ಕಾಯ್ದೆಗೆ ಸಂಬಂಧಿಸಿದ ತೀರ್ಪನ್ನು ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್, ಜೆ ಬಿ ಪಾರ್ದಿವಾಲಾ ಮತ್ತು ಎಎಸ್ ಬೊಪಣ್ಣ ಅವರಿದ್ದ ನ್ಯಾಯಪೀಠ ಕಳೆದ ತಿಂಗಳು ಕಾಯ್ದಿರಿಸಿತ್ತು ಮತ್ತು ವಿವಾಹವಾಗದ ಮತ್ತು ಒಂಟಿಯಾಗಿರುವ ಮಹಿಳೆಯರಿಗೆ 24 ವಾರಗಳವರೆಗೂ ಗರ್ಭಪಾತಕ್ಕೆ ಅವಕಾಶ ನೀಡಲಾಗುವುದು ಎಂದು ಹೇಳಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!

ಸರ್ಕಾರವನ್ನು ಅಸ್ಥಿರಗೊಳಿಸುವ ಪಿತೂರಿ: 'ಸ್ಟಿಂಗ್ ಆಪರೇಷನ್' ಕುರಿತು ಸಿಎಂ DKS ಎಚ್ಚರಿಕೆ ಕರೆಗೆ ಸಚಿವರಿಂದ ಬೆಂಬಲ

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ಚಿಕ್ಕಣ್ಣ, ಯಶಸ್ ಸೂರ್ಯಗೆ ಬಿಗ್ ಶಾಕ್‌; ಇಬ್ಬರಿಗೂ ಕೋರ್ಟ್ ಸಮನ್ಸ್

ಉತ್ತರ ಪ್ರದೇಶ ಚುನಾವಣೆಗೂ ಮುನ್ನ ಅಖಿಲೇಶ್ ಯಾದವ್'ಗೆ ಬಿಗ್ ಶಾಕ್; BJP ಸೇರಲಿದ್ದಾರೆ SPಯ ಮೂವರು ಶಾಸಕರು!