ದೇಶ

ಭೀಮಾ ಕೋರೆಗಾಂವ್ ಪ್ರಕರಣ: ಮುಂಬೈನ ಜಸ್ಲೋಕ್ ಆಸ್ಪತ್ರೆಯಲ್ಲಿ ಬಂಧಿತ ಕಾರ್ಯಕರ್ತ ನವ್ಲಾಖಾ ಚಿಕಿತ್ಸೆಗೆ ಸುಪ್ರೀಂ ಆದೇಶ

Vishwanath S

ನವದೆಹಲಿ: ಎಲ್ಗರ್‌ ಪರಿಷತ್‌-ಮಾವೋವಾದಿ ನಂಟು ಪ್ರಕರಣದಲ್ಲಿ ಜೈಲು ಪಾಲಾಗಿರುವ ಕಾರ್ಯಕರ್ತ ಗೌತಮ್‌ ನವ್ಲಾಖಾರನ್ನು ಚಿಕಿತ್ಸೆಗಾಗಿ ಮುಂಬೈನ ಜಸ್ಲೋಕ್‌ ಆಸ್ಪತ್ರೆಗೆ ತಕ್ಷಣವೇ ಸ್ಥಳಾಂತರಿಸುವಂತೆ ತಲೋಜಾ ಜೈಲು ಅಧೀಕ್ಷಕರಿಗೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ.

ವೈದ್ಯಕೀಯ ಚಿಕಿತ್ಸೆ ಪಡೆಯುವುದು ಖೈದಿಗಳ ಮೂಲಭೂತ ಹಕ್ಕು ಎಂದು ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್ ಮತ್ತು ಹೃಷಿಕೇಶ್ ರಾಯ್ ಅವರ ಪೀಠ ಹೇಳಿದ್ದು, ನವ್ಲಾಖಾ ಪತ್ನಿ ಸಭಾ ಹುಸೇನ್ ಮತ್ತು ಸಹೋದರಿ ಅವರನ್ನು ಆಸ್ಪತ್ರೆಯಲ್ಲಿ ಭೇಟಿಯಾಗಲು ಅನುಮತಿ ನೀಡಿದೆ.

'ಕಕ್ಷಿದಾರರ ಪರ ವಕೀಲ ಮನವಿಯನ್ನು ಆಲಿಸಿದ ನಂತರ, ವೈದ್ಯಕೀಯ ಚಿಕಿತ್ಸೆ ಪಡೆಯುವುದು ಮೂಲಭೂತ ಹಕ್ಕು ಎಂದು ನಾವು ಪೀಠ ಭಾವಿಸಿದ್ದು ಗೌತಮ್ ರನ್ನು ಸಂಪೂರ್ಣ ವೈದ್ಯಕೀಯ ತಪಾಸಣೆಗಾಗಿ ತಕ್ಷಣವೇ ಕರೆದೊಯ್ಯುವಂತೆ ನಾವು ನಿರ್ದೇಶಿಸಿದೆ. ಇದರಿಂದ ಜಸ್ಲೋಕ್ ಆಸ್ಪತ್ರೆಯಲ್ಲಿ ಅವರು ಅಗತ್ಯ ವೈದ್ಯಕೀಯ ತಪಾಸಣೆಗೆ ಒಳಗಾಗಲು ಮತ್ತು ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ.

ಮುಂಬೈ ಬಳಿಯ ತಲೋಜಾ ಜೈಲಿನಲ್ಲಿ ಸಾಕಷ್ಟು ವೈದ್ಯಕೀಯ ಮತ್ತು ಇತರ ಮೂಲಭೂತ ಸೌಕರ್ಯಗಳ ಕೊರತೆಯ ಆತಂಕದಿಂದ ಗೃಹಬಂಧನದ ಮನವಿಯನ್ನು ವಜಾಗೊಳಿಸಿದ ಬಾಂಬೆ ಹೈಕೋರ್ಟ್ ನ ಏಪ್ರಿಲ್ 26ರ ಆದೇಶವನ್ನು ಪ್ರಶ್ನಿಸಿ  70 ವರ್ಷ ವಯಸ್ಸಿನ ಕಾರ್ಯಕರ್ತ ಗೌತಮ್ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

SCROLL FOR NEXT