ದೇಶ

ಆರ್‌ಎಸ್‌ಎಸ್ ಮೆರವಣಿಗೆ: ಅನುಮತಿ ನಿರಾಕರಿಸಿದ ತಮಿಳುನಾಡು ಸರ್ಕಾರ

Nagaraja AB

ಚೆನ್ನೈ: ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯ ಕಾರಣ ಹಿನ್ನೆಲೆ ರಾಜ್ಯದ 50 ಸ್ಥಳಗಳಲ್ಲಿ ಅಕ್ಟೋಬರ್ 2 ರಂದು ಆರ್‌ಎಸ್‌ಎಸ್ ಮೆರವಣಿಗೆ ನಡೆಸಲು ತಮಿಳುನಾಡು ಸರ್ಕಾರ ಅನುಮತಿ ನಿರಾಕರಿಸಿದೆ.

ಪಿಎಫ್ ಐ ಮತ್ತು ಅದರ ಸಹವರ್ತಿ ಸಂಸ್ಥೆಗಳ ಮೇಲಿನ ನಿಷೇಧದ ನಂತರ ಇತ್ತೀಚಿನ ಘಟನೆಗಳ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳನ್ನು ತಡೆಗಟ್ಟಲು ಪೊಲೀಸರು ವಾರದಲ್ಲಿ ಎಲ್ಲಾ ಗಂಟೆಯೂ ಕೆಲಸ ಮಾಡುತ್ತಿದ್ದು, ಸಾಮಾಜಿಕ ಸುವ್ಯಸ್ಥೆಗೆ ಭಂಗ ಬರಬಾರದೆಂಬ ಹಿನ್ನೆಲೆ ಮೆರವಣಿಗೆಯನ್ನು ಅನುಮತಿಸಲಾಗುವುದಿಲ್ಲ ಎಂದು ಸರ್ಕಾರ ಹೇಳಿದೆ.

ಬಿಜೆಪಿಯು ತಮಿಳುನಾಡಿನಲ್ಲಿ ನೆಲೆ ಕಲ್ಪಿಸಿಕೊಳ್ಳಲು ಯೋಚಿಸುತ್ತಿರುವಾಗಲೇ, ಬಿಜೆಪಿಯ ಭಾರೀ ರಾಜಕೀಯ ಒತ್ತಡದ ಹಿನ್ನೆಲೆಯಲ್ಲಿ ಈ ಮೆರವಣಿಗೆ ಮಹತ್ವ ಪಡೆದುಕೊಂಡಿದೆ.ಮಾಜಿ ಮುಖ್ಯಮಂತ್ರಿ ದಿವಂಗತ ಜೆ ಜಯಲಲಿತಾ ಅವರು ಕೂಡ ಆಡಳಿತದಲ್ಲಿದ್ದ ಸಂದರ್ಭದಲ್ಲಿ ಆರ್ ಎಸ್ ಎಸ್ ಮೆರವಣಿಗೆಗೆ ಅನುಮತಿ ನಿರಾಕರಿಸಿದ್ದರು.

ಈ ಕಾರಣ ತಮಿಳುನಾಡಿನಲ್ಲಿ ಮೆರವಣಿಗೆಗಳನ್ನು ನಡೆಸಲು ಆರೆಸ್ಸೆಸ್ ಯಾವಾಗಲೂ ಹೆಣಗಾಡುತ್ತಿದೆ. 2016ರಲ್ಲಿ ಆಕೆಯ ಮರಣದ ನಂತರ ಮೆರವಣಿಗೆಗಳು ಪುನರಾರಂಭಗೊಂಡವು ಮತ್ತು ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ನಡೆಯಲಿಲ್ಲ

SCROLL FOR NEXT