ದೇಶ

ಭಾರತ ಅಮೆರಿಕ ಜೊತೆ ಹೆಚ್ಚೆಚ್ಚು ವ್ಯಾಪಾರ-ವಹಿವಾಟು ನಡೆಸಲು ಸಿದ್ಧವಿದೆ: ವಿದೇಶಾಂಗ ಸಚಿವ ಎಸ್ ಜೈಶಂಕರ್

Sumana Upadhyaya

ವಾಷಿಂಗ್ಟನ್: ಇಂಧನ, ಆರೋಗ್ಯ, ಹವಾಮಾನ, ಮೂಲಭೂತ ಸೌಕರ್ಯ, ತಾತ್ವಿಕತೆ, ರಕ್ಷಣಾ ವಲಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತ ರೂಪಾಂತರಗೊಳ್ಳುತ್ತಿರುವಾಗ ಅಮೆರಿಕ ಜೊತೆ ಭಾರತ ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ವ್ಯಾಪಾರ-ವಹಿವಾಟುಗಳನ್ನು ಮಾಡಲು ಸಿದ್ಧವಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

ಭಾರತ-ಯುಎಸ್ ಕಾರ್ಯತಂತ್ರ ಸಹಭಾಗಿತ್ವ ವೇದಿಕೆಯ ಉದ್ಯಮ ಕಾರ್ಯಾಗಾರದಲ್ಲಿ ಭಾಗವಹಿಸಿ ಟ್ವೀಟ್ ಮಾಡಿರುವ ಅವರು, ಉದ್ಯಮಕ್ಕೆ ಸಂಬಂಧಪಟ್ಟ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಖುಷಿಯಾಯಿತು. ಭಾರತದಲ್ಲಿ ಡಿಜಿಟಲ್ ಇಂಡಿಯಾ ಎಷ್ಟು ಪರಿಣಾಮಕಾರಿಯಾಗಿ ವೇಗವಾಗಿ ಬೆಳೆಯುತ್ತದೆಯೋ ಅದಕ್ಕೆ ತಕ್ಕಂತೆ ಅಮೆರಿಕ ಭಾರತ ಜೊತೆ ಉದ್ಯಮ, ವ್ಯವಹಾರ ಮಾಡಲು ಮುಂದಾಗಿದೆ. ಅಮೆರಿಕ ಜೊತೆ ಇನ್ನೂ ಹೆಚ್ಚಿನ ವ್ಯಾಪಾರ ಮಾಡಲು ಭಾರತ ಹೆಚ್ಚು ವಿಶ್ವಾಸವನ್ನು ಹೊಂದಿದೆ. ಭಾರತ-ಯುಎಸ್ ಸಂಪರ್ಕದಲ್ಲಿ ಧನಾತ್ಮಕತೆ ಕಂಡುಬರುತ್ತಿದೆ ಎಂದಿದ್ದಾರೆ. 

SCROLL FOR NEXT