ಆಧಾರ್ ಕಾರ್ಡ್ 
ದೇಶ

ಜನಗಣತಿಗೆ ಆಧಾರ್ ಡೇಟಾ ಬಳಸುವ ಚಿಂತನೆ ಇಲ್ಲ: ಲೋಕಸಭೆಗೆ ಕೇಂದ್ರ ಮಾಹಿತಿ

ಜನಗಣತಿಗೆ ಆಧಾರ್ ಡೇಟಾವನ್ನು ಬಳಸುವ ಯಾವುದೇ ಚಿಂತನೆ ಸರ್ಕಾರದ ಮುಂದೆ ಇಲ್ಲ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಬುಧವಾರ ಲೋಕಸಭೆಗೆ ತಿಳಿಸಿದ್ದಾರೆ.

ನವದೆಹಲಿ: ಜನಗಣತಿಗೆ ಆಧಾರ್ ಡೇಟಾವನ್ನು ಬಳಸುವ ಯಾವುದೇ ಚಿಂತನೆ ಸರ್ಕಾರದ ಮುಂದೆ ಇಲ್ಲ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಬುಧವಾರ ಲೋಕಸಭೆಗೆ ತಿಳಿಸಿದ್ದಾರೆ.

"ಜನಗಣತಿಗೆ ಆಧಾರ್ ಡೇಟಾವನ್ನು ಬಳಸುವ ಯಾವುದೇ ಚಿಂತನೆ ಇಲ್ಲ ಎಂದು ಭಾರತೀಯ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರ ಕಚೇರಿ ತಿಳಿಸಿರುವುದಾಗಿ" ಕೇಂದ್ರ ಸಚಿವರು ಲಿಖಿತ ಉತ್ತರ ನೀಡಿದ್ದಾರೆ.

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ಪ್ರಕಾರ, ಫೆಬ್ರವರಿ ಅಂತ್ಯದವರೆಗೆ 136 ಕೋಟಿಗೂ ಹೆಚ್ಚು ಆಧಾರ್ ಸಂಖ್ಯೆಗಳನ್ನು ನೀಡಲಾಗಿದೆ.

"...ಅಂದಾಜು ಸಾವಿನ ಸಂಖ್ಯೆಗೆ ಹೊಂದಾಣಿಕೆ ಮಾಡಿದ ನಂತರ, ಜೀವಂತ ಆಧಾರ್ ಸಂಖ್ಯೆ ಹೊಂದಿರುವವರ ಅಂದಾಜು ಸಂಖ್ಯೆ 130.2 ಕೋಟಿ. ಇದು 2022ರ ಒಟ್ಟು ಯೋಜಿತ ಜನಸಂಖ್ಯೆಯ ಶೇಕಡಾ 94ಕ್ಕಿಂತ ಹೆಚ್ಚು" ಎಂದು ಕಾಂಗ್ರೆಸ್ ಸದಸ್ಯ ಅಡೂರ್ ಪ್ರಕಾಶ್ ಅವರ ಪ್ರಶ್ನೆಗೆ ರಾಜೀವ್ ಚಂದ್ರಶೇಖರ್ ಉತ್ತರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್; ಸಿಎಂ ಸ್ಥಾನಕ್ಕೆ ರಾಜೀನಾಮೆ?, ದಿಢೀರ್ ಮುಂಬೈಗೆ ತೆರಳಿದ ರಾಜ್ಯಪಾಲ ಗೆಹ್ಲೋಟ್..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

SCROLL FOR NEXT