ಸಾಂದರ್ಭಿಕ ಚಿತ್ರ 
ದೇಶ

ಆರ್ಟಿಕಲ್ 370 ರದ್ದು: ಜಮ್ಮು-ಕಾಶ್ಮೀರದಲ್ಲಿ ಆಸ್ತಿ ಖರೀದಿಸಿದವರ ಸಂಖ್ಯೆ ಹೆಚ್ಚಳ, ಹೂಡಿಕೆಗೆ ಉತ್ತೇಜನ

ಸಂವಿಧಾನ ಪರಿಚ್ಛೇದ 370 ಮತ್ತು 35A ರದ್ದತಿ ಮತ್ತು ಜಮ್ಮು ಮತ್ತು ಕಾಶ್ಮೀರ (J&K) ರಾಜ್ಯವನ್ನು ಕೇಂದ್ರವು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ (UTs) ವಿಭಜಿಸಿ ಆಗಸ್ಟ್ 5, 2019ರಂದು ಘೋಷಣೆ ಮಾಡಿತು. ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಹಲವು ಪರ-ವಿರೋಧ ಅಭಿಪ್ರಾಯಗಳು ಕೇಳಿಬಂದವು.

ಶ್ರೀನಗರ: ಸಂವಿಧಾನ ಪರಿಚ್ಛೇದ 370 ಮತ್ತು 35A ರದ್ದತಿ ಮತ್ತು ಜಮ್ಮು ಮತ್ತು ಕಾಶ್ಮೀರ (J&K) ರಾಜ್ಯವನ್ನು ಕೇಂದ್ರವು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ (UTs) ವಿಭಜಿಸಿ ಆಗಸ್ಟ್ 5, 2019ರಂದು ಘೋಷಣೆ ಮಾಡಿತು. ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಹಲವು ಪರ-ವಿರೋಧ ಅಭಿಪ್ರಾಯಗಳು ಕೇಳಿಬಂದವು.

ಈ ಪ್ರಕ್ರಿಯೆ ಬಳಿಕ 185 ಸ್ಥಳೀಯೇತರರು ಜಮ್ಮು ಮತ್ತು ಕಾಶ್ಮೀರದಲ್ಲಿ ಭೂಮಿಯನ್ನು ಖರೀದಿಸಿದ್ದಾರೆ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ 1,559 ಕಂಪನಿಗಳು ಹೂಡಿಕೆ ಮಾಡಿವೆ ಎಂಬ ವಿಚಾರ ತಿಳಿದುಬಂದಿದೆ. 

ಆದರೆ ಸ್ಥಳೀಯ ಜನರ ಹಕ್ಕುಗಳು, ಉದ್ಯೋಗ ಸುರಕ್ಷತೆಯನ್ನು ನೀಡುವ ಸಂವಿಧಾನ ವಿಧಿ 6ನೇ ಶೆಡ್ಯೂಲ್ ಜಾರಿಗೆ ತರುವಂತೆ ಅನೇಕ ರಾಜಕೀಯ ಪಕ್ಷಗಳು, ವ್ಯಾಪಾರಸ್ಥರು ಮತ್ತು ನಾಗರಿಕ ಸೊಸೈಟಿಗಳು ಒತ್ತಾಯಿಸುತ್ತಿರುವ ಲಡಾಕ್ ನಲ್ಲಿ ಸ್ಥಳೀಯೇತರರು ಯಾರೂ ಭೂಮಿ ಖರೀದಿಸಿಲ್ಲ. 

ಈ ವಿಷಯವನ್ನು ನಿನ್ನೆ ರಾಜ್ಯಸಭೆಯಲ್ಲಿ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರೈ ಲಿಖಿತ ಉತ್ತರದಲ್ಲಿ ತಿಳಿಸಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಮೂರು ವರ್ಷಗಳಲ್ಲಿ 185 ಮಂದಿ ಹೊರಗಿನವರು ಆಸ್ತಿ ಖರೀದಿಸಿಕೊಂಡಿದ್ದಾರೆ.

ಅಂಕಿಅಂಶಗಳ ಪ್ರಕಾರ, 2020 ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ  ಹೊರಗಿನ ಒಬ್ಬ ವ್ಯಕ್ತಿ ಮಾತ್ರ ಭೂಮಿಯನ್ನು ಖರೀದಿಸಿದ್ದಾರೆ, ನಂತರ 2021 ರಲ್ಲಿ 57 ಮತ್ತು 2022 ರಲ್ಲಿ 127 ಮಂದಿ ಆಸ್ತಿ ಖರೀದಿಸಿದ್ದಾರೆ. ಆಗಸ್ಟ್ 5, 2019 ರಂದು ಕೇಂದ್ರವು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ ಆರ್ಟಿಕಲ್ 370 ಮತ್ತು ಆರ್ಟಿಕಲ್ 35A ನ್ನು ರದ್ದುಗೊಳಿಸಿತು.

ಜಮ್ಮು-ಕಾಶ್ಮೀರದಲ್ಲಿ ಭೂಮಿ ಮತ್ತು ಆಸ್ತಿಯನ್ನು ಖರೀದಿಸುವುದನ್ನು ಹೊರಗಿನವರಿಗೆ 2019ರ ಮೊದಲು ನಿರ್ಬಂಧಿಸಲಾಗಿತ್ತು. ಕೇಂದ್ರ ಸರ್ಕಾರವು ಜಮ್ಮು-ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ನಂತರ ಹೊರಗಿವರೂ ಆಸ್ತಿ ಖರೀದಿಸಬಹುದೆಂದು ನಿಯಮ ತರಲಾಯಿತು. ಲಡಾಕ್ ಗೆ ಸಹ ಇದೇ ನಿಯಮ ಅನ್ವಯವಾಗುತ್ತದೆ.

ಜಮ್ಮು-ಕಾಶ್ಮೀರ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ಇದುವರೆಗೆ 1,559 ಕಂಪೆನಿಗಳು, ಬಹುರಾಷ್ಟ್ರೀಯ ಕಂಪೆನಿಗಳು ಹೂಡಿಕೆ ಮಾಡಿವೆ. ಅಂಕಿಅಂಶ ಪ್ರಕಾರ, 310 ಕಂಪೆನಿಗಳು 2020-21ರಲ್ಲಿ ಹೂಡಿಕೆ ಮಾಡಿದ್ದು, 2021-22ರಲ್ಲಿ 175 ಕಂಪೆನಿಗಳು, 2022-23ರಲ್ಲಿ 1,074 ಕಂಪೆನಿಗಳು ಹೂಡಿಕೆ ಮಾಡಿವೆ. ಜಮ್ಮು-ಕಾಶ್ಮೀರ ಸರ್ಕಾರಕ್ಕೆ ಇತ್ತೀಚೆಗೆ 66,000 ಕೋಟಿ ರೂಪಾಯಿ ಖಾಸಗಿ ಹೂಡಿಕೆ ಪ್ರಸ್ತಾವನೆಗಳು ಬಂದಿವೆ ಎಂದು ಜಮ್ಮು-ಕಾಶ್ಮೀರ ಗವರ್ನರ್ ಮನೋಜ್ ಸಿನ್ಹ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಪರಸ್ತ್ರೀ ಮೋಹ, ನಂಬಿಕೆ ದ್ರೋಹ: ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಕೆಲಸದ ಹೊರೆ ಖಂಡಿಸಿ ಪಶ್ಚಿಮ ಬಂಗಾಳ CEO ಕಚೇರಿ ಮುಂದೆ BLOಗಳಿಂದ ಅಹೋರಾತ್ರಿ ಧರಣಿ!

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

SCROLL FOR NEXT