ಕೈಲಾಶ್ ವಿಜಯವರ್ಗಿಯಾ 
ದೇಶ

ಕೆಟ್ಟ ಬಟ್ಟೆ ಧರಿಸಿ ಶೂರ್ಪನಖಿಯಂತೆ ಕಾಣ್ತೀರಾ; ದೇವರು ಸುಂದರ ದೇಹ ಕೊಟ್ಟಿದ್ದಾನೆ ಒಳ್ಳೆ ಬಟ್ಟೆ ಧರಿಸಿ: ಬಿಜೆಪಿ ನಾಯಕ

'ಕೆಟ್ಟ ಉಡುಗೆ' ತೊಟ್ಟ ಹುಡುಗಿಯರು ರಾಮಾಯಣದ 'ಶೂರ್ಪನಖಿ'ಯಂತೆ ಕಾಣುತ್ತಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ ಹೇಳಿದ್ದಾರೆ.

ಇಂದೋರ್: 'ಕೆಟ್ಟ ಉಡುಗೆ' ತೊಟ್ಟ ಹುಡುಗಿಯರು ರಾಮಾಯಣದ 'ಶೂರ್ಪನಖಿ'ಯಂತೆ ಕಾಣುತ್ತಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ ಹೇಳಿದ್ದಾರೆ.

ಹನುಮ ಮತ್ತು ಮಹಾವೀರ ಜಯಂತಿಯಂದು ಇಲ್ಲಿ ಆಯೋಜಿಸಲಾದ ಧಾರ್ಮಿಕ ಸಮಾರಂಭದಲ್ಲಿ ಅವರು ನೀಡಿದ ಹೇಳಿಕೆ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

'ನಾನು ರಾತ್ರಿ ಮನೆಗೆ ಹೋಗುವಾಗ ವಿದ್ಯಾವಂತ ಯುವಕರು ಮತ್ತು ಮಕ್ಕಳನ್ನು ಮಾದಕ ದ್ರವ್ಯದ ಅಮಲಿನಲ್ಲಿ ನೋಡುತ್ತೇನೆ. ಕಾರಿನಿಂದ ಕೆಳಗೆ ಇಳಿದು ಅವರಿಗೆ ಕಪಾಳಮೋಕ್ಷ ಮಾಡಬೇಕೆನಿಸುತ್ತದೆ ಎಂದು ಬಿಜೆಪಿ ನಾಯಕ ಹೇಳಿದರು.

ನಾವು ಮಹಿಳೆಯರಲ್ಲಿ ದೇವಿಯನ್ನು ಕಾಣುತ್ತೇವೆ. ಆದರೆ ಹುಡುಗಿಯರು ಕೆಟ್ಟ ಉಡುಪು ಧರಿಸಿ ತಿರುಗಾಡುವುದನ್ನು ನೋಡಿದರೆ ಅವರು ದೇವಿಯಂತೆ ಕಾಣುವುದಿಲ್ಲ ಆದರೆ ಶೂರ್ಪನಖಿಯಂತೆ ಕಾಣುತ್ತಾರೆ. ದೇವರು ನಿಮಗೆ ಒಳ್ಳೆಯ ಮತ್ತು ಸುಂದರವಾದ ದೇಹವನ್ನು ಕೊಟ್ಟಿದ್ದಾನೆ. ಅದನ್ನು ಒಳ್ಳೆಯ ಉಡುಪುಗಳನ್ನು ಧರಿಸಿ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel