ನಮೀಬಿಯನ್ ಚೀತಾ ಓಬನ್ 
ದೇಶ

ಹಾದಿ ತಪ್ಪಿ ಗ್ರಾಮಗಳಿಗೆ ನುಗ್ಗಿದ್ದ ನಮೀಬಿಯನ್ ಚೀತಾ ಮತ್ತೆ ಕುನೋ ಅಭಯಾರಣ್ಯಕ್ಕೆ ಶಿಫ್ಟ್; ನಿಟ್ಟಿಸಿರು ಬಿಟ್ಟ ಗ್ರಾಮಸ್ಥರು!

ಇತ್ತೀಚೆಗೆ ಅಭಯಾರಣ್ಯದಿಂದ ಹಾದಿ ತಪ್ಪಿ ಗ್ರಾಮಗಳಿಗೆ ನುಗ್ಗಿದ್ದ ನಮೀಬಿಯನ್ ಚೀತಾ ಓಬನ್ ನನ್ನು ಮತ್ತೆ ಅಭಯಾರಣ್ಯಕ್ಕೆ ಕರೆತರುವಲ್ಲಿ ಕೊನೆಗೂ ಮಧ್ಯ ಪ್ರದೇಶ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಶಿಯೋಪುರ್: ಇತ್ತೀಚೆಗೆ ಅಭಯಾರಣ್ಯದಿಂದ ಹಾದಿ ತಪ್ಪಿ ಗ್ರಾಮಗಳಿಗೆ ನುಗ್ಗಿದ್ದ ನಮೀಬಿಯನ್ ಚೀತಾ ಓಬನ್ ನನ್ನು ಮತ್ತೆ ಅಭಯಾರಣ್ಯಕ್ಕೆ ಕರೆತರುವಲ್ಲಿ ಕೊನೆಗೂ ಮಧ್ಯ ಪ್ರದೇಶ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಈ ಹಿಂದೆ ಭಾರತಕ್ಕೆ ಬಂದಿದ್ದ ನಮೀಬಿಯಾದ ಗಂಡು ಚಿರತೆಗಳಲ್ಲಿ ಒಂದಾದ 'ಒಬಾನ್' ಕುನೋ ರಾಷ್ಟ್ರೀಯ ಉದ್ಯಾನವನದ ಗಡಿಯಿಂದ ತಪ್ಪಿಸಿಕೊಂಡು ಹೋಗಿ ಸ್ಥಳೀಯ ಗ್ರಾಮಗಳಿಗೆ ನುಗ್ಗಿತ್ತು. ಐದು ದಿನಗಳ ಹಿಂದೆ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಸಮೀಪದ ಹಳ್ಳಿಯೊಂದರಲ್ಲಿ ಈ ಚೀತಾ ಕಾಣಿಸಿಕೊಂಡಿತ್ತು. ಇದೀಗ ಅಧಿಕಾರಿಗಳ ಹರಸಾಹಸದ ಬಳಿಕ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಹಾದಿ ತಪ್ಪಿದ ಚೀತಾವನ್ನು ಮರಳಿ ತರಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ನಮೀಬಿಯಾದ ಚೀತಾವನ್ನು ಗುರುವಾರ ಸಂಜೆ ಶಿವಪುರಿ ಜಿಲ್ಲೆಯ ಅರಣ್ಯದಿಂದ ರಕ್ಷಿಸಲಾಗಿದೆ. ಈ ಬಗ್ಗೆ ಮಾತನಾಡಿರುವ ಕುನೋ ವನ್ಯಜೀವಿ ವಿಭಾಗದ ಜಿಲ್ಲಾ ಅರಣ್ಯ ಅಧಿಕಾರಿ (ಡಿಎಫ್‌ಒ) ಪ್ರಕಾಶ್ ಕುಮಾರ್ ವರ್ಮಾ ಅವರು, 'ಶಿವಪುರಿ ಜಿಲ್ಲೆಯ ಗಡಿಯಲ್ಲಿರುವ ಬೈರಾದ್ ಗ್ರಾಮದ ಸಮೀಪವಿರುವ ಅರಣ್ಯ ಪ್ರದೇಶದಿಂದ ಸಂಜೆ 4-5 ರ ಸುಮಾರಿಗೆ ಓಬನ್ ಸಿಕ್ಕಿಬಿದ್ದಿದ್ದು, ಕುನೋ ರಾಷ್ಟ್ರೀಯ ಉದ್ಯಾನವನದ ಪಾಲ್ಪುರ ಅರಣ್ಯಕ್ಕೆ ಬಿಡಲಾಗಿದೆ" ಎಂದು  ತಿಳಿಸಿದ್ದಾರೆ.

ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಕುನೋ ರಾಷ್ಟ್ರೀಯ ಉದ್ಯಾನವನದ ಕಾಡಿನಲ್ಲಿ ಬಿಡಲಾದ ನಮೀಬಿಯಾದಿಂದ ತರಲಾದ ಚಿರತೆಗಳಲ್ಲಿ 'ಒಬಾನ್' ಕೂಡ ಒಂದಾಗಿದೆ. ಇದು ಕುನೊ ರಾಷ್ಟ್ರೀಯ ಉದ್ಯಾನವನದಿಂದ ದಾರಿ ತಪ್ಪಿ ಏಪ್ರಿಲ್ 2 ರಂದು ರಾಷ್ಟ್ರೀಯ ಉದ್ಯಾನವನದಿಂದ ಸುಮಾರು 20 ಕಿಮೀ ದೂರದಲ್ಲಿರುವ ಜಾರ್ ಬರೋಡಾ ಗ್ರಾಮವನ್ನು ಬುಧವಾರ ತಲುಪಿತ್ತು. ಇದರ ಮೇಲೆ ತೀವ್ರ ನಿಗಾ ಇರಿಸಲಾಗಿತ್ತು.  ನಾಲ್ಕು ದಿನಗಳ ನಂತರವೂ ಓಬನ್ ರಾಷ್ಟ್ರೀಯ ಉದ್ಯಾನವನಕ್ಕೆ ಹಿಂತಿರುಗುವ ಯಾವುದೇ ಲಕ್ಷಣಗಳನ್ನು ತೋರಿಸಲಿಲ್ಲ, ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಅದನ್ನು ರಕ್ಷಿಸಲು ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.

ಗುರುವಾರ, ಕುನೊ ರಾಷ್ಟ್ರೀಯ ಉದ್ಯಾನವನದ ಗಡಿಯ ಹೊರಗೆ ಓಬನ್ ಸ್ಥಳವನ್ನು ಪತ್ತೆಹಚ್ಚಲಾಗಿತ್ತು, ಶಿವಪುರಿ ಜಿಲ್ಲೆಯ ಗಡಿಭಾಗದ ಕಾಡಿನಲ್ಲಿ ಓಬನ್ ಅಲೆದಾಡುತ್ತಿತ್ತು. ಅದರ ಸ್ಥಳವನ್ನು ಆಧರಿಸಿ, ಚಿರತೆಯ ನಿಗಾ ತಂಡವು ಓಬನ್ ಸುತ್ತಲೂ ಚಲಿಸಿಸುತಿತ್ತು. ಒಬಾನ್ ಹೇಗೆ ಸಿಕ್ಕಿಬಿದ್ದರು ಎಂಬುದನ್ನು ವಿವರಿಸಲು ಸಾಧ್ಯವಿಲ್ಲ, ಏಕೆಂದರೆ ಅದು ನಮ್ಮ ಪ್ರೋಟೋಕಾಲ್ ಅಡಿಯಲ್ಲಿ ಬರುತ್ತದೆ" ಎಂದು ವರ್ಮಾ ಹೇಳಿದರು.

ಕಳೆದ ವರ್ಷ ಸೆಪ್ಟೆಂಬರ್ 17 ರಂದು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದಿಂದ ತರಲಾದ ಎಂಟು ಚಿರತೆಗಳನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದರು. ಚಿರತೆಯನ್ನು 1952 ರಲ್ಲಿ ಭಾರತದಿಂದ ನಿರ್ನಾಮ ಮಾಡಲಾಗಿದೆ ಎಂದು ಘೋಷಿಸಲಾಯಿತು. ಆದರೆ 8 ಚಿರತೆಗಳನ್ನು (5 ಹೆಣ್ಣು ಮತ್ತು 3 ಗಂಡು) ಆಫ್ರಿಕಾದ ನಮೀಬಿಯಾದಿಂದ 'ಪ್ರಾಜೆಕ್ಟ್ ಚೀತಾ' ಭಾಗವಾಗಿ ತರಲಾಯಿತು. 
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT