ದೇಶ

'ಪ್ರಧಾನಿ ಮೋದಿ ಶೈಕ್ಷಣಿಕ ಅರ್ಹತೆಯ ಕೊರತೆ ದೇಶಕ್ಕೇ ಅಪಾಯಕಾರಿ': ಜೈಲಿನಿಂದಲೇ ಪತ್ರ ಬರೆದ ಸಿಸೋಡಿಯಾ!

Srinivasamurthy VN

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಅರ್ಹತೆಯ ಕೊರತೆಯು ದೇಶಕ್ಕೆ ಅಪಾಯಕಾರಿ ಎಂದು ದೆಹಲಿಯ ಮಾಜಿ ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾ ಹೇಳಿದ್ದಾರೆ.

ಅಬಕಾರಿ ನೀತಿ ತಿದ್ದುಪಡಿ ಹಗರಣದಲ್ಲಿ ವಿಚಾರಣಾ ಕೈದಿಯಾಗಿ ತಿಹಾರ್ ಜೈಲಿನಲ್ಲಿರುವ ಸಿಸೋಡಿಯಾ ಜೈಲಿನಿಂದಲೇ ದೇಶದ ಪ್ರಜೆಗಳನ್ನು ಉದ್ದೇಶಿಸಿ ಪತ್ರ ಬರೆದಿರುವ ಸಿಸೋಡಿಯಾ  ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಅರ್ಹತೆಯ ಕೊರತೆಯು ದೇಶಕ್ಕೆ 'ಅಪಾಯಕಾರಿ' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಮನೀಶ್ ಸಿಸೋಡಿಯಾ ಜೈಲಿನಿಂದ ದೇಶವನ್ನುದ್ದೇಶಿಸಿ ಬರೆದಿರುವ ಪತ್ರವನ್ನು ಟ್ವೀಟ್ ಮಾಡಿದ್ದು "ಪ್ರಧಾನಿ ಕಡಿಮೆ ಶಿಕ್ಷಣ ಪಡೆದರೆ ಅದು ದೇಶಕ್ಕೆ ತುಂಬಾ ಅಪಾಯಕಾರಿ. ನರೇಂದ್ರ ಮೋದಿಗೆ ವಿಜ್ಞಾನ ಅರ್ಥವಾಗುತ್ತಿಲ್ಲ... ಮೋದಿಯವರಿಗೆ ಶಿಕ್ಷಣದ ಮಹತ್ವ ಅರ್ಥವಾಗುತ್ತಿಲ್ಲ" ಎಂದು ಪತ್ರದಲ್ಲಿ ಸಿಸೋಡಿಯಾ ಪ್ರತಿಪಾದಿಸಿದ್ದು, ಕಳೆದ ಕೆಲವು ವರ್ಷಗಳಲ್ಲಿ ದೇಶದಲ್ಲಿ 60,000 ಶಾಲೆಗಳನ್ನು ಮುಚ್ಚಲಾಗಿದೆ ಎಂದು ಆರೋಪಿಸಿದ್ದಾರೆ.

ಅಂತೆಯೇ ಭಾರತದ ಪ್ರಗತಿಗೆ ಒಬ್ಬ ವಿದ್ಯಾವಂತ ಪ್ರಧಾನಿ ಇರುವುದು ಅಗತ್ಯ’’ ಎಂದು ಸಿಸೋಡಿಯ  ಪತ್ರದಲ್ಲಿ ಬರೆದಿದ್ದಾರೆ.

ಈಗ ರದ್ದಾಗಿರುವ ದಿಲ್ಲಿ ಅಬಕಾರಿ ನೀತಿ 2021-22 ರ ರಚನೆ ಹಾಗೂ  ಅನುಷ್ಠಾನದಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಿಬಿಐ ಫೆಬ್ರವರಿ 26 ರಂದು ಮನೀಶ್  ಸಿಸೋಡಿಯಾ ಅವರನ್ನು ಬಂಧಿಸಿದೆ.
 

SCROLL FOR NEXT