ದೇಶ

ಕಾಜಿರಂಗದಲ್ಲಿ ಗಜ ಉತ್ಸವ ಉದ್ಘಾಟಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

Lingaraj Badiger

ಗುವಾಹಟಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶುಕ್ರವಾರ ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಗಜ ಉತ್ಸವ-2023 ಅನ್ನು ಉದ್ಘಾಟಿಸಿದರು. ಬಳಿಕ ಜೀಪ್ ಸಫಾರಿ ನಡೆಸಿದ ರಾಷ್ಟ್ರಪತಿಗಳು, ಆನೆಗಳಿಗೆ ಆಹಾರವನ್ನು ನೀಡಿದರು.

ಸಫಾರಿ ವೇಳೆ ರಾಷ್ಟ್ರಪತಿಗಳು ಒಂದು ಕೊಂಬಿನ ಘೇಂಡಾಮೃಗಗಳು, ಕಾಡು ಎಮ್ಮೆಗಳು, ಜಿಂಕೆಗಳು ಮತ್ತು ಪಕ್ಷಿಗಳು ಸೇರಿದಂತೆ ಹಲವು ಪ್ರಾಣಿಗಳನ್ನು ನೋಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಜ ಉತ್ಸವವನ್ನು ಉದ್ಘಾಟಿಸಿದ ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಗಳು, ಪ್ರಕೃತಿ ಮತ್ತು ಮಾನವೀಯತೆಯ ನಡುವಿನ ಪವಿತ್ರ ಸಂಬಂಧವನ್ನು ಎತ್ತಿ ತೋರಿಸಿದರು.

“ಪ್ರಕೃತಿಯನ್ನು ಗೌರವಿಸುವ ಸಂಸ್ಕೃತಿ ನಮ್ಮ ದೇಶದ ಗುರುತಾಗಿದೆ. ಭಾರತದಲ್ಲಿ, ಪ್ರಕೃತಿ ಮತ್ತು ಸಂಸ್ಕೃತಿಯು ಒಂದಕ್ಕೊಂದು ಸಂಬಂಧ ಹೊಂದಿದೆ ಎಂದು ಮುರ್ಮು ಹೇಳಿದರು.

“ನಮ್ಮ ಸಂಪ್ರದಾಯದಲ್ಲಿ ಆನೆಗಳು ಅತ್ಯಂತ ಗೌರವಾನ್ವಿತ ಪ್ರಾಣಿಗಳಾಗಿವೆ. ಅವುಗಳನ್ನು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗಿದೆ. ಆನೆ ಭಾರತದ ರಾಷ್ಟ್ರೀಯ ಪಾರಂಪರಿಕ ಪ್ರಾಣಿ. ಆದ್ದರಿಂದ, ಆನೆಗಳನ್ನು ರಕ್ಷಿಸುವುದು ನಮ್ಮ ರಾಷ್ಟ್ರೀಯ ಪರಂಪರೆಯನ್ನು ಸಂರಕ್ಷಿಸುವ ಜವಾಬ್ದಾರಿಯ ಪ್ರಮುಖ ಭಾಗವಾಗಿದೆ ಎಂದು ರಾಷ್ಟ್ರಪತಿಗಳು ಹೇಳಿದರು.

SCROLL FOR NEXT