ಅಜಿತ್ ಪವಾರ್ 
ದೇಶ

ಮೋದಿ ಬಗ್ಗೆ ಅಜಿತ್ ಪವಾರ್ ಪ್ರಶಂಸೆ; ಇವಿಎಂ ಬಳಕೆಗೆ ಬೆಂಬಲ

ಅದಾನಿ ಹಾಗೂ ಹಿಂಡನ್ಬರ್ಗ್ ಸೇರಿದಂತೆ ಕೆಲವು ದಿನಗಳಿಂದ ರಾಷ್ಟ್ರದ ವಿದ್ಯಮಾನಗಳ ಬಗ್ಗೆ ಎನ್ ಸಿಪಿ ತೆಗೆದುಕೊಳ್ಳುತ್ತಿರುವ ನಿಲುವುಗಳು ಕುತೂಹಲ ಮೂಡಿಸುತ್ತಿವೆ. 

ನವದೆಹಲಿ: ಅದಾನಿ ಹಾಗೂ ಹಿಂಡನ್ಬರ್ಗ್ ಸೇರಿದಂತೆ ಕೆಲವು ದಿನಗಳಿಂದ ರಾಷ್ಟ್ರದ ವಿದ್ಯಮಾನಗಳ ಬಗ್ಗೆ ಎನ್ ಸಿಪಿ ತೆಗೆದುಕೊಳ್ಳುತ್ತಿರುವ ನಿಲುವುಗಳು ಕುತೂಹಲ ಮೂಡಿಸುತ್ತಿವೆ. 

ಎನ್ ಡಿ ಟಿವಿ ಗೆ ನೀಡಿದ ಸಂದರ್ಶನದಲ್ಲಿ ಶರದ್ ಪವಾರ್ ಹಿಂಡನ್ಬರ್ಗ್ ವಿಚಾರದಲ್ಲಿ ಅದಾನಿ ಬೆನ್ನಿಗೆ ನಿಂತಿದ್ದರು. ಈಗ ಎನ್ ಸಿಪಿ ನಾಯಕ ಅಜಿತ್ ಪವಾರ್, ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. 

2014 ರ ಚುನಾವಣೆಯಲ್ಲಿ ಪ್ರಧಾನಿ ಮೋದಿ ಹಾಗೂ ಬಿಜೆಪಿ ಬಹುಮತ ಪಡೆದು ಅಧಿಕಾರಕ್ಕೆ ಬಂದಿತ್ತು ಹಾಗೂ ಅತ್ಯಂತ ದೂರದ ಸ್ಥಳಗಳಿಗೂ ತಲುಪಲು ಸಾಧ್ಯವಾಯಿತು ಎಂದು ಹೇಳಿದ್ದಾರೆ. 

ಮೋದಿ ಪದವಿ ಹಾಗೂ ವೀರ್ ಸಾವರ್ಕರ್ ಮುಂತಾದ ವಿಷಯಗಳ ಬಗ್ಗೆ ಎನ್ ಸಿಪಿಯ ಭಿನ್ನ ನಿಲುಗಳ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿರುವ ಪವಾರ್, ಒಂದು ಕಾಲದಲ್ಲಿ 2 ಸಂಸದರನ್ನಷ್ಟೇ ಹೊಂದಿದ್ದ ಪಕ್ಷ ಇವತ್ತು ಮೋದಿ ಅವರ ಹೆಸರಿನಲ್ಲಿ ದೂರದ ಸ್ಥಳಗಳಿಗೂ ತಲುಪಿದೆ ಹಾಗೂ ಪೂರ್ಣ ಬಹುಮತ ಪಡೆದಿದೆ. ಇದು ಮೋದಿ ಮ್ಯಾಜಿಕ್ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ. 2014 ರಲ್ಲಿ ಚುನಾವಣೆ ಗೆದ್ದ ನಂತರ ಮೋದಿ ವಿರುದ್ಧ ಸಾಕಷ್ಟು ಟೀಕೆಗಳು ಬಂದವು. ಅವರು ಜನಪ್ರಿಯತೆ ಗಳಿಸಿದರು ಹಾಗೂ ಬಿಜೆಪಿ ಅವರ ನಾಯಕತ್ವದಲ್ಲಿ ಹಲವು ರಾಜ್ಯಗಳಲ್ಲಿ ಗೆಲುವು ಸಾಧಿಸಿತು. 2019 ರಲ್ಲೂ ಇದೇ ಸಂಭವಿಸಿತು. 9 ವರ್ಷಗಳ ಬಳಿಕ ಈ ಎಲ್ಲಾ ಹಳೆಯ ವಿಷಯಗಳನ್ನು ಕೆದಕುವುದರಿಂದ ಏನು ಪ್ರಯೋಜನ ಎಂದು ಪ್ರಶ್ನಿಸಿರುವ ಅಜಿತ್ ಪವಾರ್, ಜನರು ಮೋದಿ ಅವರ ಕೆಲಸಗಳನ್ನು ನೋಡುತ್ತಿರುವುದು ಅತ್ಯಂತ ಮುಖ್ಯವಾಗುತ್ತದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

CM ಡಿ.ಕೆ. ಶಿವಕುಮಾರ್‌ಗಾಗಿ IndiGo flight ಲೇಟ್? VVIP ಸಂಸ್ಕೃತಿ ವಿರುದ್ಧ ಪ್ರಯಾಣಿಕರ ಆಕ್ರೋಶ..!

ಬರಗಾಲದ ಬೆನ್ನಲ್ಲೇ ಬೆಲೆ ಏರಿಕೆ ಬರೆ: ಮಧ್ಯಮ ವರ್ಗದವರಿಗೆ ಆರ್ಥಿಕ ಹೊಡೆತ, ಅಕ್ಕಿ ದರ ಗಗನಕ್ಕೆ..!

ಬರ ಎಫೆಕ್ಟ್: ರೈತರ ನೆರವಿಗೆ ಧಾವಿಸಿದ ಸರ್ಕಾರ; 1,250 ಕೋಟಿ ರೂ. ಮೊದಲ ಕಂತು ಬಿಡುಗಡೆ..!