ದೇಶ

ಅಸ್ಸಾಂ: ‘ವಿಷಕಾರಿ ’ ಅಣಬೆ ತಿಂದ ಮೂವರು ಸಾವು

Lingaraj Badiger

ಗೋಲಘಾಟ್(ಅಸ್ಸಾಂ): ಅಸ್ಸಾಂನ ಗೋಲಾಘಾಟ್ ಜಿಲ್ಲೆಯಲ್ಲಿ ವಿಷಕಾರಿ ಅಣಬೆ ಸೇವಿಸಿ ಎರಡು ವರ್ಷದ ಮಗು ಸೇರಿದಂತೆ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಜಿಲ್ಲೆಯ ಮೆರಪಾನಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಐದು ಕುಟುಂಬಗಳ ಸದಸ್ಯರು ಏಪ್ರಿಲ್ 2 ರಂದು ಅಣಬೆಯನ್ನು ಸೇವಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಒಂದೇ ಕುಟುಂಬದ ಮೂವರು ಅಣಬೆ ತಿಂದು ಮೃತಪಟ್ಟಿದ್ದು, ಗುರುವಾರ ಹೇಮಂತ ಬರ್ಮನ್(2) ಹಾಗೂ ಅವರ ತಾಯಿ ತರಲಿ ಬರ್ಮನ್(23) ಅವರು ಗುರುವಾರ ಮತ್ತು ಶುಕ್ರವಾರ ಮೃತಪಟ್ಟರೆ, ತಂದೆ ಪ್ರಫುಲ್ಲ ಬರ್ಮನ್(24) ಅವರು ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ ” ಎಂದು ಅವರು ತಿಳಿಸಿದ್ದಾರೆ.

ಅವರೆಲ್ಲರೂ ಜೋರ್ಹತ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ(ಜೆಎಂಸಿಎಚ್) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

‘ವಿಷಕಾರಿ ಅಣಬೆ ಸೇವಿಸಿದ ಐದು ಕುಟುಂಬಗಳ ಒಟ್ಟು 13 ಮಂದಿ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಂಡಿತ್ತು’ ಎಂದು ಮೇರಪಾಣಿ ಸಮುದಾಯ ಆರೋಗ್ಯ ಕೇಂದ್ರದ ಉಪ ಅಧೀಕ್ಷಕ ಡಾ.ಚಂದ್ರ ಶ್ಯಾಮ್ ಅವರು ಹೇಳಿದ್ದಾರೆ.

ಇತರ ಅಸ್ವಸ್ಥಗೊಂಡವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಶ್ಯಾಮ್ ತಿಳಿಸಿದ್ದಾರೆ.

SCROLL FOR NEXT