ದೇಶ

ಪೂಂಚ್‌: ಒಳ ನುಸುಳುತ್ತಿದ್ದ ಪಾಕ್ ಶಂಕಿತ ಉಗ್ರನ ಹತ್ಯೆ, ಮತ್ತಿಬ್ಬರಿಗಾಗಿ ತೀವ್ರ ಶೋಧ

Nagaraja AB

ಜಮ್ಮು-ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಭಾನುವಾರ ಮುಂಜಾನೆ ಒಳನುಸುಳುತ್ತಿದ್ದ ಪಾಕಿಸ್ತಾನದ ಶಂಕಿತ ಉಗ್ರನನ್ನು ಸೇನಾ ಪಡೆಗಳು ಹತ್ಯೆಗೈಯುವ ಮೂಲಕ ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಿದ್ದಾರೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ. 

ಮುಂಜಾನೆ 2.15 ರ ಸುಮಾರಿಗೆ ಶಾಹಪುರ್ ಸೆಕ್ಟರ್‌ನಲ್ಲಿ ಮೂವರು ಶಂಕಿತ ಉಗ್ರರ ಚಲನವಲನ ಗಮನಿಸಿದ ಭದ್ರತಾ ಪಡೆಗಳು, ಗುಂಡಿನ ಚಕಮಕಿ ನಡೆಸುವ ಮೂಲಕ ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಶನಿವಾರ ಮತ್ತು ಭಾನುವಾರದ ಮಧ್ಯರಾತ್ರಿಯ ಸಮಯದಲ್ಲಿ ಪೂಂಚ್‌ನ ಗಡಿರೇಖೆಯ ಉದ್ದಕ್ಕೂ ರಕ್ಷಣಾ ಬೇಲಿ ಹತ್ತಿರ ಗುಂಪೊಂದು ಅನುಮಾನಾಸ್ಪದವಾಗಿ ಓಡಾಡುತ್ತಿರುವುದನ್ನು ಗುರುತಿಸಿದ ಭದ್ರತಾ ಪಡೆಗಳು ನಂತರ ಕಾರ್ಯಾಚರಣೆ ಆರಂಭಿಸಿದಾಗ ಮೃತದೇಹವೊಂದು ಕಂಡುಬಂದಿದ್ದು, ಮತ್ತಿಬ್ಬರು ಒಳನುಸುಳುಕೋರರು ಅರಣ್ಯ ಪ್ರದೇಶದಿಂದ ಓಡಿ ಹೋಗಿದ್ದಾರೆ.

ಪರಾರಿಯಾಗಿರುವ ಶಂಕಿತ ಉಗ್ರರಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಜಮ್ಮು ಮೂಲದ ಸೇನಾ ಪಿಆರ್ ಒ ಲೆಫ್ಟಿನೆಂಟ್ ಕರ್ನಲ್ ದೇವೇಂದರ್ ಆನಂದ್ ತಿಳಿಸಿದ್ದಾರೆ.
 

SCROLL FOR NEXT