ದೇಶ

ಭಾರತವು 2030ರ ವೇಳೆಗೆ ಮೂರನೇ ಅತಿದೊಡ್ಡ ಪರಮಾಣು ವಿದ್ಯುತ್ ಉತ್ಪಾದಕ ರಾಷ್ಟ್ರವಾಗಲಿದೆ: ಕೇಂದ್ರ ಸಚಿವ ಜಿತೇಂದ್ರ ಸಿಂಗ್

Sumana Upadhyaya

ನವದೆಹಲಿ: 2030ರ ವೇಳೆಗೆ ಭಾರತವು 20-ಗಿಗಾವ್ಯಾಟ್‌ ಸಾಮರ್ಥ್ಯದ ಪರಮಾಣು ವಿದ್ಯುತ್ ಉತ್ಪಾದನೆಯನ್ನು ಸಾಧಿಸಲಿದೆ, ಇದು ಪ್ರಮುಖ ಮೈಲಿಗಲ್ಲು ಆಗಿದ್ದು, ಅಮೆರಿಕ ಮತ್ತು ಫ್ರಾನ್ಸ್‌ನ ನಂತರ ವಿಶ್ವದ ಮೂರನೇ ಅತಿದೊಡ್ಡ ಪರಮಾಣು ಶಕ್ತಿ ಉತ್ಪಾದಕ ರಾಷ್ಟ್ರವಾಗಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. 

ಮುಂಬೈನಲ್ಲಿ ಬಾಬಾ ಪರಮಾಣು ಸಂಶೋಧನಾ ಕೇಂದ್ರದ (BARC) ಹಿರಿಯ ವಿಜ್ಞಾನಿಗಳ ಗುಂಪಿನೊಂದಿಗೆ ಪರಿಶೀಲನಾ ಸಭೆ ನಡೆಸಿದ ನಂತರ ಈ ಹೇಳಿಕೆ ನೀಡಿದ್ದಾರೆ. ಪರಮಾಣು ಇಂಧನ ಇಲಾಖೆಯು ನಿಗದಿಪಡಿಸಿದ ಗುರಿ ಪ್ರಕಾರ, ಭಾರತವು 2030ರ ವೇಳೆಗೆ 20 ಗಿಗಾವ್ಯಾಟ್ ಪರಮಾಣು ವಿದ್ಯುತ್ ಉತ್ಪಾದನೆಯ ಸಾಮರ್ಥ್ಯವನ್ನು ಸಾಧಿಸಲು ಸಜ್ಜಾಗಿದೆ ಎಂದು ಹೇಳಿದರು.

ಸ್ವಾತಂತ್ರ್ಯ ನಂತರ ಮೊದಲ ಬಾರಿಗೆ ಒಂದೇ ಕ್ರಮದಲ್ಲಿ 10 ರಿಯಾಕ್ಟರ್‌ಗಳನ್ನು ಅನುಮೋದಿಸುವ ನಿರ್ಧಾರವನ್ನು ತೆಗೆದುಕೊಂಡ ಮತ್ತು ಸಾರ್ವಜನಿಕ ವಲಯ ಘಟಕಗಳೊಂದಿಗೆ ಜಂಟಿ ಉದ್ಯಮಗಳ ಅಡಿಯಲ್ಲಿ ಪರಮಾಣು ಸ್ಥಾಪನೆಗಳನ್ನು ಅಭಿವೃದ್ಧಿಪಡಿಸಲು ಅವಕಾಶ ಮಾಡಿಕೊಟ್ಟ ಈ ಕ್ಷಿಪ್ರ ಪ್ರಗತಿಯ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದು ಶ್ಲಾಘಿಸಿದರು. 

ಇಂದು ಭಾರತವು ಕ್ರಿಯಾತ್ಮಕವಾಗಿರುವ ರಿಯಾಕ್ಟರ್‌ಗಳ ಸಂಖ್ಯೆಯಲ್ಲಿ ವಿಶ್ವದ ಆರನೇ ಸ್ಥಾನದಲ್ಲಿದೆ. ನಿರ್ಮಾಣ ಹಂತದಲ್ಲಿರುವ ರಿಯಾಕ್ಟರ್‌ಗಳನ್ನು ಒಳಗೊಂಡಂತೆ ಒಟ್ಟು ರಿಯಾಕ್ಟರ್‌ಗಳ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 100 ವರ್ಷಗಳಾಗುವ ಸಂದರ್ಭದಲ್ಲಿ 2047 ರ ವೇಳೆಗೆ ಭಾರತದ ಪರಮಾಣು ಮೂಲಗಳಿಂದ ಸುಮಾರು ಶೇಕಡಾ 9ರಷ್ಟು ವಿದ್ಯುತ್ ಕೊಡುಗೆ ನೀಡುವ ಸಾಧ್ಯತೆಯಿದೆ. ಇದು 2070 ರ ವೇಳೆಗೆ ನಿವ್ವಳ ಶೂನ್ಯ ಗುರಿಯನ್ನು ಸಾಧಿಸಲು ಸಹಾಯವಾಗುತ್ತದೆ ಎಂದು ಹೇಳಿದರು.

SCROLL FOR NEXT