ದೇಶ

ಕಾಳಿ ಪೋಸ್ಟರ್ ವಿವಾದ: ಲೀನಾ ಮಣಿಮೇಕಲೈ ವಿರುದ್ಧದ ಎಫ್‌ಐಆರ್‌ ಒಟ್ಟುಗೂಡಿಸಲು ಸುಪ್ರೀಂ ಆದೇಶ

Lingaraj Badiger

ನವದೆಹಲಿ: ಸಾಕ್ಷ್ಯಚಿತ್ರದ ಪೋಸ್ಟರ್‌ನಲ್ಲಿ ಕಾಳಿಮಾತೆ ಕೈಯಲ್ಲಿ ಸಿಗರೇಟ್ ಇರುವುದನ್ನು ವಿರೋಧಿಸಿ ಚಲನಚಿತ್ರ ನಿರ್ದೇಶಕಿ ಲೀನಾ ಮಣಿಮೇಕಲೈ ಅವರ ವಿರುದ್ಧ ದೇಶದ ವಿವಿಧ ರಾಜ್ಯಗಳಲ್ಲಿ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳನ್ನು ದೆಹಲಿ ಪೊಲೀಸರಿಗೆ ವರ್ಗಾಯಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಆದೇಶಿಸಿದೆ. 

ಮಧ್ಯಪ್ರದೇಶ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ದೆಹಲಿಯಲ್ಲಿ ನಿರ್ದೇಶಕಿ ಮಣಿಮೇಕಲೈ ಅವರ ವಿರುದ್ಧ ಅನೇಕ ಎಫ್‌ಐಆರ್‌ಗಳು ದಾಖಲಾಗಿವೆ. 

ತಮ್ಮ ವಿರುದ್ಧದ ಎಫ್‌ಐಆರ್‌ಗಳನ್ನು ಕ್ಲಬ್ ಮಾಡಿ ರದ್ದುಗೊಳಿಸುವಂತೆ ಕೋರಿ ನಿರ್ದೇಶಕಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಹಾಗೂ ಜೆ ಬಿ ಪರ್ದಿವಾಲಾ ಅವರ ಪೀಠ, ಬಲವಂತದ ಕ್ರಮದಿಂದ ಮಣಿಮೇಕಲೈ ಅವರನ್ನು ರಕ್ಷಿಸುವ ತನ್ನ ಮಧ್ಯಂತರ ಆದೇಶವನ್ನು ವಿಸ್ತರಿಸಿದೆ.

ಇದೇ ವೇಳೆ ನಿರ್ದೇಶಕಿ ವಿರುದ್ಧದ ಎಲ್ಲಾ ಎಫ್‌ಐಆರ್‌ಗಳನ್ನು ದೆಹಲಿ ವರ್ಗಾಯಿಸುವಂತೆ ನಿರ್ದೇಶಿಸಿದ ಸುಪ್ರೀಂ ಕೋರ್ಟ್, ಎಫ್ಐಆರ್ ರದ್ದುಗೊಳಿಸುವ ಸಂಬಂಧ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವ ಸ್ವಾತಂತ್ರ್ಯವನ್ನು ಮಣಿಮೇಕಲೈ ಅವರಿಗೆ ನೀಡಿದೆ.

SCROLL FOR NEXT