ದೇಶ

'ನಾನು ಬೀದಿ ಹೆಣವಾಗುತ್ತೇನೆ, ಎನ್‌ಕೌಂಟರ್‌ ಮಾಡುತ್ತಾರೆ': ಅತೀಕ್‌ ಹೇಳಿದ ಮಾತು ಈಗ ನಿಜವಾಯಿತು

Lingaraj Badiger

ಲಖನೌ: ದರೋಡೆಕೋರ-ರಾಜಕಾರಣಿ ಅತೀಕ್ ಅಹ್ಮದ್ ಅವರು 2004ರಲ್ಲಿ ಚುನಾವಣಾ ರ್ಯಾಲಿಯಲ್ಲಿ ಸಾಂದರ್ಭಿಕವಾಗಿ ಹೇಳಿದ ಮಾತುಗಳು ಶನಿವಾರ ರಾತ್ರಿ ನಿಜವಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ.

“ನಾನು ರಸ್ತೆ ಬದಿಯಲ್ಲಿ ಬೀದಿ ಹೆಣವಾಗುತ್ತೇನೆ. ಪೋಲೀಸರು ಅಥವಾ ಬುಡಕಟ್ಟು ಕ್ರಿಮಿನಲ್ ಗಳು  ನನ್ನನ್ನು ಎನ್‌ಕೌಂಟರ್‌ ಮಾಡುತ್ತಾರೆ ಎಂದು ನಿನ್ನೆ ರಾತ್ರಿ ದುಷ್ಕರ್ಮಿಗಳಿಂದ ಹತ್ಯೆಯಾದ ಡಾನ್ ಅತೀಕ್ ಅಹ್ಮದ್ ಅವರು 2004 ರಲ್ಲಿ ಫುಲ್‌ಪುರದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಹೇಳಿದ್ದರು. ಆ ವೇಳೆ ದಿವಂಗತ ಮುಲಾಯಂ ಸಿಂಗ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.

ಶನಿವಾರ ರಾತ್ರಿ ದರೋಡೆಕೋರ, ಸಹೋದರ ಅಶ್ರಫ್‌ನೊಂದಿಗೆ ಕೈಕೋಳ ಹಾಕಿಕೊಂಡು ಸ್ಥಳೀಯ ಆಸ್ಪತ್ರೆಯ ಮುಂಭಾಗದ ರಸ್ತೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುತ್ತಿದ್ದಾಗ ಮೂವರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಅತೀಕ್ ಅವರು ರಸ್ತೆ ಬದಿಯಲ್ಲಿ ರಕ್ತದ ಮಡುವಿನಲ್ಲಿ ಶವವಾಗಿ ಬಿದ್ದಿದ್ದರು.

ಬಹುಶಃ, 2004 ರಲ್ಲಿ ದರೋಡೆಕೋರ, ರಾಜಕಾರಣಿ ಹೇಳಿದ ಮಾತುಗಳು ಆತನ ಭೀಕರ ಅಪರಾಧದ ಕೃತ್ಯಗಳಿಂದಾಗಿ ಆತನಿಗಿದ್ದ ಭಯ ಮತ್ತು ಒಳನೋಟವನ್ನು ಪ್ರತಿಬಿಂಬಿಸುತ್ತವೆ.

ಒಂದು ಬಾರಿ ಸಮಾಜವಾದಿ ಪಕ್ಷದಿಂದ ಸಂಸದರಾಗಿದ್ದ ಅತೀಕ್ ಅವರು ಅಲಹಾಬಾದ್ ಪಶ್ಚಿಮ ಕ್ಷೇತ್ರದಿಂದ ಐದು ಬಾರಿ ಶಾಸಕ - ಒಮ್ಮೆ ಎಸ್‌ಪಿ, ಒಮ್ಮೆ ಅಪ್ನಾ ದಳ(ಎಸ್) ಮತ್ತು ಮೂರು ಬಾರಿ ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿದ್ದರು.

SCROLL FOR NEXT