ದೇಶ

ಉಮೇಶ್ ಪಾಲ್ ಹತ್ಯೆಯಲ್ಲಿ ಉಳಿದಿರುವ ಏಕೈಕ ಆರೋಪಿ ಗುಡ್ಡು ಮುಸ್ಲಿಂ ಕರ್ನಾಟಕದಲ್ಲಿ ಪತ್ತೆ, ಎನ್ಕೌಂಟರ್ ಭೀತಿ!

Vishwanath S

ಬೆಂಗಳೂರು: ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಬದುಕುಳಿದಿರುವ ಏಕೈಕ ದಾಳಿಕೋರ ಗುಡ್ಡು ಮುಸ್ಲಿಂ. ಉಮೇಶ್ ಪಾಲ್ ಹತ್ಯೆ ವೇಳೆ ಗುಡ್ಡು ಮುಸ್ಲಿಂ ಕಚ್ಚಾ ಬಾಂಬ್‌ಗಳನ್ನು ಎಸೆದಿದ್ದು ನಂತರ ಏಳು ಜನರ ತಂಡ ಗುಂಡಿಕ್ಕಿ ಹತ್ಯೆ ಮಾಡಿತ್ತು. 

ಉಮೇಶ್ ಪಾಲ್ ಮತ್ತು ಪೊಲೀಸ್ ಅಂಗರಕ್ಷಕರ ಮೇಲೆ ಗುಡ್ಡು ಮುಸ್ಲಿಂ ಕಚ್ಚಾ ಬಾಂಬ್‌ಗಳನ್ನು ಎಸೆದಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿತ್ತು. ನಂತರ ತಲೆ ಮರೆಸಿಕೊಂಡಿದ್ದ ಗುಡ್ಡು ಮುಸ್ಲಿಂ ಇದೀಗ ಕರ್ನಾಟಕದಲ್ಲಿ ಓಡಾಡುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಯಿಂಗಳಿಂದ ಪತ್ತೆ ಹಚ್ಚಲಾಗಿದೆ. ಆತನ ಬಂಧನಕ್ಕಾಗಿ ಉತ್ತರ ಪ್ರದೇಶ ಪೊಲೀಸರು ಕರ್ನಾಟಕ ಪೊಲೀಸರ ನೆರವು ಕೋರಿದ್ದಾರೆ. 

ಉಮೇಶ್ ಪಾಲ್ ಮತ್ತು ಇಬ್ಬರು ಪೊಲೀಸರನ್ನು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿರುವ ಅವರ ನಿವಾಸದ ಹೊರಗೆ ಗುಂಡಿಕ್ಕಿ ಕೊಂದ ನಂತರ ಎರಡು ತಿಂಗಳೊಳಗೆ ಮಾಫಿಯಾ ಡಾನ್, ರಾಜಕಾರಣಿ ಅತೀಕ್ ಅಹ್ಮದ್‌ಗೆ ಸಂಬಂಧಿಸಿದ ಆರು ಜನರು ಹತ್ಯೆ ಮಾಡಲಾಗಿದೆ. ಆರು ಮಂದಿಯ ಪಟ್ಟಿಯಲ್ಲಿ ಅತೀಕ್, ಅವರ ಪುತ್ರ ಅಸಾದ್, ಸಹಚರರಾದ ಅರ್ಬಾಜ್, ವಿಜಯ್ ಚೌಧರಿ ಅಲಿಯಾಸ್ ಉಸ್ಮಾನ್ ಮತ್ತು ಗುಲಾಮ್ ಹಸನ್ ಸೇರಿದ್ದಾರೆ.

2005ರ ಬಿಎಸ್‌ಪಿ ಶಾಸಕ ರಾಜುಪಾಲ್‌ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿ ಉಮೇಶ್‌ ಪಾಲ್‌ ಅವರನ್ನು ಫೆಬ್ರವರಿ 24ರಂದು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿರುವ ಅವರ ನಿವಾಸದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಮಾಜಿ ಸಂಸದ ಅತೀಕ್ ಅಹ್ಮದ್ ಅವರ ಕಿರಿಯ ಸಹೋದರ ಖಾಲಿದ್ ಅಜೀಂ ಅವರನ್ನು ಸೋಲಿಸುವ ಮೂಲಕ ಅಲಹಾಬಾದ್ (ಪಶ್ಚಿಮ) ವಿಧಾನಸಭಾ ಸ್ಥಾನವನ್ನು ಚುನಾವಣೆ ಗೆದ್ದ ತಿಂಗಳ ನಂತರ ರಾಜು ಪಾಲ್ ಅವರನ್ನು ಹತ್ಯೆ ಮಾಡಲಾಯಿತು.

ಉಮೇಶ್ ಪಾಲ್ ಹತ್ಯೆ ನಂತರ 2 ತಿಂಗಳಲ್ಲಿ 6 ಮಂದಿ ಹತ್ಯೆ
ಉಮೇಶ್ ಪಾಲ್ ಹತ್ಯೆ ಪ್ರಕರಣದ ಮೊದಲ ಎನ್‌ಕೌಂಟರ್ ಫೆಬ್ರವರಿ 27ರಂದು ಪ್ರಯಾಗ್‌ರಾಜ್‌ನಲ್ಲಿ ನಡೆದಿತ್ತು. ಉಮೇಶ್ ಪಾಲ್ ಹತ್ಯೆ ವೇಳೆ ಎಸ್‌ಯುವಿ ಕಾರು ಚಲಾಯಿಸಿದ ಅರ್ಬಾಜ್ ನನ್ನು ಎನ್ಕೌಂಟರ್ ಮಾಡಲಾಗಿತ್ತು. ಇದರ ನಂತರ ಮಾರ್ಚ್ 6 ರಂದು ಮತ್ತೆ ಪ್ರಯಾಗ್‌ರಾಜ್‌ನಲ್ಲಿ ವಿಜಯ್ ಅಲಿಯಾಸ್ ಉಸ್ಮಾನ್ ಎನ್‌ಕೌಂಟರ್ ಆಗಿತ್ತು. ಈ ಇಬ್ಬರ ಮೇಲೂ ಉಮೇಶ್ ಪಾಲ್ ಕೊಂದ ಆರೋಪವಿದೆ. ಏಪ್ರಿಲ್ 13ರಂದು, ಝಾನ್ಸಿಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಅಸದ್ ಮತ್ತು ಗುಲಾಮ್ ಅವರನ್ನು ಪೊಲೀಸರು ಹೊಡೆದುರುಳಿಸಿದರು. ಅತೀಕ್‌ನ ಎಲ್ಲಾ ಸಹಾಯಕರಾದ ಗುಡ್ಡು ಮುಸ್ಲಿಂ, ಅರ್ಮಾನ್ ಮತ್ತು ಸಬೀರ್ ಪರಾರಿಯಾಗಿದ್ದು, ಅವರ ತಲೆಯ ಮೇಲೆ 5 ಲಕ್ಷ ರೂಪಾಯಿ ಬಹುಮಾನವಿದೆ.

SCROLL FOR NEXT