ದೇಶ

ಕರ್ನಾಟಕದಲ್ಲಿ ಅಮುಲ್ ಹಾಲನ್ನು ಬಹಿಷ್ಕರಿಸುವ ಅಗತ್ಯವಿಲ್ಲ: ಗುಜರಾತ್ ಸಿಎಂ ಭೂಪೇಂದ್ರ ಪಟೇಲ್

Ramyashree GN

ಸೂರತ್: ಕರ್ನಾಟಕದಲ್ಲಿ ನಂದಿನಿ ವರ್ಸಸ್ ಅಮುಲ್ ಕದನದ ನಡುವೆ, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು, ದಕ್ಷಿಣದ ರಾಜ್ಯದಲ್ಲಿ ಅಮುಲ್ ಅನ್ನು ಬಹಿಷ್ಕರಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ತನ್ನ ಹಾಲನ್ನು ಮಾರಾಟ ಮಾಡುವುದಾಗಿ ಇತ್ತೀಚೆಗೆ ಅಮುಲ್ ಘೋಷಿಸಿದ ಬಳಿಕ ರಾಜ್ಯದಲ್ಲಿ ನಂದಿನಿ ಮತ್ತು ಅಮುಲ್ ನಡುವಿನ ಪರ-ವಿರೋಧದ ಚರ್ಚೆಗಳು ಪ್ರಾರಂಭವಾಗಿವೆ.

'ನನ್ನ ದೃಷ್ಟಿಯಲ್ಲಿ ಅಮುಲ್ ಅನ್ನು ಬಹಿಷ್ಕರಿಸುವ ಅಗತ್ಯವಿಲ್ಲ. ನೀವು ಏನು ಮಾಡಬೇಕೆಂದು ಬಯಸುತ್ತೀರೋ ಅದನ್ನು ಮಾಡುತ್ತಲೇ ಇರುವಿರಿ. ಅಮುಲ್ ಏನನ್ನಾದರೂ ಕಸಿದುಕೊಳ್ಳುತ್ತಿದ್ದರೆ, ಅದು ಪ್ರತಿಭಟನೆಯ ವಿಷಯವಾಗಿರುತ್ತದೆ' ಎಂದು ಪಟೇಲ್ ಸೋಮವಾರ ಹೇಳಿದರು.

ಕರ್ನಾಟಕದಲ್ಲಿ ಅಮುಲ್‌ಗೆ ಅವಕಾಶ ನೀಡುವ ಮೂಲಕ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ನಂದಿನಿಯನ್ನು 'ಕೊಲ್ಲಲು' ಬಯಸಿದೆ ಎಂದು ಕರ್ನಾಟಕದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜನತಾ ದಳ (ಜಾತ್ಯತೀತ) ಆರೋಪಿಸಿವೆ.

ಒಂದು ವೇಳೆ ಅಮುಲ್ ಉತ್ಪನ್ನಗಳ ಮಾರಾಟಕ್ಕೆ ಅನುವು ಮಾಡಿಕೊಟ್ಟರೆ, ಅಮುಲ್ ಅನ್ನು ಸ್ವಾಧೀನಪಡಿಸಿಕೊಳ್ಳಲು ದಾರಿ ಮಾಡಿಕೊಡಲು ನಂದಿನಿ ಉತ್ಪನ್ನಗಳ ಕೊರತೆಯನ್ನು ಸೃಷ್ಟಿಸಲಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಆದರೆ, ಕರ್ನಾಟಕದ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಈ ಆರೋಪವನ್ನು ನಿರಾಕರಿಸಿದ್ದು, ನಂದಿನಿಗೆ ಅಮುಲ್‌ನಿಂದ ಯಾವುದೇ ಬೆದರಿಕೆ ಇಲ್ಲ ಎಂದು ಹೇಳಿದೆ.

SCROLL FOR NEXT