ದೇಶ

ಇಸ್ರೋ ಮತ್ತೊಂದು ಮೈಲಿಗಲ್ಲು: ಸಿಂಗಪೂರ್ ನ 2 ಉಪಗ್ರಹಗಳು ಕಕ್ಷೆಗೆ

Srinivas Rao BV

ಚೆನ್ನೈ: ಇಸ್ರೋ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದು, ಸಿಂಗಪೂರ್ ನ 2 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. 

ಈ ಬಗ್ಗೆ ಸ್ವತಃ ಇಸ್ರೋ ಮಾಹಿತಿ ನೀಡಿದ್ದು,  ಇಸ್ರೋದ ವಾಣಿಜ್ಯ ವಿಭಾಗವಾಗಿರುವ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ ನ ಭಾಗವಾಗಿದ್ದ ಯೋಜನೆ  ಇದಾಗಿದೆ. 

22.5 ಗಂಟೆಗಳ ಕೌಂಟ್ ಡೌನ್ ನಲ್ಲಿ 44.4 ಮೀಟರ್ ಎತ್ತರದಲ್ಲಿ ರಾಕೆಟ್ ಮೊದಲ ಲಾಂಚ್ ಪ್ಯಾಡ್ ನಲ್ಲಿ ಯಶಸ್ವಿಯಾಗಿ ಚಿಮ್ಮಿದ್ದು, ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಪಗ್ರಹವನ್ನು ಉಡಾವಣೆ ಮಾಡಲಾಗಿತ್ತು.
 
ಪಿಎಸ್ಎಲ್ ವಿ ನಿಗದಿತ ಕಕ್ಷೆಗೆ ಎರಡೂ ಉಪಗ್ರಹಗಳನ್ನು ಸೇರಿಸಲಾಗಿದೆ ಎಂದು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ತಿಳಿಸಿದ್ದಾರೆ. ಇದು ಪಿಎಸ್ಎಲ್ ವಿಯ 57 ನೇ ಮಿಷನ್ ಆಗಿದ್ದು ಇದರಲ್ಲಿ ಯಶಸ್ಸು ಸಾಧಿಸುವ ಮೂಲಕ ತನ್ನ ಹೆಚ್ಚಿನ ವಿಶ್ವಾಸಾರ್ಹತೆ ಮತ್ತು ಅಂತಹ ವರ್ಗದ ವಾಣಿಜ್ಯ ಕಾರ್ಯಾಚರಣೆಗಳಿಗೆ ಅದರ ಸೂಕ್ತತೆಯನ್ನು ಪ್ರದರ್ಶಿಸಿದೆ" ಎಂದು ಮಿಷನ್ ಕಂಟ್ರೋಲ್ ಸೆಂಟರ್‌ನಿಂದ ಸೋಮನಾಥ್ ಹೇಳಿದ್ದಾರೆ.

SCROLL FOR NEXT